ತ್ರಿಪುರಾದಲ್ಲಿ ಲೆನಿನ್ ಮೂರ್ತಿ ಧ್ವಂಸಗೊಳಿಸಿ ಅಟ್ಟಹಾಸ ಮೆರೆದ ಬಿಜೆಪಿ ಕಾರ್ಯಕರ್ತರು

    

Last Updated : Mar 6, 2018, 06:04 PM IST
ತ್ರಿಪುರಾದಲ್ಲಿ ಲೆನಿನ್ ಮೂರ್ತಿ ಧ್ವಂಸಗೊಳಿಸಿ ಅಟ್ಟಹಾಸ ಮೆರೆದ ಬಿಜೆಪಿ ಕಾರ್ಯಕರ್ತರು  title=

ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಟ್ಟಹಾಸ ಮೆರೆದಿರುವ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು, ಬೆಲೋನಿಯಾ ಕಾಲೇಜಿನ ವ್ರುತ್ತದಲ್ಲಿದ್ದ ರಷ್ಯಾದ ಕ್ರಾಂತಿಕಾರಿ ನಾಯಕ ಲೆನಿನ್ ರವರ ಮೂರ್ತಿಯನ್ನು ಬುಲ್ಡೋಜರ್ ನಿಂದ ಕೆಡವಿ ನೆಲಸಮಗೊಳಿಸಿದ್ದಾರೆ.

 ಬುಲ್ಡೋಜರ್ ನಿಂದ ಲೆನಿನ್ ಮೂರ್ತಿಯನ್ನು ನೆಲಸಮಗೊಳಿಸುವ ದೃಶ್ಯವು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತರು ವೃತ್ತದ ಬಳಿ ಸಮೂಹಗೊಂಡು ಮೂರ್ತಿಯ ನೆಲಸಮಗೊಳಿಸುವ ವೇಳೆಯಲ್ಲಿ ಕೇಕೆ ಹಾಕುತ್ತಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈ ಘಟನೆ ನಡೆದಿರುದಕ್ಕೆ ರಾಷ್ಟ್ರವ್ಯಾಪಿ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿರುವ ಹಿರಿಯ ಕಮುನಿಸ್ಟ್ ಪಕ್ಷದ ನಾಯಕ ಡಿ ರಾಜಾ "ಈ ಘಟನೆಯನ್ನು ಪ್ರಜಾಪ್ರಭುತ್ವದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮುಂದುವರೆದು  "ನಾವು ಬಹುಪಕ್ಷ ಪದ್ದತಿಯನ್ನು ಪಾಲಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಕೆಲವು ಪಕ್ಷಗಳು ಸೋಲಬಹುದು ಅಥವಾ ಗೆಲ್ಲಬಹುದು, ಇದಕ್ಕೆ ಕಾನೂನನ್ನು ಕೈಗೆ ತೆಗೆದುಕೊಂಡು ಲೆನಿನ್ ಮೂರ್ತಿಯನ್ನು ಭಗ್ನಗೊಳಿಸುವಂತಹ ಹಿಂಸಾಚಾರಕ್ಕೆ ಇಳಿಯುವುದಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆಗೆ ಸಿಪಿಎಂನ ನಾಯಕ ಸೀತಾರಾಂ ಯೆಚೂರಿ ಮಾತನಾಡಿ "ತ್ರಿಪುರಾದಲ್ಲಿನ ಹಿಂಸಾಚಾರವು ಬಿಜೆಪಿ ಮತ್ತು ಸಂಘ ಪರಿವಾರದ ಇಚ್ಛೆಯನ್ನು ತೋರಿಸುತ್ತದೆ. ಇದಕ್ಕೆ ಖಂಡಿತಾ ತ್ರಿಪುರಾದ ಜನತೆ ಉತ್ತರಿಸುತ್ತಾರೆ"ಎಂದು ತಿಳಿಸಿದರು. ಈ ಘಟನೆಯನ್ನು ಜೆಡಿಯು ಕೂಡಾ ಖಂಡಿಸಿದ್ದು, ಸಂಸದ ಹರಿವಂಶ ಮಾತನಾಡಿ "ಈ ದೇಶದ ಜನರು ಹಲವಾರು ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟವರು,ಇಲ್ಲಿ ಎಲ್ಲ ಸಿದ್ದಾಂತಗಳಿಗೂ ಅವಕಾಶವಿದೆ,ಲೆನಿನ್ ರವರು 1917 ರಲ್ಲಿ ಬಡವರಿಗಾಗಿ ಕ್ರಾಂತಿ ಮಾಡಿದವರು ಎಂದು ತಿಳಿಸಿದರು.  

Trending News