Jewellery In Prasad: ಈ ದೇವಸ್ಥಾನಕ್ಕೆ ಭೇಟಿ ನೀಡಿದವರಿಗೆ ಪ್ರಸಾದದ ರೂಪದಲ್ಲಿ ಚಿನ್ನಾಭರಣ ಸಿಗುತ್ತವಂತೆ!

Jewellery In Prasad - ನಮ್ಮ ದೇಶದಲ್ಲಿ ಇರುವ ಒಂದು ಮಹಾಲಕ್ಷ್ಮಿಯ ದೇವಾಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಲಡ್ಡು ಅಥವಾ ಯಾವುದೇ ಆಹಾರ ಪದಾರ್ಥ ನೀಡುವ ಬದಲು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೀಡುತ್ತಾರೆ ಎಂದರೆ ನೀವು ನಂಬುವಿರಾ? ಇಲ್ಲ ಎಂದಾದರೆ ಈ ಸುದ್ದಿಯನ್ನೊಮ್ಮೆ ಓದಿ.

Written by - Nitin Tabib | Last Updated : Nov 13, 2021, 01:57 PM IST
  • ರತ್ಲಂ ಜಿಲ್ಲೆಯ ಮನಕ್ ನಲ್ಲಿದೆ ಈ ಮಹಾಲಕ್ಷ್ಮಿ ದೇವಸ್ಥಾನ.
  • ಹಲವು ದಶಕಗಳಿಂದ ಈ ರೂಢಿ ನಡೆದುಕೊಂಡು ಬಂದಿದೆ.
  • ದೇವಿ ಲಕ್ಷ್ಮಿಯ ಕೃಪೆ ಭಕ್ತರ ಮೇಲೆ ಇರುತ್ತದೆ ಎನ್ನಲಾಗುತ್ತದೆ.
Jewellery In Prasad: ಈ ದೇವಸ್ಥಾನಕ್ಕೆ ಭೇಟಿ ನೀಡಿದವರಿಗೆ ಪ್ರಸಾದದ ರೂಪದಲ್ಲಿ ಚಿನ್ನಾಭರಣ ಸಿಗುತ್ತವಂತೆ! title=
Mystery of Mahalakshmi Temple (File Photo)

Unique Temple in Ratlam: ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ನೀವು ದೇವಾಲಯ ಇಲ್ಲದೆ ಇರುವ ಯಾವುದೇ ಗ್ರಾಮ ನಿಮಗೆ ನಮ್ಮ ದೇಶದಲ್ಲಂತೂ ಕಂಡು ಬರುವುದು ಅತಿ ವಿರಳ. ಇಂತಹ ಹಲವು ರೀತಿಯ ದೇವಾಲಯಗಳು ತಮ್ಮ ಗರ್ಭದೊಳಗೆ ಹಲವು  ರೀತಿಯ ರಹಸ್ಯಗಳನ್ನು (Mystery of Mahalakshmi Temple) ಬಚ್ಚಿಟ್ಟುಕೊಂಡಿವೆ. ಇದಲ್ಲದೆ, ಎಲ್ಲಾ ದೇವಾಲಯಗಳು ತಮ್ಮದೇ ಆದ ವಿಶಿಷ್ಟ ಗುರುತನ್ನು ಮತ್ತು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಇಂತಹ ಹಲವು ರಹಸ್ಯಗಳನ್ನು ಹೊಂದಿರುವ ದೇವಾಲಯವಿದೆ. ಈ ದೇವಸ್ಥಾನದ ಹೆಸರು ಮಹಾಲಕ್ಷ್ಮಿ ದೇವಸ್ಥಾನ.

ಈ ಮಹಾಲಕ್ಷ್ಮಿ ದೇವಸ್ಥಾನವು ಮಧ್ಯಪ್ರದೇಶದ (Madhya Pradesh) ರತ್ಲಂ (Ratlam) ಜಿಲ್ಲೆಯ ಮನಕ್‌ನಲ್ಲಿದೆ (Mahalakshmi Temple Manak). ಈ ದೇವಾಲಯವು ತುಂಬಾ ವಿಶಿಷ್ಟವಾಗಿದೆ ಏಕೆಂದರೆ ಇಲ್ಲಿಗೆ ಬರುವ ಭಕ್ತರಿಗೆ ಲಡ್ಡು ಅಥವಾ ಯಾವುದೇ ಆಹಾರ ಪದಾರ್ಥಗಳನ್ನು ಪ್ರಸಾದವಾಗಿ ನೀಡಲಾಗುವುದಿಲ್ಲ. ಬದಲಿಗೆ ಅವರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು (Gold and Silver Jewelry) ನೀಡಲಾಗುತ್ತದೆ. ಈ ರೀತಿಯಾಗಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ (Mahalakshmi Temple) ಬರುವ ಪ್ರತಿಯೊಬ್ಬ ಭಕ್ತನು ಇಲ್ಲಿಂದ ಸಂಪತ್ತನ್ನು ತೆಗೆದುಕೊಂಡು ಹೋಗುತ್ತಾನೆ ಎಂದರೆ ತಪ್ಪಾಗಲಾರದು.

