Viral Video: ರೇಗಿಸಿದ ಬಾಲಕನಿಗೆ ತಾಯಿಕ್ವಾಂಡೋ ಸ್ಟೈಲ್ ನಲ್ಲಿ ಕಿಕ್ ಹೊಡೆದ ಕೋತಿ, ಕೆಳಗೆ ಬಿದ್ನಾ?

Trending Video: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಲಕನೊಬ್ಬ ಕೋತಿಗೆ ತೊಂದರೆ ಕೊಡುತ್ತಿರುವುದನ್ನು ನೀವು ನೋಡಬಹುದು. ಇದರಿಂದ ಪಿತ್ತ ನೆತ್ತಿಗೇರಿದ ಕೋತಿ ಬಾಲಕನ ಮೇಲೆ ತನ್ನ ಸೇಡು ತೀರಿಸಿಕೊಳ್ಳುತ್ತದೆ.  

Written by - Nitin Tabib | Last Updated : Nov 20, 2022, 06:24 PM IST
  • ಕಪಿಚೇಷ್ಟೆಯ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಿಂದ ಹೊರಹೊಮ್ಮುತ್ತಲೇ ಇರುತ್ತವೆ.
  • ಕಪಿಗಳ ಈ ಚೇಷ್ಟೆ ತುಂಬಾ ತಮಾಷೆಯಿಂದ ಕೂಡಿರುತ್ತವೆ.
  • ಈ ಕೋತಿಗಳ ವೀಡಿಯೊಗಳು ಬಳಕೆದಾರರಿಂದ ತುಂಬಾ ಲೈಕ್ ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.
Viral Video: ರೇಗಿಸಿದ ಬಾಲಕನಿಗೆ ತಾಯಿಕ್ವಾಂಡೋ ಸ್ಟೈಲ್ ನಲ್ಲಿ ಕಿಕ್ ಹೊಡೆದ ಕೋತಿ, ಕೆಳಗೆ ಬಿದ್ನಾ? title=
Viral Monkey Video

Viral Monkey Video: ಕಪಿಚೇಷ್ಟೆಯ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಿಂದ ಹೊರಹೊಮ್ಮುತ್ತಲೇ ಇರುತ್ತವೆ. ಕಪಿಗಳ ಈ ಚೇಷ್ಟೆ ತುಂಬಾ ತಮಾಷೆಯಿಂದ ಕೂಡಿರುತ್ತವೆ.  ಈ ಕೋತಿಗಳ ವೀಡಿಯೊಗಳು ಬಳಕೆದಾರರಿಂದ ತುಂಬಾ ಲೈಕ್ ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಕೆಲವೊಮ್ಮೆ ಯಾರದೋ ಆಹಾರ ಪದಾರ್ಥಗಳನ್ನು ಕಸಿದುಕೊಂಡು ಓಡಿ ಹೋದರೆ, ಇನ್ನು ಕೆಲವೊಮ್ಮೆ ಕನ್ನಡಕ, ಮೊಬೈಲ್ ಫೋನ್ ಮುಂತಾದವುಗಳಿಂದ ಜನರಿಗೆ ಕಿರುಕುಳ ನೀಡುತ್ತವೆ. ಆದರೆ, ಈ ಬಾರಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಕೋತಿ ಯಾರಿಗೂ ಕೂಡ ತೊಂದರೆ ನೀಡುತ್ತಿಲ್ಲ. ಆದರೆ, ಬಾಲಕನೋರ್ವ ಕೋತಿಯನ್ನು ರೇಗಿಸುತ್ತಿದ್ದಾನೆ.

