VIDEO: ಛತ್ತೀಸ್ಗಡದಲ್ಲಿ ಆದಿವಾಸಿ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

ಛತ್ತೀಸ್ ಘಡದ ಬೈಲಾಪುರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಮುಖ್ಯಮಂತ್ರಿ ರಮಣ್ ಸಿಂಗ್ ಉಪಸ್ಥಿತಿಯಲ್ಲಿ, ಚರಣ್-ಪಾದುಕಾ ಯೋಜನೆಗೆ ಚಾಲನೆ ನೀಡಿದರು. 

Last Updated : Apr 14, 2018, 07:25 PM IST
VIDEO: ಛತ್ತೀಸ್ಗಡದಲ್ಲಿ ಆದಿವಾಸಿ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ title=

ಬಿಜಾಪುರ: ಅಧಿಕಾರದಲ್ಲಿರುವವರು ತಮ್ಮ ಕೈಕೆಳಗಿನ ಅಧಿಕಾರಿಗಳಿಂದ ಸೇವೆ ಮಾಡಿಸಿಕೊಲ್ಲುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ದೇಶದ ಪ್ರಧಾನಿಯೊಬ್ಬರು ಬುಡಕಟ್ಟು ಮಹಿಳೆಗೆ ಪಾದರಕ್ಷೆ ತೊಡಿಸುವ ಬಗ್ಗೆ ಕೇಳಿದ್ದೀರಾ? ವಿಚಿತ್ರ ಅನ್ನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!

ಛತ್ತೀಸ್ ಘಡದ ಬೈಲಾಪುರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಮುಖ್ಯಮಂತ್ರಿ ರಮಣ್ ಸಿಂಗ್ ಉಪಸ್ಥಿತಿಯಲ್ಲಿ, ಚರಣ್-ಪಾದುಕಾ ಯೋಜನೆಗೆ ಚಾಲನೆ ನೀಡಿದರು. ಛತ್ತೀಸ್ ಘಡದ ಆದಿವಾಸಿ ಮಹಿಳೆಯರಿಗಾಗಿ ಉಚಿತ ಪಾದರಕ್ಷೆ ನೀಡುವ ಯೋಜನೆಯನ್ನು ಅಲ್ಲಿನ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಗೆ ಇಂದು ಚಾಲನೆ ನೀಡಿದ ಪ್ರಧಾನಿ ಮೋದಿ, ಆದಿವಾಸಿ ಮಹಿಳೆಯರ ಕೈಗೆ ಪಾದರಕ್ಷೆ ನೀಡದೆ, ಅವರ ಪಾದಗಳಿಗೆ ಪಾದರಕ್ಷೆ ತೊಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಇದೀಗ ಆ ವೀಡಿಯೋ ಸಖತ್ ವೈರಲ್ ಆಗಿದೆ. 

Trending News