Viral News: ನಾಪತ್ತೆಯಾದ ‘ಲೂಸಿ’ಗಾಗಿ ಊಟ-ತಿಂಡಿಯನ್ನೇ ಬಿಟ್ಟ ಕುಟುಂಬ!

'ಲೂಸಿ’ಯನ್ನು ಮರಳಿ ಕೊಟ್ಟವವರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದು ಪ್ರಯಾಗ್‌ರಾಜ್‌ನ ಮೊಹಮ್ಮದ್ ತಾಹಿರ್ ಹೇಳಿದ್ದಾರೆ.  

Written by - Puttaraj K Alur | Last Updated : Apr 1, 2022, 08:39 PM IST
  • ಸಾಕು ಬೆಕ್ಕು ನಾಪತ್ತೆಯಾಗಿರುವ ಹಿನ್ನೆಲೆ ಕಂಗಾಲಾದ ಕುಟುಂಬ
  • ಬೆಕ್ಕು ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಣೆ
  • ‘ಲೂಸಿ’ಗಾಗಿ ಪ್ರಯಾಗ್‌ರಾಜ್‌ನಲ್ಲಿ ಊಟ-ತಿಂಡಿ ಬಿಟ್ಟ ಕುಟುಂಬ
Viral News: ನಾಪತ್ತೆಯಾದ ‘ಲೂಸಿ’ಗಾಗಿ ಊಟ-ತಿಂಡಿಯನ್ನೇ ಬಿಟ್ಟ ಕುಟುಂಬ! title=
ಬೆಕ್ಕಿಗಾಗಿ ಊಟ-ತಿಂಡಿಯನ್ನೇ ಬಿಟ್ಟ ಕುಟುಂಬ

ಲಕ್ನೋ: ಪ್ರಯಾಗ್‌ರಾಜ್‌(Prayagraj)ನಲ್ಲಿ ಮೊಹಮ್ಮದ್ ತಾಹಿರ್ ಎಂಬುವವರ ಸಾಕು ಬೆಕ್ಕು ನಾಪತ್ತೆಯಾಗಿರುವ ಹಿನ್ನೆಲೆ ಅವರ ಕುಟುಂಬವು ಕಂಗಾಲಾಗಿದೆ. ಸುಮಾರು ಒಂದು ವಾರದ ಹಿಂದೆ 'ಲೂಸಿ' ಹೆಸರಿನ ಬೆಕ್ಕು ನಾಪತ್ತೆಯಾದ ದಿನದಿಂದಲೂ ಕುಟುಂಬ ಸದಸ್ಯರು ದುಃಖಿತರಾಗಿದ್ದಾರೆ. ಪ್ರೀತಿಯ ಬೆಕ್ಕು ಕಳೆದುಕೊಂಡು ನಿರಂತರವಾಗಿ ಅಳುತ್ತಿರುವ ತಾಹಿರ್ ಕುಟುಂಬಸ್ಥರು ಸರಿಯಾಗಿ ಊಟ-ತಿಂಡಿಯನ್ನು ಮಾಡುತ್ತಿಲ್ಲವಂತೆ.

ಬಹುಮಾನ ಘೋಷಣೆ

ತಮ್ಮ ‘ಲೂಸಿ’(Missing Cat)ಯನ್ನು ವಾಪಸ್ ಕರೆತಂದುಕೊಟ್ಟವರಿಗೆ ತಾಹಿರ್ ಕುಟುಂಬ 10 ಸಾವಿರ ರೂ. ಬಹುಮಾನ ಘೋಷಿಸಿದೆ. ತಾಹಿರ್ ಕುಟುಂಬ ವಾಸಿಸುವ ಸಿವಿಲ್ ಲೈನ್ಸ್ ಪ್ರದೇಶದ ಗೋಡೆಗಳು, ವಿದ್ಯುತ್ ಕಂಬಗಳು ಮತ್ತು ಮಾರುಕಟ್ಟೆಗಳ ಗೋಡೆಗಳ ಮೇಲೆ ಜಾಹೀರಾತಿನಂತೆ ಪೋಸ್ಟರ್‌ಗಳನ್ನು ಸಹ ಅಂಟಿಸಿದ್ದಾರೆ.  

ಇದನ್ನೂ ಓದಿ: King Cobra Video : ಮನೆಯ ಬಾತ್ ರೂಂನಲ್ಲಿತ್ತು ಭಯಾನಕ ಹಾವು! ಬಾಗಿಲು ತೆರೆದಾಗ ಬೆಚ್ಚಿ ಬಿದ್ದ ಮನೆ ಮಂದಿ

ಬೇಜಾರಿನಲ್ಲಿರುವ ಕುಟುಂಬ

ಒಂದೂವರೆ ವರ್ಷಗಳ ಹಿಂದೆ ನಾವು ‘ಲೂಸಿ’(Pet Cat)ಯನ್ನು ಮನೆಗೆ ಕರೆತಂದಿದ್ದೆವು ಎಂದು ಮೊಹಮ್ಮದ್ ತಾಹಿರ್ ಹೇಳಿದ್ದಾರೆ. 'ಲೂಸಿ'ಯನ್ನು ನಾವು ಸಾಮಾನ್ಯ ಬೆಕ್ಕಿನಂತೆ ನೋಡದೆ ನಮ್ಮ ಮಗುವಿನಂತೆ ಜೋಪಾನ ಮಾಡುತ್ತಿದ್ದೇವು. 'ಲೂಸಿ' ಕೂಡ ನಮ್ಮೊಂದಿಗೆ ಊಟ ಮಾಡಿಕೊಂಡು ಮನೆಯ ಸದಸ್ಯರಲ್ಲಿಯೇ ಒಬ್ಬಳಾಗಿ ಇದ್ದಳು. ಚೆನ್ನಾಗಿಯೇ ಇದ್ದ 'ಲೂಸಿ' ಈಗ ಏಕಾಏಕಿ ಕಣ್ಮರೆಯಾಗಿದ್ದು, ಕುಟುಂಬದ ಪ್ರತಿಯೊಬ್ಬ ಸದಸ್ಯರು ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಪೋಸ್ಟರ್ ಹಂಚುತ್ತಿರುವ ಕುಟುಂಬಸ್ಥರು

‘ಲೂಸಿ’ ಬೆಕ್ಕನ್ನು ಹುಡುಕಲು ತಾಹಿರ್ ಕುಟುಂಬಸ್ಥರು ಪೋಸ್ಟರ್ ಹಂಚುತ್ತಿದ್ದಾರೆ. ಯಾರಾದರೂ ನಮ್ಮ ಬೆಕ್ಕನ್ನು ಕದ್ದೊಯ್ದಿದ್ದರೆ ಅದನ್ನು ನಮಗೆ ವಾಪಸ್ ಕೊಟ್ಟು ಹಣ ತೆಗೆದುಕೊಳ್ಳಬಹುದು. ‘ಲೂಸಿ’ಯನ್ನು ಮರಳಿ ಕೊಟ್ಟವವರಿಗೆ 10 ಸಾವಿರ ರೂ. ಬಹುಮಾನ(Reward For Missing Cat) ನೀಡಲಾಗುತ್ತದೆ ಎಂದು ತಾಹಿರ್ ಹೇಳಿದ್ದಾರೆ.  

ಇದನ್ನೂ ಓದಿ: video : ದಿನಕ್ಕೆ ೫೦೦ ರೂ ಸಂಬಳ ನೀಡಿ ಬೆಳೆ ಕಾಯಲು ಕರಡಿ ನೇಮಿಸಿದ ರೈತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News