ಬಾಗಪತ್: Viral Video - ಉತ್ತರ ಪ್ರದೇಶದ (UP) ಬಾಗ್‌ಪತ್‌ನಲ್ಲಿ (Bagpat) ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವದಲ್ಲಿ, ಚಲಿಸುತ್ತಿದ್ದ ಆಟೋಗೆ ನೀರಿನಿಂದ ತುಂಬಿದ ಬಲೂನ್‌ಗೆ ಡಿಕ್ಕಿ ಹೊಡೆದಿದ್ದು, ಆಟೋ ಪಲ್ಟಿಯಾಗಿದೆ. ಆಟೋ ಪಲ್ಟಿಯಾದಾಗ ಆಟೋದಲ್ಲಿ ಸವಾರರಿದ್ದರು ಎನ್ನಲಾಗಿದೆ. ಸದ್ಯ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Trending News) ಆಗುತ್ತಿದೆ.
ನಡು ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಆಟೋ
ಮಾಹಿತಿಯ ಪ್ರಕಾರ, ಈ ಘಟನೆಯು ಬಾಗ್‌ಪತ್‌ನ ದೆಹಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ (Delhi-Saharanpur Highway) ನಡೆದಿದೆ. ಹೋಳಿ (Holi) ಆಡುತ್ತಿದ್ದ ವೇಳೆ ಯುವಕರು ನೀರು ತುಂಬಿದ ಬಲೂನ್ ಅನ್ನು ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ಮೇಲೆ ಎಸೆದಿದ್ದು, ಪರಿಣಾಮವಶಾತ್, ಆಟೋ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.
पानी का गुब्बारा मारने पर पलटा ऑटो, सोशल मीडिया पर वायरल हुआ वीडियो#ViralVideo #Holi pic.twitter.com/83G9QhwHbk
— Zee News (@ZeeNews) March 20, 2022
ಇದನ್ನೂ ಓದಿ-ತೆಲುಗು ಗಾಯಕ ಸಿದ್ದ್ ಶ್ರೀರಾಮ್ ಮ್ಯಾಜಿಕಲ್ ವಾಯ್ಸ್‌ನಲ್ಲಿ ಮೂಡಿಬಂದ ಕನ್ನಡ ಹಾಡು!
ಆಟೋದಲ್ಲಿದ್ದವರಿಗೆ ಗಾಯ
ಆಟೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಘಟನೆ ನಡೆದಾಗ ಹಿಂದಿನಿಂದ ಯಾವುದೇ ದೊಡ್ಡ ವಾಹನ ಬರುತ್ತಿರಲಿಲ್ಲ, ಇಲ್ಲದಿದ್ದರೆ ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಬಲೂನ್ ಡಿಕ್ಕಿ ಹೊಡೆದ ಕೂಡಲೇ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ-Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ
ಈ ವಿಡಿಯೋ ಕಾಠಾ ಗ್ರಾಮಕ್ಕೆ ಸಂಬಂಧಿಸಿದ್ದಾಗಿದೆ
ಅಜಿತ್ ಎಂಬ ಯುವಕನ ಫೇಸ್‌ಬುಕ್ ಐಡಿಯಿಂದ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಕೊತ್ವಾಲಿ ನಗರ ಕಾಠಾ ಗ್ರಾಮಕ್ಕೆ ಸಂಬಂಧಿಸಿದ್ದಾಗಿದೆ ಎನ್ನಲಾಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ-Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.