ʼದಾಸನʼ ಹಳೆ ಕೇಸ್‌ಗಳ ಪರಿಶೀಲನೆ..! ನಟ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..? 

Renukaswamy murder case : ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ ಅಂದರ್ ಆಗಿರೋ ದರ್ಶನ್ ಅಂಡ್ ಗ್ಯಾಂಗ್ ನ್ನ ಪೊಲೀಸ್ರು ತೀವ್ರ  ವಿಚಾರಣೆ ನಡೆಸ್ತಿದ್ದಾರೆ. ವಿಚಾರಣೆ ವೇಳೆ ರೇಣುಕಾಸ್ವಾಮಿಯ ಕಿಡ್ನಾಪ್ ಮಾಡಲು ಟ್ರ್ಯಾಕ್ ಸೇರಿ ಕೊಲೆ ಬಳಿಕ ನಡೆದ ಡೀಲ್ ನ ಸಂಪೂರ್ಣ‌ ಮಾಹಿತಿ ಇಲ್ಲಿದೆ ನೋಡಿ.

Written by - Krishna N K | Last Updated : Jun 13, 2024, 09:09 PM IST
    • ಡೀಲ್ ಓಕೆ ಆದ ಬಳಿಕ ನಡೆದಿತ್ತ ಶವವನ್ನ ಸಾಗಿಸೋ ಕೃತ್ಯ
    • ಮೇಕೆ ತರೋದಾಗಿ ಹೇಳಿ ಕಾರು ತೆಗೆದುಕೊಂಡೋಗಿದ್ರು
    • ಮೇಕೆ ಬದಲಿಗೆ ರೇಣುಕಾಸ್ವಾಮಿಯ ಶವ ಸಾಗಾಟ ಮಾಡಿ‌ ಸಿಕ್ಕಿ ಬಿದ್ರು
ʼದಾಸನʼ ಹಳೆ ಕೇಸ್‌ಗಳ ಪರಿಶೀಲನೆ..! ನಟ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?  title=

Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ರ ಅತಿಥಿಗಳಾಗಿರೋ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಆರೋಪಿಗಳಿಗೆ ಪೊಲೀಸ್ರು ಮೂರನೇ ದಿನವೂ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಹತ್ಯೆಗೆ ಬಳಸಿದ ಆಯುಧಗಳನ್ನ ವಶಪಡಿಸಿಕೊಂಡಿದ್ದಾರೆ.

ಅದರ ಜೊತೆಗೆ ಆರೋಪಿಗಳು ಕೃತ್ಯ ನಡೆದ ಸ್ಥಳದಿಂದ ಶವವನ್ನ ಮರೆಮಾಚಲು ದೊಡ್ಡ ಪ್ಲಾನ್ ಮಾಡಿದ್ದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರಾ ಎಂಬ ಅನುಮಾನವು ಕಾಡೋದಕ್ಕೆ ಶುರುವಾಗಿದೆ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಪಿಎಸ್ಐ ಒಬ್ರಿಗೆ ಕರೆ ಮಾಡಿದ್ರು ಎನ್ನಲಾಗಿದೆ. ಆ ವೇಳೆ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿ ತಂದು ಹಾಕಿ ಎಂದಿದ್ದರಂತೆ ಪಿಎಸ್ಐ. ಹಾಗಾಗಿ ಆರ್ ಆರ್ ನಗರದಲ್ಲಿ ನಡೆದ ಕೊಲೆ ನಂತ್ರ ಮೃತ ದೇಹ ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ,ಆರ್ ಆರ್ ನಗರದಲ್ಲಿ ಎಲ್ಲಿಯೂ ಜಾಗ ಇಲ್ಲ ಅಂತ ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ರಾ ಎಂಬ ಅನುಮಾನ ಮೂಡಿದೆ. ಪೊಲೀಸರ ಸೂಚನೆ ಪ್ರಕಾರ ಮೃತ ದೇಹ ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ರ ಎಂಬ ಅನುಮಾನ ಶುರುವಾಗಿದೆ‌. 

