Viral Video: ನೀರಿನಲ್ಲಿ ಅದ್ಭುತವಾಗಿ ಈಜಿ ನೋಡುಗರ ಹುಬ್ಬೇರಿಸಿದ ಮೊಲ..!

ಮೊಲವೊಂದು ಸಂತೋಷದಿಂದ ನೀರಿನಲ್ಲಿ ತೇಲಾಡುತ್ತಾ ಈಜಾಡಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

Written by - Puttaraj K Alur | Last Updated : Aug 30, 2021, 08:23 PM IST
  • ನೀರಿನಲ್ಲಿ ಸಲಿಸಾಗಿ ಈಜಾಡಿ ನೋಡುಗರ ಹುಬ್ಬೇರಿಸಿದ ಮುದ್ದು ಮೊಲ
  • ಅದ್ಭುತವಾಗಿ ನೀರಿನಲ್ಲಿ ಈಜಾಡಿದ ಮೊಲವನ್ನು ನೋಡಿ ಅನೇಕರಿಂದ ಅಚ್ಚರಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಮೊಲದ ವಿಡಿಯೋ
Viral Video: ನೀರಿನಲ್ಲಿ ಅದ್ಭುತವಾಗಿ ಈಜಿ ನೋಡುಗರ ಹುಬ್ಬೇರಿಸಿದ ಮೊಲ..! title=
ನೀರಿನಲ್ಲಿ ಸಲಿಸಾಗಿ ಈಜಾಡಿದ ಮುದ್ದು ಮೊಲ (Photo Courtesy: @India.com)

ನವದೆಹಲಿ: ಮೊಲಗಳು ಯಾವಾಗಲೂ ನೀರಿನಿಂದ ದೂರವಿರುತ್ತವೆ ಎಂದೇ ಬಹುತೇಕರು ಊಹಿಸಿರುತ್ತಾರೆ. ಏಕೆಂದರೆ ಮೊಲಕ್ಕೆ ನೀರು ಎಂದರೆ ಭಯ ಅಂತಾ ತಿಳಿದುಕೊಂಡಿರುತ್ತಾರೆ. ನೀರಿನಲ್ಲಿ ಮೊಲಗಳು ಈಜು(Rabbit Swimming)ವುದು ಕೂಡ ವಿರಳ. ಸಾಮಾನ್ಯವಾಗಿ ಮೊಲಗಳು ಕಾಡು ಮತ್ತು ನಾಡಿನಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಮೊಲ ಸಾಕಾಣಿಕೆಯೂ ಹೆಚ್ಚಾಗಿದೆ. ನೆಲ ವಾಸಿಗಳಾಗಿರುವ ಮೊಲಗಳು ಅಪಾಯದಲ್ಲಿದ್ದಾಗ ಮಾತ್ರ ಈಜುತ್ತವೆ. ಹೀಗಾಗಿ ಮೊಲಗಳು ಈಜುವ ದೃಶ್ಯ ನಮಗೆ ಕಂಡುಬರುವುದು ಅಪರೂಪ ಎಂದೇ ಹೇಳಬಹುದು.

ಇತ್ತೀಚಿಗೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಇದರಲ್ಲಿ ಬಿಳಿ ಮೊಲವೊಂದು ಸಂತೋಷದಿಂದ ನೀರಿನಲ್ಲಿ ತೇಲಾಡುತ್ತಾ ಈಜಾಡುವುದನ್ನು ಕಾಣಬಹುದು. ಮೊಲವು ಸಖತ್ ಆಗಿ ಈಜಾಡಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಅನೇಕರು ಮೊದಲ ಬಾರಿಗೆ ಮೊಲ ಈಜುವುದನ್ನು ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏನಿದು ಹೊಸ 'ಬಿಎಚ್' ಭಾರತ್ ಸರಣಿ?: ಪ್ರಯೋಜನೆಗಳು, ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ…

Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ‘ಮೊಲಗಳು ಕೂಡ ವೇಗವಾಗಿ ಈಜಬಲ್ಲವು’ ಎಂದು ಕ್ಯಾಪ್ಶನ್ ನೀಡಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್(Viral Video) ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.  ‘ಮೊಲಗಳು ಕೂಡ ಈಜುತ್ತವೆ! ಆದರೆ ಅಪರೂಪ’ ಅಂತಾ ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿರುವ ಮತ್ತೊಬ್ಬರು, ‘ಮೊಲಗಳು ಕೂಡ ಈಜುತ್ತವೆ ಎಂಬುದನ್ನು ನೋಡಿ ಸಂಪೂರ್ಣವಾಗಿ ನನ್ನ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡೆ. ಇದು ಅದ್ಭುತ!’ ಎಂದಿದ್ದಾರೆ.  

ಇದನ್ನೂ ಓದಿ: Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ

ಇನ್ನು ಅನೇಕರು ಈಜಾಡಿರುವ ಮೊಲ(Rabbit)ದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮೊಲವನ್ನು ನೀರಿಗೆ ಹೋಗುವಂತೆ ಎಂದಿಗೂ ಒತ್ತಾಯಿಸಬಾರದು. ಏಕೆಂದರೆ ಅದು ಅವುಗಳಿಗೆ ತೀವ್ರ ಆಘಾತವನ್ನುಂಟುಮಾಡಬಹುದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮುದ್ದಿನ ಮೊಲಗಳಿಗೆ ಸ್ನಾನ ಮಾಡಿಸದಿರುವುದು ಅಥವಾ ಅವುಗಳನ್ನು ಈಜುಕೊಳದಲ್ಲಿ ಹಾಕದಿರುವುದು ಉತ್ತಮ. ಏಕೆಂದರೆ ನೀರಿನಲ್ಲಿ ಮುಳುಗಿ ಅವುಗಳಿಗೆ ತೊಂದರೆಯಾಗುತ್ತದೆ ಅಂತಾ ಕೆಲವರು ಬರೆದುಕೊಂಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News