ಮತ್ತೊಮ್ಮೆ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಯ್ಕೆ

ಉಪ ಮುಖ್ಯಮಂತ್ರಿ ಸ್ಥಾನ ಕಾಯ್ದುಕೊಂಡ ನಿತಿನ್ ಪಟೇಲ್.

Last Updated : Dec 22, 2017, 05:33 PM IST
ಮತ್ತೊಮ್ಮೆ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಯ್ಕೆ title=
Pic: ANI

ಅಹ್ಮದಾಬಾದ್: ಗುಜರಾತ್ನಲ್ಲಿ, ಪ್ರಸ್ತುತ ಮುಖ್ಯಮಂತ್ರಿಯಾಗಿದ್ದ ವಿಜಯ್ ರುಪಾನಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಅಂತರದಿಂದ ಗೆದ್ದಿರುವ ಕಾರಣ, ರೂಪಾನಿ ಬದಲಿಗೆ ಮತ್ತೊಂದು ನಾಯಕನನ್ನು ಮುಖ್ಯಮಂತ್ರಿಯಾಗಿ ಮಾಡುವ ಬಗ್ಗೆ ಮಾತುಕತೆ ನಡೆಸಿತ್ತು. ಆದರೆ ಲೆಜಿಸ್ಲೇಟಿವ್ ಪಾರ್ಟಿಯ ಸಭೆಯಲ್ಲಿ, ಏಕಪಕ್ಷೀಯವಾಗಿ ಇಂದು ವಿಜಯ್ ರುಪಾನಿಯ ಹೆಸರನ್ನು ಮುದ್ರೆಯೊತ್ತಲಾಗಿತ್ತು. ನಿತಿನ್ ಪಟೇಲ್ರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಸರೋಜ್ ಪಾಂಡೆ ಮೇಲ್ವಿಚಾರಕರಾಗಿ ಗುಜರಾತ್ಗೆ ತೆರಳಿದ್ದರು. ಹೊಸದಾಗಿ ಚುನಾಯಿತ ಶಾಸಕರನ್ನು ಗಾಂಧಿನಗರದಲ್ಲಿ ಬಿಜೆಪಿ ಇಂದು ಸಭೆ ನಡೆಸಿದ ನಂತರ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. 

ಈ ಸುದ್ದಿ ತಿಳಿದ ಬಳಿಕ ಗುಜರಾತ್ ಬಿಜೆಪಿ ಕಚೇರಿಯ ಮುಂದೆ ಸಂಭ್ರಮಾಚರಣೆ ಮನೆ ಮಾಡಿದೆ.

ಬಿಜೆಪಿ ಸುದ್ದಿಗೋಷ್ಠಿ:

ಇದಕ್ಕೂ ಮೊದಲು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಇತರ ಮಂತ್ರಿಗಳ ಜೊತೆಯಲ್ಲಿ ರುಪಾನಿ  ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಇತ್ತೀಚಿನ ಚುನಾವಣೆಯಲ್ಲಿ 182 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 77, ಮತ್ತು ಇತರ ಆರು ಸ್ಥಾನಗಳನ್ನು ಗೆದ್ದಿದ್ದಾರೆ.

Trending News