ಮಹಾಲಕ್ಷ್ಮಿ ದೇವಿಯ ದೇವಸ್ಥಾನ
ಈ  ದೇವಸ್ಥಾನಕ್ಕೆ (Interesting Fact) ಬರುವ ಪ್ರತಿಯೊಬ್ಬ ಭಕ್ತರಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಆಭರಣಗಳನ್ನು ಇಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ. ಈ ದೇವಾಲಯವು ಮಹಾಲಕ್ಷ್ಮಿಯದ್ದಾಗಿದೆ. ಪ್ರತಿದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಅಲ್ಲಿಗೆ ಹರಿದು ಬರುತ್ತದೆ. ಈ ದೇವಾಲಯದಲ್ಲಿ ಭಕ್ತರಿಗೆ ಅಪಾರ ನಂಬಿಕೆಯಿದೆ. ಈ ಕಾರಣಕ್ಕಾಗಿ ಭಕ್ತರು ಇಲ್ಲಿ ಮಹಾಲಕ್ಷ್ಮಿ ದೇವಿಗೆ ಪ್ರತಿದಿನ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಅರ್ಪಿಸುತ್ತಾರೆ. ಇದಲ್ಲದೇ ಭಕ್ತರು ಇಲ್ಲಿ ನಗದನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ-ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?

ದೀಪಾವಳಿಯ (Diwali) ಸಂದರ್ಭದಲ್ಲಿ ಈ ದೇವಸ್ಥಾನದಲ್ಲಿ ಧನ ಕುಬೇರನ (Dhan Kuber) ದರ್ಬಾರು ನಡೆಯುತ್ತದೆ. ಈ ಸಮಯದಲ್ಲಿ, ಧನತ್ರಯೋದಶಿಯಿಂದ (Dhanatrayodashi) ಹಿಡಿದು  ಐದು ದಿನಗಳ ಕಾಲ ದೇವಾಲಯದಲ್ಲಿ ದೀಪೋತ್ಸವವನ್ನು ಆಯೋಜಿಸಲಾಗುತ್ತದೆ ಮತ್ತು ದೇವಾಲಯವನ್ನು ಹೂವಿನಿಂದಲ್ಲ ಆದರೆ ಹಣ ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ. ಧನ ಕುಬೇರನ ಆಸ್ಥಾನದಲ್ಲಿ ಭಕ್ತರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು ಹಣವನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಇದನ್ನೂ ಓದಿ-ಎಲ್ಲಿಂದ ಬಂದ ಸಂತಾ ಕ್ಲಾಸ್? ಕ್ರಿಸ್ಮಸ್ ಟ್ರೀ ಮಹತ್ವವೇನು? ಇಲ್ಲಿದೆ ರೋಚಕ ಕಥೆ

ಧನತ್ರಯೋದಶಿಯ ದಿನ ಕುಬೇರನ ಗಂಟು ಬಿಚ್ಚಲಾಗುತ್ತದೆ
ದೀಪಾವಳಿಯ ಸಮಯದಲ್ಲಿ ದೇವಾಲಯದ ಬಾಗಿಲು 24 ಗಂಟೆಗಳ ಕಾಲ ತೆರೆದಿರುತ್ತದೆ. ಧನತ್ರಯೋದಶಿ  ದಿನದಂದು ಇಲ್ಲಿ ಮಹಿಳೆಯರಿಗಾಗಿ ಕುಬೇರನ ಗಂಟನ್ನು ಬಿಚ್ಚಲಾಗುತ್ತದೆ ಮತ್ತು ಇಲ್ಲಿಗೆ ಬರುವ ಯಾವುದೇ ಭಕ್ತರನ್ನು ಬರಿಗೈಯಲ್ಲಿ ಹಿಂದಿರುಗಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ದೇವಸ್ಥಾನದಲ್ಲಿ ಹತ್ತಾರು ವರ್ಷಗಳಿಂದ ಆಭರಣ, ಹಣತೆ ಅರ್ಪಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಿಂದಿನ ಕಾಲದಲ್ಲಿ ಇಲ್ಲಿನ ರಾಜರು ರಾಜ್ಯದ ಏಳಿಗೆಗಾಗಿ ಹಣ, ಆಭರಣಗಳನ್ನು ಅರ್ಪಿಸುತ್ತಿದ್ದರು ಎಂಬ ಪ್ರತೀತಿ ಇದೆ. ಈ ಸಂಪ್ರದಾಯವನ್ನು ಭಕ್ತರು ಸಹ ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ಅವರೂ ಸಹ ಅಮ್ಮನವರ ಪಾದಕ್ಕೆ ಆಭರಣ, ಹಣ ಇತ್ಯಾದಿಗಳನ್ನು ಅರ್ಪಿಸಲು ಆರಂಭಿಸಿದ್ದಾರೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ಅವರ ಮೇಲೆ ಇರುತ್ತದೆ ಎಂಬುದು ಅವರ ನಂಬಿಕೆ.

ಇದನ್ನೂ ಓದಿ-Knowledge Story: ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ Super App, ಇಲ್ಲಿದೆ ಅದರ ವಿಶೇಷತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News