ಇದನ್ನೂ ಓದಿ-Funny Video: ವಿಪರೀತ ಕಷ್ಟಪಟ್ಟು ಬೈಕ್ ಮೇಲೆ ಕುಳಿತ ಕುಡುಕ, ಮುಂದೇನಾಗುತ್ತದೆ ನೀವೇ ನೋಡಿ

ಕೋತಿಗೆ ಬಾಲಕ ಕಿರುಕುಳು ನೀಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವೊಮ್ಮೆ ಕೋತಿಗಳ ಕೋಪ ಜನರ ಪಾಲಿಗೆ ದುಬಾರಿ ಸಾಬೀತಾಗುತ್ತದೆ. ಈ ವಿಡಿಯೋದಲ್ಲಿಯೂ ಕೂಡ ಮಂಗನ ಪ್ರಕೋಪ ಬಾಲಕನ ಪಾಲಿಗೆ ನಮೋನಮಃ ಸಾಬೀತಾಗಿದೆ.  ಈ ಕೋತಿ ಪಿತ್ತ ನೆತ್ತಿಗೇರಿಸಿಕೊಂಡು ತನಗೆ ತಕ್ಕ ಪಾಠ ಕಲಿಸುತ್ತದೆ ಎಂಬುದನ್ನು ಬಾಲಕ ಕನಸಿನಲ್ಲಿಯೂ ಕೂಡ ಊಹಿಸಿರಲಿಕ್ಕಿಲ್ಲ. ವಿಡಿಯೋದಲ್ಲಿ ಬಾಲಕ ಕೋತಿಗೆ ತೊಂದರೆ ಕೊಡುತ್ತಿರುವುದನ್ನು ನೀವು ನೋಡಬಹುದು. ಆದರೆ, ಕೋತಿ ಮಗುವಿನ ಮಗುವಿನ ಜೊತೆಗೆ ವರ್ತಿಸಿದ ರೀತಿಯನ್ನು ನೋಡಿದರೆ, ನೀವೂ ಕೋತಿಯೊಂದಿಗೆ ಎಂದಿಗೂ ಜಗಳಕ್ಕಿಳಿಯುವುದಿಲ್ಲ ಎಂಬುದಂತೂ ಗ್ಯಾರಂಟಿ. ಹುಡುಗ ವಿನಾಕಾರಣ ಕೋತಿಗೆ ತೊಂದರೆ ಕೊಡುತ್ತಿದ್ದಾನೆ, ಆಗ ಕೋತಿ ಪಿತ್ತ ನೆತ್ತಿಗೇರಿಸಿಕೊಂಡು ಮೇಲೆದ್ದು ಬಾಲಕನ ಮುಖಕ್ಕೆ ತಾಯಿಕ್ವಾಂಡೋ ಸ್ಟೈಲ್ ನಲ್ಲಿ ಹಾರಿ ಮುಖಕ್ಕೆ ಕಿಟ್ ನೀಡಿದೆ. ಅಷ್ಟೇ ಅಲ್ಲ ಭಾರಿ ಒದೆತ ನೀಡಿದ ನಂತರ ಬಾಲಕ ನೆಲಕ್ಕೆ ಉರುಳಿದ್ದಾನೆಯೋ ಇಲ್ಲವೋ ಎಂಬುದನ್ನು ಕೂಡ ಅದು ಕನ್ಫರ್ಮ್ಮು ಮಾಡಿಕೊಳ್ಳುತ್ತಿರುವುದನ್ನು ನೀವು ಗಮನಿಸಬಹುದು.

ಇದನ್ನೂ ಓದಿ-Viral Video: ನೀರು ಕುಡಿಯುತ್ತಿದ್ದ ಚಿರತೆಯ ಮೇಲೆ ದಾಳಿ ಇಟ್ಟ ಹೆಬ್ಬಾವು... ಮುಂದೆ ನಡೆದಿದ್ದೇನು ತಿಳಿಯಲು ವಿಡಿಯೋ ನೋಡಿ

ಈ ವೈರಲ್ ವೀಡಿಯೊವನ್ನು ಗುರು ಸಿಂಗ್ ಎಂಬ ಬಳಕೆದಾರರು ತನ್ನ  Instagram ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋವನ್ನು 2 ಲಕ್ಷ 90 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ. ವೈರಲ್ ವೀಡಿಯೊವನ್ನು ನೋಡಿದ ನಂತರ ಬಳಕೆದಾರರು ತುಂಬಾ ನಗುತ್ತಿದ್ದಾರೆ, ಒಬ್ಬ ಬಳಕೆದಾರರು 'ಕುಂಗ್‌ಫು ಮಂಕಿ' ಎಂದು ಕೂಡ ಬರೆದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News