ಭಾರತ-ಪಾಕ್ ಗಡಿಯಲ್ಲಿ ಸೈನಿಕರ ಜಬರ್ದಸ್ತ್ ಡಾನ್ಸ್, ವಿಡಿಯೋ ಹಂಚಿಕೊಂಡ Virendra Sehwag

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅನ್ನು ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಸೈನಿಕರ ಮನೋಭಾವವನ್ನು ಹಾಡಿಹೊಗಳಿದ್ದಾರೆ.  

Last Updated : Jul 19, 2020, 01:36 PM IST
ಭಾರತ-ಪಾಕ್ ಗಡಿಯಲ್ಲಿ ಸೈನಿಕರ ಜಬರ್ದಸ್ತ್ ಡಾನ್ಸ್, ವಿಡಿಯೋ ಹಂಚಿಕೊಂಡ Virendra Sehwag title=

ನವದೆಹಲಿ: ಭಾಂಗ್ರಾ ನೃತ್ಯಕ್ಕೆ ಭಾರತೀಯ ಸೈನಿಕರು ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಭಾರತ-ಪಾಕ್ ಗಡಿಯ ಸಮೀಪದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಮಾಜಿ ವೀರೇಂದ್ರ ಸೆಹ್ವಾಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ, ಇಂಡೋ-ಪಾಕ್ ಗಡಿಗೆ ಹತ್ತಿರವಿರುವ ಸೈನಿಕರ ಭಂಗ್ರಾ ಅದ್ಭುತವಾಗಿದೆ ಎಂದು ಅವರು ಕ್ಯಾಪ್ಶನ್ ಬರೆದಿದ್ದಾರೆ. ಆದರೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಂತಹ ಸವಾಲಿನ ಸಂದರ್ಭಗಳಲ್ಲಿಯೂ ಈ ಜನರು ಎಷ್ಟು ಸಂತೋಷವಾಗಿದ್ದಾರೆ. ಅವರ ಧೈರ್ಯಕ್ಕೆ ನನ್ನ ನಮನ ಎಂದು ವಿರು ಹೇಳಿದ್ದಾರೆ.

ಈ ವೀಡಿಯೊಗೆ ಇದುವರೆಗೆ 2 ಲಕ್ಷ 51 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ. ಅಷ್ಟೇ ಅಲ್ಲ ಕಾಮೆಂಟ್ಸ್ ಹಾಗೂ ಲೈಕ್ ಗಳ ಸರಣಿ ಕೂಡ ಮುಂದುವರೆದಿದೆ. ಈ ವೀಡಿಯೊದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಜವಾನರನ್ನು ಮತ್ತು ಅವರ ಉತ್ಸಾಹವನ್ನು ಹೊಗಳಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಮಾಧ್ಯಮ ಬಳಕೆದರರೊಬ್ಬರು, "ವೀರ ಯೋಧರಿಗೆ ಜೈ, ಭಾರತ ಮಾತೆಗೆ ಜೈ' ಎಂದಿದ್ದಾರೆ. ಮತ್ತೋರ್ವ ಬಳಕೆದಾರರು - "ಇವರು ಎಲ್ಲೇ ಇದ್ದರೂ ಕೂಡ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಗಡಿಭಾಗದಲ್ಲಿ ಸುಮಾರು 4 ರಿಂದ 5 ಸೈನಿಕರಿದ್ದು, ಇವರು ಖ್ಯಾತ ಪಂಜಾಬಿ ಸೂಪರ್ ಹಿಟ್ ಸಾಂಗ್ ಆಗಿರುವ 'ದಾರು ಬದ್ನಾಮ್ ಕರ್ ದಿ' ಹಾಡಿಗೆ ಭಾಂಗ್ರ ನೃತ್ಯ ಪ್ರದರ್ಶಿಸುವುದನ್ನು ನೀವು ಗಮನಿಸಬಹುದು. ಈ ಸುಂದರ ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅಪಾರ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದು, ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಡಿಭಾಗದಲ್ಲಿ ಭಾರತೀಯ ಸೇನಾ ಜವಾನರು ಐಸ್ ನಿಂದ ತಯಾರಿಸಲಾದ ಕೇಕ್ ಕಟ್ ಮಾಡಿರುವ ಕುರಿತಾದ ವಿಡಿಯೋ ಭಾರಿ ವೈರಲ್ ಆಗಿತ್ತು. 
 

Trending News