VIDEO: ವ್ಯಕ್ತಿಯ ಬೆನ್ನೇರಿ ಕುಳಿತ ಹುಲಿ, ಚಾಣಾಕ್ಷತೆ ಮೆರೆದು ಪಾರಾದ ವ್ಯಕ್ತಿ

ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಗ್ರಾಮವೊಂದರಲ್ಲಿ ಹುಲಿಯೊಂದು ಜನಸಂದಣಿಗೆ ಬೆದರಿ  ಓಡಿಹೋಗಿ ಮನುಷ್ಯನ ಬೆನ್ನಿನ ಮೇಲೆ ಕುಳಿತಿದ್ದು ಬಳಿಕ ಭೀತಿಯ ಪರಿಸ್ಥತಿ ಉಂಟಾಗಿದೆ.

Last Updated : Jan 27, 2020, 09:23 PM IST
VIDEO: ವ್ಯಕ್ತಿಯ ಬೆನ್ನೇರಿ ಕುಳಿತ ಹುಲಿ, ಚಾಣಾಕ್ಷತೆ ಮೆರೆದು ಪಾರಾದ ವ್ಯಕ್ತಿ title=

ಭಂಡಾರ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಗ್ರಾಮವೊಂದರಲ್ಲಿ ಹುಲಿಯೊಂದು ಜನಸಂದಣಿಗೆ ಬೆದರಿ  ಓಡಿಹೋಗಿ ಮನುಷ್ಯನ ಬೆನ್ನಿನ ಮೇಲೆ ಕುಳಿತಿದ್ದು ಬಳಿಕ ಭೀತಿಯ ಪರಿಸ್ಥತಿ ಉಂಟಾಗಿದೆ. ಈ ವೇಳೆ ಅಪಾಯಕ್ಕೆ ಸಿಲುಕಿರುವ ವ್ಯಕ್ತಿ, ಚಾಣಾಕ್ಷತೆಯನ್ನು ಮೆರೆದು, ತನ್ನ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.  ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಈ ವೀಡಿಯೊದಲ್ಲಿ, ಹುಲಿ ನೆಲದ ಮೇಲೆ ಮಲಗಿರುವ ವ್ಯಕ್ತಿಯ ಬೆನ್ನಿನ ಮೇಲೆ ಕುಳಿತುಕೊಂಡಿರುವುದನ್ನು ನೀವು ಕಾಣಬಹುದು. ಈ ವೇಳೆ, ಜೀವನ್ಮರಣದ ಮಧ್ಯೆ ಸಿಲುಕಿಕೊಂಡ ವ್ಯಕ್ತೆ, ಬುದ್ಧಿವಂತಿಕೆಯನ್ನು ಮೆರೆದು ತನ್ನ ಉಸಿರಾಟವನ್ನು ನಿಲ್ಲಿಸಿ ಸಾವನ್ನಪ್ಪಿರುವಂತೆ ಅಭಿನಯಿಸಿದ್ದಾನೆ. ಈ ತಂತ್ರದಿಂದ ಮೋಸಗೊಂಡ  ಹುಲಿ ಆತನ ಮೇಲೆ ದಾಳಿ ನಡೆಸದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೆಲವೇ ಸೆಕೆಂಡುಗಳಲ್ಲಿ, ಜನಸಮೂಹವು ಈ ಹುಲಿಯ ಬೆನ್ನಟ್ಟುತ್ತದೆ. ಇದನ್ನು ಮನಗಂಡ ನರಭಕ್ಷಕ ಪ್ರಾಣಿ ಅಲ್ಲಿಂದ ಕಾಲ್ಕಿತ್ತಿದೆ.

ಘಟನೆಯ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು, "ಹುಲಿಯೊಂದಿಗಿನ ಮುಖಾಮುಖಿಯಲ್ಲಿ ಮನುಷ್ಯ ಹೇಗೆ ಚಾಣಾಕ್ಷತೆಯಿಂದ ಪಾರಾಗಿದ್ದಾನೆ ಎಂಬುದನ್ನು ನೀವೂ ನೋಡಬಹುದು. ವಿಡಿಯೋದಲ್ಲಿ ಜನರು ಹುಲಿಯನ್ನು ಸುತ್ತುವರೆದಿದ್ದಾರೆ. ಆದರೆ, ಅದೃಷ್ಟವಶಾತ್ ಮನುಷ್ಯ ಮತ್ತು ಹುಲಿ ಇಬ್ಬರೂ ಸರಿಯಾದ ಅಂತ್ಯ ಕಂಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಜನವರಿ 25 ರಂದು ನಡೆದ ಹುಲಿ ದಾಳಿಯಿಂದ ಈ ಗ್ರಾಮದಲ್ಲಿ ಮೂವರು ಜನರು ಗಾಯಗೊಂಡಿದ್ದರು. ಅಂದಿನಿಂದ, ಈ ಪ್ರದೇಶದಲ್ಲಿ  ಜನರು ಗುಂಪುಗೂಡಿ ಕಾಡು ಪ್ರಾಣಿಯನ್ನು ಹೊಡೆದೋಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

Trending News