ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಂದಾಗಿ ಕಾಂಗ್ರೆಸ್ ಕಡೆಗೆ ಮತಗಳು ಶಿಫ್ಟ್ ಆಗಿವೆ ಎಂದು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಹೇಳಿದ್ದಾರೆ.ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತಾಗಿ ಪ್ರತಿಕ್ರಿಯಿಸಿದ ಅವರು "ಕಳೆದ ಅವಧಿ ಶೇ 13 ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಗೆ ವರ್ಗಾವಣೆಗೊಂಡಿವೆ" ಎಂದು ಹೇಳಿದರು.
"ನನಗೆ ಮತ ಹಾಕಿ ಎಂದು ಜನರ ಬಳಿ ಯಾರು ಕೇಳಿಲ್ಲ.ಅವರು ನಮಗೆ ಮತವನ್ನು ಚಲಾಯಿಸಿದ್ದಾರೆ ಅದಕ್ಕೆ ಕಾರಣ ನಮ್ಮ ದಾಖಲೆ ಹಾಗಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಕೇಜ್ರಿವಾಲ್ ಅವರ ಆಡಳಿತ ಕಾರಣ ಎಂದು ಶೀಲಾ ದೀಕ್ಷಿತ್ ಹೇಳಿದರು.
"ಅವರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಪ್ರತಿಯೊಬ್ಬರಿಗೂ ಯಾವುದೇ ಪಕ್ಷಕ್ಕೆ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ದೆಹಲಿಯ ಜನರು ಕೇಜ್ರಿವಾಲ್ ಅವರ ಆಡಳಿತ ಮಾದರಿಗೆ ಮನಸೋತಿಲ್ಲವೆಂದರು. ಅಲ್ಲದೆ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ದೆಹಲಿ ವಿಧಾನಸಭೆಯಲ್ಲಿಯೂ ಕೂಡ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
"ನಾವು ಗೆಲ್ಲುತ್ತೇವೆ ಎನ್ನುವ ಬಗ್ಗೆ ಯಾವುದೇ ಸಂದೇಹವೂ ಇಲ್ಲ. ಅದು ಮುಸ್ಲಿಂ, ಸಿಖ್ ಅಥವಾ ಯಾರೆ ಆಗಲಿ ಪ್ರತಿ ಮತದಾರರೂ ನಮಗೆ ಮುಖ್ಯ. ನಾವು ಧರ್ಮದ ಆಧಾರದ ಮೇಲೆ ಯಾರನ್ನೂ ತಾರತಮ್ಯ ಮಾಡುವುದಿಲ್ಲ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಸಮಾಜದ ಎಲ್ಲಾ ಇತರ ವಿಭಾಗಗಳು ನಮಗೆ ಬಲವಾಗಿ ಬೆಂಬಲ ನೀಡಿವೆ "ಎಂದು ಅವರು ಹೇಳಿದರು.