ರಾಜಸ್ಥಾನದ ಈ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

Last Updated : Apr 11, 2019, 03:41 PM IST
ರಾಜಸ್ಥಾನದ ಈ ಗ್ರಾಮದಲ್ಲಿ ಮತದಾನ ಬಹಿಷ್ಕಾರ  title=

ಕೋಟಾ: ಕೋಟಾ ಜಿಲ್ಲೆಯ ಮದನ್ಪುರ ಮತ್ತು ಅಖಾರಿ ಗ್ರಾಮ ಪಂಚಾಯತ್ ಪ್ರದೇಶದ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಥಳೀಯ ಸಂಸದರ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಥಳೀಯ ಸಂಸದರ ವಿರುದ್ಧ ಘೋಷಣೆಗಳನ್ನೂ ಕೂಗಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಸ್ಥರು, ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರೂ ನಮ್ಮ ಗ್ರಾಮಕ್ಕೆ ಇನ್ನೂ ಕೂಡ ರಸ್ತೆ ಸೌಲಭ್ಯ ಸಿಕ್ಕಿಲ್ಲ. ಈ ಕಾರಣದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದರು.

ಚುನಾವಣೆಗೂ ಮೊದಲು ಮತಯಾಚನೆಗಾಗಿ ಬರುವ ಅಭ್ಯರ್ಥಿಗಳು ತಾವು ಗೆದ್ದರೆ ಗ್ರಾಮದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆಗಳ ಮಹಾಪೂರವೇ ಹರಿಸುತ್ತಾರೆ. ಆದರೆ ಗೆದ್ದ ಬಳಿಕ ಯಾರೂ ಕೂಡ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಾರ್ಮರ್ ಮತ್ತು ಜೈಸಲ್ಮೇರ್ ಗ್ರಾಮಸ್ಥರಿಂದಲೂ ಮತದಾನ ಬಹಿಷ್ಕಾರ:
ಇದಕ್ಕೂ ಮೊದಲು ಬಾರ್ಮರ್ ಮತ್ತು ಜೈಸಲ್ಮೇರ್ ಎರಡೂ ಗ್ರಾಮಗಳ ಜನರು 'ಅಭಿವೃದ್ಧಿಯಿಲ್ಲದಿದ್ದರೆ ಮತವೂ ಇಲ್ಲ' ಎಂದು ಫಲಕಗಳನ್ನು ಹಾಕಿದ್ದರು. ಜೊತೆಗೆ ಸ್ವಾತಂತ್ರ್ಯ ಕಳೆದು 7 ದಶಕಗಳು ಕಳೆಯುತ್ತಾ ಬಂದರೂ ಗ್ರಾಮಕ್ಕೆ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಹಾಗಾಗಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಹೇಳಿದರು.

ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣಾ ನಡೆಸಲಾಗುವುದು. ಏಪ್ರಿಲ್ 29 ಮತ್ತು ಮೇ 6 ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿದೆ.

Trending News