ಇದನ್ನೂ ಓದಿ:ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್‌ ದರ್ಶನ್ ಭಾವುಕ ಪೋಸ್ಟ್

ಒಂದ್ ಕಡೆ ರೇಣುಕಾಸ್ವಾಮಿ ಕೊಲೆ ದರ್ಶನ್ ನಡೆಸಿದ ಹಲ್ಲೆಯಿಂದಲೆ ಅನ್ನೊದು ದೃಢವಾಗಿದೆ. ಆದ್ರೆ, ಪ್ರಕರಣದಿಂದ ದರ್ಶನ್ ಹಾಗೂ ಎ13 ಆರೋಪಿಯಾದ ದೀಪಕ್ ನ್ನ ರಕ್ಷಣೆ ಮಾಡಲು ದೊಡ್ಡ ಮೊತ್ತದ ಡೀಲ್ ನಡೆದಿದೆ ಎಂಬ ಮಾತುಗಳು ಕೇಳಿ‌ ಬರ್ತಿವೆ. ಅದ್ರಲ್ಲೂ ಆರೋಪಿ ದೀಪಕ್ ಪ್ರಭಾವಿ ರಾಜಕರಣೀಯ ಸೋದರಿಯ ಪುತ್ರನಾಗಿದ್ದು, ಆತನ ಪೋಟೋಗಳು ಸಹ ಲೀಕ್ ಆಗದಂತೆ ಪೊಲೀಸ್ರ ಮೇಲೆ ಒತ್ತಡ ಹೇರಲಾಗಿದೆಯಂತೆ. ಹೀಗಾಗಿ ವ್ಯವಸ್ಥಿತವಾಗಿ ದೀಪಕ್ ನನ್ನು ಅಪ್ರೂವರ್ ಮಾಡಿಕೊಂಡಿ ಕೇಸ್ ನಿಂದ ಕೈ ಬಿಡುವ ಪ್ಲಾನ್ ಇದೆಯಂತೆ

ಮತ್ತೊಂದೆಡೆ ಶವ ಸಾಗಾಟ ಮಾಡಿದ್ದ ಸ್ಕಾರ್ಪಿಯೋ ಕಾರನ್ನ ಸೀಜ್ ಮಾಡಿರುವ ಪೊಲೀಸ್ರು  ಕಾರಿನ ಮಾಲೀಕನ ಪತ್ತೆಹಚ್ಚಿ ನೋಟೀಸ್ ನೀಡಿದ್ರು. ನೊಟೀಸ್ ತಲುಪುತ್ತಿದ್ದಂತೆ ಪೊಲೀಸ್ ಠಾಣೆಗೆ ಕಾರಿನ ಮಾಲೀಕ ಪುನೀತ್ ಓಡಿ ಬಂದಿದ್ರು. ವಿಚಾರಣೆ ವೇಳೆ ಹಲವು ವರ್ಷಗಳಿಂದ ದರ್ಶನ್ ಜೊತೆಗೆ ಇದ್ದೆ.  ದರ್ಶನ್ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿದ್ದೇನೆ.ಆಗಾಗ ದರ್ಶನ್ ಸಹಚರರು ಚಿಕ್ಕಬಳ್ಳಾಪುರದಿಂದ ಮೇಕೆ ತರ್ತೀವಿ ಅಂತಾ ಕಾರನ್ನ ತೆಗೆದುಕೊಂಡ್ ಹೋಗ್ತಿದ್ತು. ಅದೇ ರಿತಿ ಕೊಲೆ ನಡೆಯೋ ಮುಂಚಿನ ದಿನ ಪುನೀತ್ ಬಳಿ ಕಾರು ತೆಗೆದುಕೊಂಡು ಹೋಗಿದ್ರು. ನೋಡಿದ್ರೆ ಮೇಕೆ ಬದಲಿಗೆ ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ಶವ ಸಾಗಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ , ಪುನೀತ್ ಹೇಳಿಕೆಯನ್ನ ಸಾಕ್ಷಿಯಾಗಿ ದಾಖಲಿಸಿಕೊಂಡಿರೋ ಪೊಲೀಸ್ರು ಮತ್ತಷ್ಟು ಎವಿಡೆನ್ಸ್ ಕಲೆ ಹಾಕಲು ತನಿಖೆಯನ್ನ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಗೆ ಮಂದಿಗೆ ದರ್ಶನ್ ಅಂದ್ರೆ ಭಯ, ಯಾಕೆ ಗೊತ್ತಾ ?

