ಹಿಸಾರ್: ಹರಿಯಾಣದ ಹಿಸಾರ್ ಜಿಲ್ಲೆಯ ಬಾರ್ವಾಲಾ ಪ್ರದೇಶದ ಬಾಲಾಕ್ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ತರಗತಿಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹಿಸಾರ್ ಜಿಲ್ಲೆಯ ಬಾರ್ವಾಲಾ ಪ್ರದೇಶದ ಬಾಲಾಕ್ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರವೂ ಎಂದಿನಂತೆಯೇ ಪಾಠ ಪ್ರವಚನಗಳು ನಡೆದಿದ್ದವು. ತರಗತಿಯಲ್ಲಿ ಮಕ್ಕಳೂ ಸಹ ಬಹಳ ಶಿಸ್ತಿನಿಂದ, ಏಕಾಗ್ರತೆಯಿಂದ ಪಾಠ ಕೇಳುತ್ತಿದ್ದರು. ಇದೇ ವೇಳೆ ತರಗತಿಯೊಳಗೆ ಇದ್ದಕ್ಕಿದ್ದಂತೆ ಬಂದ ಹಾವನ್ನು ಕಂಡು ಹೆದರಿದ ಮಕ್ಕಳನ್ನು ಕೂಡಲೇ ಶಿಕ್ಷಕರು ತರಗತಿಯಿಂದ ಹೊರಗೆ ಕಳುಹಿಸಿದರು.
ಶಿಕ್ಷಕರು ಹಾವನ್ನು ಹಿಡಿದ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಬಳಿಕ, ತರಗತಿಯೊಳಗೆ ಬಂದ ಮುಖ್ಯೋಪಾಧ್ಯಾಯ ಈಶ್ವರ್ ಸಿಂಗ್ ಮೊಕೆ, ಮೊದಲು ಕೋಲಿನ ಸಹಾಯದಿಂದ ಹಾವನ್ನು ಒತ್ತಿ ಹಿಡಿದು, ಬಳಿಕ ಅದನ್ನು ಕೈಯಲ್ಲೇ ಹಿಡಿದು ಶಾಲೆಯ ಹೊರಗೆ ಬಿಟ್ಟಿದ್ದಾರೆ. ತಮ್ಮ ಮೇಷ್ಟ್ರು ಕೈಯಲ್ಲೇ ಹಾವನ್ನು ಹಿಡಿದದ್ದನ್ನು ಕಂಡ ವಿದ್ಯಾರ್ಥಿಗಳು ಅವರ ಧೈರ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.