ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ತಾವು ಬ್ಯಾಂಕಿನಿಂದ ಪಡೆದಿದ್ದ ಸಾವಿರಾರು ಕೋಟಿ ರೂ. ಸಾಲವನ್ನು ಮರುಪಾವತಿ ಮಾಡುವುದಾಗಿ ಬುಧವಾರ ಹೇಳಿದ್ದಾರೆ.
ಈ ಟ್ವೀಟ್ ಮಾಡಿರುವ ಮಲ್ಯ, ಯುಕೆ ನ್ಯಾಯಾಲಯದಲ್ಲಿ ಮಲ್ಯ ಹಸ್ತಾಂತರ ಸಂಬಂಧದ ತೀರ್ಪಿಗೆ ಇನ್ನು ಐದು ದಿನಗಳು ಬಾಕಿ ಇದ್ದು, ಅವರು ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಹಿಂದಿರುಗಿಸುವುದಾಗಿ ನೀಡಿದ್ದ ಆಫರ್ ಸುಳ್ಳು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿತ್ತು. ಇದಕ್ಕೀಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಲ್ಯ, ಇದೊಂದು ನಾನ್ಸೆನ್ಸ್. ನಾನು 2016ರಿಂದ ಸೆಟ್ಲ್ಮೆಂಟ್ ಆಫರ್ ನೀಡುತ್ತಾ ಬಂದಿದ್ದೇನೆ. ನಿಮ್ಮ ವರದಿಯನ್ನು ಪರಿಶೀಲಿಸಿಕೊಳ್ಳಿ, ಪ್ರಸಾರದ ಸವಲತ್ತುಗಳನ್ನು ಹೀಗೆ ದುರುಪಯೋಗ ಮಾಡಬೇಡಿ ಎಂದು ಕುಟುಕಿದ್ದಾರೆ.
ರಾಜಕಾರಣಿಗಳು ಹಾಗೂ ಮಾಧ್ಯಮಗಳು ನಾನು ಪಿಎಸ್ಯು ಬ್ಯಾಂಕ್ನಿಂದ ಹಣ ಪಡೆದು, ಓಡಿ ಹೋಗಿರುವುದಾಗಿ ಬಾಯಿ ಬಡಿದುಕೊಳ್ಳುತ್ತಿವೆ. ಇವೆಲ್ಲಾ ಸುಳ್ಳು. ಈ ಹಿಂದೆಯೇ ಕರ್ನಾಟಕ ಹೈಕೋರ್ಟ್ ಎದುರು ಸೆಟೆಲ್ಮೆಂಟ್ ಆಫರ್ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ಈ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ.
Politicians and Media are constantly talking loudly about my being a defaulter who has run away with PSU Bank money. All this is false. Why don’t I get fair treatment and the same loud noise about my comprehensive settlement offer before the Karnataka High Court. Sad.
— Vijay Mallya (@TheVijayMallya) December 5, 2018
ಮುಂದುವರೆದು, ಕಿಂಗ್ ಫಿಷರ್ ಏರ್ಲೈನ್ಸ್ ನಷ್ಟ ಎದುರಿಸಲು ಮುಖ್ಯ ಕಾರಣವೇನು ಎಂಬುದನ್ನು ವಿವರಿಸುತ್ತಾ, ಎಟಿಎಫ್ (ಏವಿಯೇಷನ್ ಟ್ರಿಬ್ಯುನಲ್ ಫ್ಯುಯಲ್) ಏರಿಕೆಯಾಗಿದ್ದು ನಮಗೆ ದೊಡ್ಡ ಹೊಡೆತವಾಗಿತ್ತು. ಆಗ ಒಂದು ಬ್ಯಾರೆಲ್ಗೆ 140 ಡಾಲರ್ ನೀಡಿ ಇಂಧನ ಖರೀದಿಸಬೇಕಾದ ಪರಿಸ್ಥಿತಿ ಇತ್ತು. ಈ ಕಾರಣದಿಂದ ಕಂಪನಿ ನಷ್ಟ ಅನುಭವಿಸಿದ್ದರಿಂದ ಬ್ಯಾಂಕ್ ನಿಂದ ಪಡೆದ ಹಣವೂ ಖರ್ಚಾಯ್ತು. ಆದರೆ ಈಗಾಗಲೇ ನಾನು ಬ್ಯಾಂಕ್ಗಳಿಗೆ ಶೇ.100ರಷ್ಟು ಮೂಲ ಮೊತ್ತ ಸಂದಾಯ ಮಾಡುವುದಾಗಿ ಹೇಳಿದ್ದೇನೆ. ದಯಮಾಡಿ ತೆಗೆದುಕೊಳ್ಳಿ ಎಂದು ಮಲ್ಯ ಮನವಿ ಮಾಡಿದ್ದಾರೆ.
Airlines struggling financially partly becoz of high ATF prices. Kingfisher was a fab airline that faced the highest ever crude prices of $ 140/barrel. Losses mounted and that’s where Banks money went.I have offered to repay 100 % of the Principal amount to them. Please take it.
— Vijay Mallya (@TheVijayMallya) December 5, 2018
ಅಷ್ಟೇ ಅಲ್ಲದೆ, ಭಾರತದ ಅತಿದೊಡ್ಡ ಮದ್ಯ ಕಂಪನಿಯಾಗಿ ಕಿಂಗ್ ಫಿಷರ್ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಗಳಷ್ಟು ಕೊಡುಗೆ ನೀಡಿದೆ. ಹಾಗೆಯೇ ಕಿಂಗ್ ಫಿಷರ್ ಏರ್ ಲೈನ್ಸ್ ಕೂಡ ಉತ್ತಮ ಕೊಡುಗೆ ನೀಡಿದೆ. ಸದ್ಯ ಹೆಸರಾಂತ ಏರ್ಲೈನ್ಸ್ ಕಂಪನಿಯೊಂದು ನಷ್ಟದಲ್ಲಿದ್ದರೂ ಬ್ಯಾಂಕ್ ಸಾಲ ತೀರಿಸಲು ಸಿದ್ಧನಿದ್ದೇನೆ. ಇಷ್ಟಾಗ್ಯೂ ಮಾಧ್ಯಮಗಳು ನನ್ನ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡುತ್ತಿರುವುದು ಏಕೆ? ಸಾಲ ಮರುಪಾವತಿಸುವುದಾಗಿ ಹೇಳಿದ್ದರೂ ಬ್ಯಾಂಕುಗಳು ಸ್ವೀಕರಿಸಲು ಸಿದ್ಧವಿಲ್ಲವೇಕೆ? ಎಂದು ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
I see the quick media narrative about my extradition decision. That is separate and will take its own legal course. The most important point is public money and I am offering to pay 100% back. I humbly request the Banks and Government to take it. If payback refused, WHY ?
— Vijay Mallya (@TheVijayMallya) December 5, 2018