ಇನ್ನೂ ನಟ ದರ್ಶನ್ ತನ್ನ ಸಿನಿ ಕರಿಯರ್ ನ ಸ್ಟಾರ್ಟ್ ಮಾಡಿದ್ದೆ ಮೆಜೆಸ್ಟಿಕ್ ಸಿನಿಮಾ ದಾಸ ಅನ್ನೋ ರೌಡಿ ಪಾತ್ರದ ಮೂಲಕ. ಇನ್ನೂ ಕರಿಯ, ದಾಸ ಸೇರಿದಂತೆ ಬಹುತೇಕ ಸಿನಿಮಾಗಳಲ್ಲಿ ರೌಡಿ ಪಾತ್ರದಲ್ಲಿ ನಟ ದರ್ಶನ್ ಮಿಂಚಿದ್ರು. ಆದ್ರಿಗಾ  ನಟ ದರ್ಶನ್ ಮೇಲೆ ನಿಜ ಜೀವನದಲ್ಲೂ ರೌಡಿ ಶೀಟ್ ಓಪನ್ ಆಗುತ್ತಾ, ಇಂತಹ ಸಾಧ್ಯತೆಯಿದೆ ಇದೆ ಅಂತ ಹೇಳಲಾಗ್ತಿದೆ. ಸಾಮಾನ್ಯವಾಗಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿ ಪಟ್ಟಿ ತೆರೆಯುತ್ತಾರೆ. ಸದ್ಯ ದರ್ಶನ್ ಅಂತಹದ್ದೆ ಪರಿಸ್ಥಿತಿಯಲ್ಲಿದ್ದಾರೆ.

ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮೇಲೆ ರೌಡಿ ಶೀಟ್ ತೆರೆಯಬಹುದಾ ಅನ್ನೋ ಚಿಂತನೆ ನಡದಿದೆ. ಕೊಲೆಯಲ್ಲಿ ಭಾಗಿ ಬೆನ್ನಲ್ಲೇ  ರೌಡಿಶೀಟರ್ ವಿಚಾರ  ಮುನ್ನಲೆಗೆ ಬಂದಿದೆ. ದರ್ಶನ್ ಈ ಹಿಂದೆ ಮೈಸೂರಿನ ಹೊಟೇಲ್ ಒಂದರಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ರು. ಬೆಂಗಳೂರಿನ ಪಬ್ ಒಂದರಲ್ಲಿ ಅಭಿಮಾನಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ರು. ಹೀಗೆ ಪದೇ ಪದೇ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗ್ತಿರೊ ದರ್ಶನ್ ರೌಡಿ ಶೀಟ್ ತೆರೆಯಬಹುದಾ ಎಂಬ ಚಿಂತನೆಗೆ ಪೊಲೀಸ್ರು ಬಂದಿದ್ದಾರೆ. ಹೀಗಾಗಿ ಹಳೆ ಕೇಸ್ ಗಳ ಪರಿಶೀಲನೆ ನಡೆಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದು, ಯಾವ್ಯಾವ ಕೇಸ್ ಪೆಂಡಿಂಗ್ ಇದೆ. ಎಲ್ಲೆಲ್ಲಿ ಕೇಸ್ ಆಗಿತ್ತು ಅನ್ನೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಒಟ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಆರೋಪ ಹೊತ್ತು ಪೊಲೀಸ್ ಕಸ್ಟಡಿಯಲಿರುವುದು ಅವರ ಅಭಿಮಾಗಳಿಗೆ, ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News