ನವದೆಹಲಿ: 2020 ರಿಂದ, ಕೊರೊನಾ ರೋಗದಿಂದಾಗಿ ವರ್ಕ್ ಫ್ರಾಂ ಹೋಂ ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿದೆ.ಈಗ ವರನೊಬ್ಬ ವರ್ಕ್ ಫ್ರಾಂ ಕೆಲಸದ ನಿಮಿತ್ತ ಮದುವೆ ಮಂಟಪದಲ್ಲಿ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!
ಈ ಫೋಟೋವನ್ನು 'ಕಲ್ಕತ್ತಾ ಇನ್ಸ್ಟಾಗ್ರಾಮರ್ಸ್' ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ, ಇದು ಕೋಲ್ಕತ್ತಾದ ವರನನ್ನು ಇಬ್ಬರು ಪುರೋಹಿತರ ಜೊತೆಗೆ ಮಂಟಪದಲ್ಲಿ ಕುಳಿತಿರುವುದನ್ನು ತೋರಿಸುತ್ತದೆ. ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಂತೆ ಅವರು ಲ್ಯಾಪ್ಟಾಪ್ನಲ್ಲಿ ತಮ್ಮ ಕೆಲಸದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ಅವರು ಲ್ಯಾಪ್ಟಾಪ್ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಕೆಲವು ಅಧಿಕೃತ ಕೆಲಸ ಎಂದು ಭಾವಿಸಲಾಗಿದೆ.
ಇದನ್ನೂ ಓದಿ: ಕರುನಾಡಿನ ಕಿಚ್ಚ ಈಗ ಸಮಂತಾ ಜೊತೆ ಡ್ಯೂಯಟ್ ಹಾಡಲು ಫುಲ್ ರೆಡಿ!
ಕೆಲವರು ಇದನ್ನು ನೋಡಿ ನಗುತ್ತಿದ್ದರೆ, ಇನ್ನು ಕೆಲವರು ವಿಷಕಾರಿ ಕೆಲಸದ ವಾತಾವರಣವನ್ನು ಟೀಕಿಸುತ್ತಾ ವ್ಯಕ್ತಿಯು ತನ್ನ ಸ್ವಂತ ವಿವಾಹವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.ವಿಷಕಾರಿ ಕೆಲಸದ ಸಂಸ್ಕೃತಿಯನ್ನುಉತ್ತೇಜಿಸಬೇಡಿ, ಇದು ಹೆಮ್ಮೆಪಡುವ ವಿಷಯವಲ್ಲ ಎಂದು ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಂತಹ ಪರಿಸ್ಥಿತಿ ಎದುರಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ತನ್ನ ಮದುವೆಯ ರಾತ್ರಿ ಕೆಲಸ ಮಾಡುವ ವರನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯವಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.