ನವದೆಹಲಿ: ಕೇರಳ(Kerala)ದ ಕಣ್ಣೂರಿನಲ್ಲಿ (Kannur) ಕೆಲ ದಿನಗಳ ಹಿಂದೆ ನಡೆದಿರುವ ಭೀಕರ ಅಪಘಾತವೊಂದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಅಪಘಾತದಲ್ಲಿ 9 ವರ್ಷದ ಬಾಲಕನೊಬ್ಬ ಪವಾಡವೆಂಬಂತೆ ಪಾರಾಗಿದ್ದಾನೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಒಂದು ಕ್ಷಣ ಗಾಬರಿ ಬೀಳುತ್ತಾರೆ. ಏಕೆಂದರೆ ಇದು ಎದೆ ಝಲ್ಲೆನ್ನಿಸುವ ವಿಡಿಯೋ ಆಗಿದೆ.
ವಿಡಿಯೋದಲ್ಲಿ ಏನಿದೆ..?
KANNUR BOY'S MIRACULOUS ESCAPE...
In a miraculous escape, a 9 year old boy ended up without any serious injuries after his cycle was hit by a state transport bus in #Kerala's #Kannur. WATCH!
#Accident #BicycleAccident #BusAccident #RoadSafety #KSRTC pic.twitter.com/QiqYoZxI12— Safa 🇮🇳 (@safaperaje) March 24, 2022
ವೇಗವಾಗಿ ಸೈಕಲ್(Bicycle) ಚಲಾಯಿಸಿಕೊಂಡು ಬಂದ ಬಾಲಕನೊಬ್ಬ ಆ ಕಡೆ.. ಈ ಕಡೆ.. ನೋಡದೆ ಕಚ್ಚಾ ರಸ್ತೆಯಿಂದ ಡಾಂಬರ್ ರಸ್ತೆಗೆ ನುಗ್ಗಿದ್ದಾನೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಬೈಕ್ಗೆ ಬಾಲಕನ ಸೈಕಲ್ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್ ರಸ್ತೆ ಮಧ್ಯೆ ಬಿದ್ದಿದ್ದರೆ, ಬಾಲಕ ಹಾರಿ ಹೋಗಿ ಮುಂಭಾಗದ ಪ್ರದೇಶದಲ್ಲಿ ಬಿದ್ದಿದ್ದಾನೆ. ಬಾಲಕನ ಸೈಕಲ್ ಗುದ್ದಿದ್ದ ಬೈಕ್ ಹಿಂದೆಯೇ ಕೇರಳ ಸಾರಿಗೆ ಇಲಾಖೆ ಬಸ್(Kerala Bus)ಕೂಡ ವೇಗವಾಗಿ ಬಂದಿದೆ. ಹೀಗಾಗಿ ರಸ್ತೆ ಮಧ್ಯೆ ಬಿದ್ದಿದ್ದ ಸೈಕಲ್ ಮೇಲೆ ಬಸ್ ಹರಿದಿದೆ. ಪರಿಣಾಮ ಬಸ್ನಡಿ ಸಿಲುಕಿ ಬಾಲಕನ ಸೈಕಲ್ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: Scary! ನೆಟ್ಟಿಗರ ಗಮನಸೆಳೆದ ಎರಡು ತಲೆ, ನೀಲಿ ನಾಲಿಗೆ ಹೊಂದಿರುವ ಹಲ್ಲಿ
ಅದೃಷ್ಟವೆಂಬಂತೆ ಬಾಲಕ(Miraculous Escape)ನಿಗೆ ಸಣ್ಣಪುಟ್ಟ ತೆರಚಿದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಬಾಲಕನ ಅದೃಷ್ಟ ನೆಟ್ಟಗಿತ್ತು, ಆತನಿಗೆ ಇದು ಮರುಜನ್ಮ ಅಂತಾ ಮಾತನಾಡಿಕೊಂಡಿದ್ದಾರೆ. ಒಂದು ವೇಳೆ ಸೈಕಲ್ ಜೊತೆಗೆ ಬಾಲಕ ಕೂಡ ರಸ್ತೆ ಮಧ್ಯೆಯೇ ಬಾಲಕ ಕೂಡ ಬಿದ್ದಿದ್ದರೆ, ಆತ ಬಸ್ ನ ಚಕ್ರದಡಿ ಸಿಲುಕಿ ಅಪ್ಪಚ್ಚಿಯಾಗುತ್ತಿದ್ದ. ಆದರೆ ಆತನ ಆಯಸ್ಸು ಗಟ್ಟಿಗಿತ್ತು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಅಪಘಾತದ ದೃಶ್ಯ ನೋಡಲು ತುಂಬಾ ಭಯಾನಕವಾಗಿದೆ. ಈ ದೃಶ್ಯಾವಳಿ ಸ್ಥಳೀಯ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸರೆಯಾಗಿದೆ. ಶೇರ್ ಆದ ಕೂಡಲೇ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ: OMG! ಕಳೆದ 40 ವರ್ಷಗಳಿಂದ ಒಂದು ದಿನವೂ ನಿದ್ದೆಯೇ ಮಾಡಿಲ್ಲವಂತೆ ಈ ಮಹಿಳೆ- ವೈರಲ್ ಸುದ್ದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.