VIDEO:ಡಿಸೆಂಬರ್ 15ರಂದು ಜಾಮಿಯಾ ಲೈಬ್ರರಿಯಲ್ಲಿ ನಡೆದಿದ್ದಾದರು ಏನು?

ವಿಡಿಯೋ ಬಿಡುಗಡೆಗೊಳಿಸಿರುವ ಜಾಮಿಯಾ ಕೋಆರ್ಡಿನೆಶನ್ ಕಮೀಟಿ, ಪೊಲೀಸರು ಲೈಬ್ರರಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಾರ್ಬರಾ ಕೃತ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದೆ.

Last Updated : Feb 16, 2020, 11:11 AM IST
VIDEO:ಡಿಸೆಂಬರ್ 15ರಂದು ಜಾಮಿಯಾ ಲೈಬ್ರರಿಯಲ್ಲಿ ನಡೆದಿದ್ದಾದರು ಏನು? title=

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾನಲ್ಲಿ ಡಿಸೆಂಬರ್ 15ರಂದು ವಿದ್ಯಾರ್ಥಿಗಳ ಜೊತೆಗೆ ನಡೆದ ಹೀನ ಕೃತ್ಯದ ಎರಡು ತಿಂಗಳ ಬಳಿಕ ಇದೀಗ ಘಟನೆಯ ಬೆಚ್ಚಿಬೀಳಿಸುವ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಲೈಬ್ರರಿ ಪ್ರವೇಶಿಸಿರುವ ಪೊಲೀಸರು ವಿದ್ಯಾರ್ಥಿಗಳ ಮಳೆ ಲಾಠಿ ಪ್ರಹಾರ ನಡೆಸುತ್ತಿರುವುದು ಇದೀಗ ಬಹಿರಂಗಗೊಂಡಿದೆ. ಜಾಮಿಯಾ ಕೋಆರ್ಡಿನೇಷನ್ ಕಮೀಟಿ ಈ ವಿಡಿಯೋ ಅನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದೆ. ಲೈಬ್ರರಿಯಲ್ಲಿ ಕೆಲ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವುದು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಕಂಡು ಬರುತ್ತಿದೆ. ಇದೇ ವೇಳೆ ಲೈಬ್ರರಿ ಪ್ರವೇಶಿಸಿರುವ ಪೊಲೀಸರು ವಿದ್ಯಾರ್ಥಿಗಳನ್ನು ಬೆತ್ತದಿಂದ ಥಳಿಸಲು ಪ್ರಾರಂಭಿಸುತ್ತಾರೆ.

ವಿಡಿಯೋ ಹಂಚಿಕೊಂಡು ಹೇಳಿಕೆ ನೀಡಿರುವ ಜಾಮಿಯಾ ಕೋಆರ್ಡಿನೇಷನ್ ಕಮೀಟಿ, ಲೈಬ್ರರಿಗೆ ಪ್ರವೆಶಿಸಿರುವ ಅಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಬರ್ಬರ ಕೃತ್ಯ ಎಸಗಿದ್ದಾರೆ ಎಂದು ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಕಮೀಟಿ, "ಲೈಬ್ರರಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬರ್ಬರ ಕೃತ್ಯ ಎಸಗುತ್ತಿರುವ ವಿಡಿಯೋದ ಎಕ್ಸ್ಕ್ಲೂಸಿವ್ CCTV ಫೂಟೆಜ್. ಇದು ಲೈಬ್ರರಿಯ M.A./M.Phil ಸೆಕ್ಷನ್, ಫಸ್ಟ್ ಫ್ಲೋರ್, ಓಲ್ಡ್ ರೀಡಿಂಗ್ ಹಾಲ್ ನ CCTV ಫೂಟೇಜ್ ಆಗಿದೆ" ಎಂದು ಹೇಳಿದೆ.

ಪೊಲೀಸರ ಲಾಠಿ ಚಾರ್ಜ್ ಬಳಿಕ ವಿದ್ಯಾರ್ಥಿಗಳು ಲೈಬ್ರರಿಯನ್ನು ಖಾಲಿ ಮಾಡಿ ಓಡಿಹೋಗುತ್ತಿರುವುದನ್ನು ತೋರಿಸಲಾಗಿದೆ. ಜಾಮಿಯಾ ವಿವಿಯಲ್ಲಿ ಹಿಂಸಾಚಾರ ನಡೆದ ದಿನದ ಫೂಟೇಜ್ ಇದಾಗಿದೆ ಅಂದು ಕಮೀಟಿ ಹೇಳಿಕೊಂಡಿದೆ.

ವಿಡಿಯೋ ಜಾರಿಗೊಳಿಸಿರುವ ಕಮೀಟಿ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ, ಈ ಕಮೀಟಿಯ ಸದಸ್ಯರಲ್ಲಿ ಕೆಲ ಹಳೆ ವಿದ್ಯಾರ್ಥಿಗಳು ಕೂಡ ಶಾಮೀಲಾಗಿದ್ದಾರೆ. ಈ ಕಮೀಟಿ CAA ಹಾಗೂ NRC ವಿರುದ್ಧ ನಡೆಸಲಾಗುತ್ತಿರುವ ಆಂದೋಲನದ ನೇತೃತ್ವ ವಹಿಸಿಕೊಂಡಿದೆ. ಪೊಲೀಸರು ಇದುವರೆಗೆ ಈ ವಿಡಿಯೋ ಅನ್ನು ಖಚಿತಪಡಿಸಿಲ್ಲ.

Trending News