Andhra Pradesh New Capital: ಆಂಧ್ರಪ್ರದೇಶದ ಹೊಸ ರಾಜಧಾನಿಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ವಿಶಾಖಪಟ್ಟಣಂ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಅವರು ಘೋಷಿಸಿದ್ದಾರೆ. “ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ಆಹ್ವಾನಿಸುತ್ತೇನೆ ಮಾತ್ರವಲ್ಲ. ನಾನು ಕೂಡಾ ವಿಶಾಖಪಟ್ಟಣಂಗೆ ಶಿಫ್ಟ್ ಆಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಅಂತಾ ರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ.
2014 ರಲ್ಲಿ ರಾಜ್ಯ ವಿಭಜನೆಯ ನಂತರ ಮುಂದಿನ ಹತ್ತು ವರ್ಷಗಳ ಅವಧಿಗೆ ಹೈದರಾಬಾದ್ ಅನ್ನು ಎರಡೂ ರಾಜ್ಯಗಳ ರಾಜಧಾನಿ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2024ರಲ್ಲಿ ಹೈದರಾಬಾದ್ ಅನ್ನು ತೆಲಂಗಾಣಕ್ಕೆ ಬಿಟ್ಟುಕೊಡಲು ನಿರ್ಧರಿಸಲಾಗಿತ್ತು. ಇದಾದ ಬಳಿಕ ಅಮರಾವತಿಯನ್ನು ತನ್ನ ರಾಜಧಾನಿ ಎಂದು ಘೋಷಿಸಿತ್ತು. ಆದರೆ ಇದೀಗ ವಿಶಾಖಪಟ್ಟಣವನ್ನು ತನ್ನ ಹೊಸ ರಾಜಧಾನಿ ಎಂದು ಸಿಎಂ ಘೋಷಿಸಿದ್ದಾರೆ.
#WATCH | "Here I am to invite you to Visakhapatnam which will be our capital in the days to come. I will also be shifting to Visakhapatnam in the months to come": Andhra Pradesh CM YS Jagan Mohan Reddy at International Diplomatic Alliance meet in Delhi pic.twitter.com/wANqgXC1yP
— ANI (@ANI) January 31, 2023
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ: ಅಸಾರಾಂ ಬಾಪು ದೋಷಿ, ಕೋರ್ಟ್ ಮಹತ್ವದ ತೀರ್ಪು
ವಿಶಾಖಪಟ್ಟಣವು ಆಂಧ್ರದ ಹೊಸ ರಾಜಧಾನಿ:
1.2014 ರಲ್ಲಿ ರಾಜ್ಯ ವಿಭಜನೆಯ ನಂತರ (ತೆಲಂಗಾಣ ಮತ್ತು ಆಂಧ್ರ) ರಾಜಧಾನಿಯನ್ನು ಹೈದರಾಬಾದ್‌ನಿಂದ ಅಮರಾವತಿಗೆ ಬದಲಿಸಲಾಗಿತ್ತು. ನಂತರ ವಿಶಾಖಪಟ್ಟಣವನ್ನು ಆಂಧ್ರದ ಮೂರನೇ ರಾಜಧಾನಿ ಎಂದು ಪರಿಗಣಿಸಲಾಗಿತ್ತು.
2.ಕಳೆದ ಮೂರು ವರ್ಷಗಳಿಂದ ಎರಡಂಕಿಯ ಬೆಳವಣಿಗೆಯನ್ನು ಸಾಧಿಸುತ್ತಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದಾಗಿದೆ.
3. 2021 ರಲ್ಲಿ, ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರವು ವಿವಾದಾತ್ಮಕ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯ್ದೆಯನ್ನು ಹಿಂತೆಗೆದುಕೊಂಡಿತು. ಅದು ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿತ್ತು.
4. ರಾಜ್ಯ ಸರ್ಕಾರವು ಈ ಹಿಂದೆ ಮೂರು ರಾಜಧಾನಿಗಳನ್ನು ಹೊಂದಬಹುದು ಎಂಬ ಸುಳಿವು ನೀಡಿತ್ತು. ವಿಶಾಖಪಟ್ಟಣಂ ಕಾರ್ಯನಿರ್ವಾಹಕ ರಾಜಧಾನಿ, ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ಹೇಳಿತ್ತು.
ಇದನ್ನೂ ಓದಿ :Trending News: ಶಾಲಾ ಬಾಲಕಿ ಮೇಲೆ ಎರಗಿ ಕಚ್ಚಿ ಕಚ್ಚಿ ಎಳೆದಾಡಿದ ವಿಶ್ವದ ಭಯಾನಕ ಶ್ವಾನ ಪಿಟ್ಬುಲ್… ಮುಂದೇನಾಯ್ತು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.