ನವದೆಹಲಿ: ಮದುವೆ ಸಮಾರಂಭ ಎಂದರೆ ಅಲ್ಲಿ ಸಂಭ್ರಮವು ಮನೆಮಾಡಿರುತ್ತದೆ. ಮದುವೆ ಮನೆಯ ತುಂಬಾ ಬಂಧು-ಬಳಗ, ಸ್ನೇಹಿತರು, ಸಂಬಂಧಿಕರ ದಂಡೇ ನೆರದಿರುತ್ತದೆ. ಹೆಚ್ಚಿನ ಮದುವೆಗಳು ಅತ್ಯಂತ-ಸಡಗರ ಸಂಭ್ರಮದಿಂದಲೇ ನಡೆಯುತ್ತವೆ. ಆದರೆ ಕೆಲವು ಮದುವೆಗಳಲ್ಲಿ ಮಾತ್ರ ಇವೆಲ್ಲ ಉಲ್ಟಾ ಆಗಿರುತ್ತದೆ. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗಲೇ ವಧು ತಗಾದೆ ತೆಗೆಯುತ್ತಾಳೆ. ಮದುವೆಗೆ ಎಲ್ಲ ತಯಾರಿ ನಡೆದಿರುತ್ತದೆ, ವಧುವೇ ನಾಪತ್ತೆಯಾಗಿರುತ್ತಾಳೆ. ಕೆಲವು ಮದುವೆಗಳಲ್ಲಿ ವರನೇ ಎಸ್ಕೇಪ್ ಆಗಿರುತ್ತಾನೆ.
ಹುಡುಗ-ಹುಡಗಿ ಯಾರನ್ನೋ ಇಷ್ಟಪಟ್ಟಿರುತ್ತಾರೆ, ಇನ್ನಾರನ್ನೋ ಮದುವೆಯಾಗಲು ಒಲ್ಲದ ಮನಸ್ಸಿನಿಂದ ಒಪ್ಪಿರುತ್ತಾರೆ. ಸಾಲ-ಸೋಲ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಮದುವೆಗೆ ಅದ್ದೂರಿ ಸಿದ್ಧತೆಯಾಗಿರುವಾಗಲೇ ಏನೋ ಒಂದು ಅನಾಹುತ ನಡೆದುಬಿಟ್ಟಿರುತ್ತದೆ. ಇದು ಪೋಷಕರಿಗೆ ಆಘಾತವನ್ನುಂಟು ಮಾಡುತ್ತದೆ. ಅದೇ ರೀತಿಯ ಒಂದು ಮದುವೆ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರನೊಬ್ಬ ವಧು ನೋಡಿದ ಕೂಡಲೇ ಗಾಬರಿಯಾಗಿ ಮದುವೆ ಮಂಟಪ ಬಿಟ್ಟು ಓಡಿ ಹೋಗಿದ್ದಾನೆ.
ಇದನ್ನೂ ಓದಿ: Cadbury Viral Post: Cadbury Chocolate ನಲ್ಲಿ ಗೋಮಾಂಸವಿದೆಯಾ? ಕಂಪನಿ ಹೇಳಿದ್ದೇನು?
ನಿರಂಜನ ಮೊಹಾಪಾತ್ರ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರೂ ಬಿದ್ದು ಬಿದ್ದು ನಗುವುದು ಗ್ಯಾರಂಟಿ. ಯಾಕೆಂದರೆ ಇದ್ದಕ್ಕಿದ್ದಂತೆ ಮದುವೆ ಮನೆ ಬಿಟ್ಟು ಎದ್ನೋ ಬಿದ್ನೋ ಅಂತಾ ವರ ಓಡಿ ಹೋಗಿರುವ ದೃಶ್ಯ ನೋಡುವ ಪ್ರತಿಯೊಬ್ಬರಿಗೂ ನಗು ತರಿಸುತ್ತದೆ.
ಅಷ್ಟಕ್ಕೂ ಮದುವೆ ಮನೆಯಲ್ಲಿ ಏನಾಯ್ತು ಅಂತೀರಾ..? ಮದುವೆ ಮಂಟಪದಲ್ಲಿ ವಧು-ವರನ ಜೊತೆ ಅಪಾರ ಬಂಧುಗಳು ಉಪಸ್ಥಿತರಿದ್ದರು. ಅತ್ತ ಪುರೋಹಿತರು ಮದುವೆ ವಿಧಿ-ವಿಧಾನ ನೆರವೇರಿಸುತ್ತಿದ್ದರು. ಈ ವೇಳೆ ವಧುವಿನ ಹಣೆಗೆ ಸಿಂಧೂರವನ್ನಿಡಲು ವರನು ಎದ್ದು ನಿಲ್ಲುತ್ತಾನೆ. ಸಿಂಧೂರವಿಡಲು ವಧುವಿನ ತಲೆ ಮೇಲಿನ ಸೆರಗು ಸರಿಸಿದ್ದೇ ತಡ ಇದ್ದಕ್ಕಿದ್ದಂತೆ ವಧು ವಾಲಿಕೊಂಡು ಬಿದ್ದುಬಿಡುತ್ತಾಳೆ. ಇವಳಿಗೆ ಏನಾಯ್ತೋ ಅಂತಾ ಗೊಂದಲಕ್ಕೊಳಗಾದ ವರ ಗಾಬರಿಯಾಗುತ್ತಾನೆ. ತನ್ನ ಪೇಟ, ಶಾಲು ಮತ್ತು ಕೊರಳಲ್ಲಿದ್ದ ಹಾರವನ್ನು ಕಿತ್ತು ಎಸೆದು ಸ್ಥಳದಿಂದಲೇ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿಯಲು ಪ್ರಯತ್ನಿಸಲಾಯಿತಾದರೂ ಯಾರಿಗೂ ಸಿಗದೆ ಮದುವೆ ಮನೆಯಿಂದಲೇ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಬೆರಳುಗಳಿಂದಲೇ ಚಾರ್ಜ್ ಆಗಲಿದೆ ಫೋನ್, ಬೆವರಿನಿಂದಲೇ ಉತ್ಪತ್ತಿಯಾಗುತ್ತದೆ ವಿದ್ಯುತ್
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ(Viral Video)ವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮದುವೆ ಮನೆಯಲ್ಲಿ ಏನಾಯಿತು..? ವಧು ಏಕೆ ಇದ್ದಕ್ಕಿದ್ದಂತೆ ಬಿದ್ದಳು? ವರ ಏಕೆ ಓಡಿ ಹೋದ..? ಅಂತಾ ನೆಟಿಜನ್ ಗಳು ತಲೆಕೆಡಿಸಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಈ ಮದುವೆಯ ಹಾಸ್ಯ ಪ್ರಸಂಗ ಮಾತ್ರ ನೋಡುವ ಪ್ರತಿಯೊಬ್ಬರಿಗೂ ನಗು ತರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.