ನವದೆಹಲಿ: ಮುಂದಿನ ಕೆಲವು ವಾರಗಳಲ್ಲಿ ಕರೋನವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದರು. ವಿಜ್ಞಾನಿಗಳು ಹಸಿರು ಸಂಕೇತ ನೀಡಿದ ಕೂಡಲೇ ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಪಿಎಂ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
Experts believe that COVID vaccine will be ready in the next few weeks. As soon as scientists give a green signal, vaccination will start in India. Healthcare, frontline workers & elderly person suffering from serious diseases will be given priority in vaccination: PM Modi pic.twitter.com/drikqdZf0S
— ANI (@ANI) December 4, 2020
ಭಾರತದಲ್ಲಿನ ಕರೋನವೈರಸ್ (Coronavirus) ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿವಿಧ ರಾಜಕೀಯ ಸಂಘಟನೆಗಳ ಮುಖಂಡರು ಮತ್ತು ಉನ್ನತ ಕೇಂದ್ರ ಸಚಿವರೊಂದಿಗೆ ಸರ್ವಪಕ್ಷ ಸಭೆ (All Party Meeting) ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ಜಗತ್ತು ನಿಗಾ ಇಡುತ್ತಿದೆ. ಅದಕ್ಕಾಗಿಯೇ ಇಡೀ ವಿಶ್ವದ ಕಣ್ಣು ಭಾರತದ ಮೇಲೆ ನೆಟ್ಟಿದೆ ಎಂದು ಹೇಳಿದರು.
ಡಾರ್ಕ್ ಚಾಕೊಲೇಟ್, ಗ್ರೀನ್ ಟೀ, ದ್ರಾಕ್ಷಿಯಿಂದ Covid-19 ತಡೆಯಬಹುದಂತೆ!
ಇದೇ ಸಂದರ್ಭದಲ್ಲಿ ಕೋವಿಡ್ -19 ಲಸಿಕೆಯ (Covid 19 Vaccine) ಬೆಲೆ ಕುರಿತಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
Prime Minister Narendra Modi addresses all-party meeting called by him to discuss the COVID-19 situation, through video conferencing. pic.twitter.com/nnJdMuIA46
— ANI (@ANI) December 4, 2020
ಮುಂದಿನ ಕೆಲವು ವಾರಗಳಲ್ಲಿ ಕೋವಿಡ್-19 (Covid 19) ಲಸಿಕೆ ಸಿದ್ಧವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡಿದ ತಕ್ಷಣ, ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಕರೋನಾ ವಾರಿಯರ್ಸ್ ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ವ್ಯಾಕ್ಸಿನೇಷನ್ನಲ್ಲಿ ಆದ್ಯತೆ ನೀಡಲಾಗುವುದು ಎಂದು ಪಿಎಂ ಮೋದಿ ಸಭೆಯಲ್ಲಿ ಹೇಳಿದರು.
Centre is in talks with State governments over the price of vaccine and decision regarding it will be taken keeping public health as topmost priority: Prime Minister Narendra Modi pic.twitter.com/mlkxdLwiwg
— ANI (@ANI) December 4, 2020
Teams of Central & State govts are working together for vaccine distribution. India has the expertise & capacity in vaccine distribution & fare better compared to other nations. We've a very big & experienced network in the field of vaccination. We will fully exploit it: PM Modi pic.twitter.com/fG4or0Nx5Q
— ANI (@ANI) December 4, 2020
ಲಸಿಕೆ ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಂಡಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಲಸಿಕೆ ವಿತರಣೆಯಲ್ಲಿ ಭಾರತವು ಪರಿಣತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ದರಗಳು ಉತ್ತಮವಾಗಿರಲಿವೆ. ವ್ಯಾಕ್ಸಿನೇಷನ್ ಕ್ಷೇತ್ರದಲ್ಲಿ ನಮ್ಮಲ್ಲಿ ಬಹಳ ದೊಡ್ಡ ಮತ್ತು ಅನುಭವಿ ಜಾಲವಿದೆ. ನಾವು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ವಿಶ್ವಾಸದಿಂದ ನುಡಿದರು.
ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ
ಎಲ್ಲಾ ನಾಯಕರು ತಮ್ಮ ಸಲಹೆಗಳನ್ನು ಲಿಖಿತವಾಗಿ ಕಳುಹಿಸುವಂತೆ ಸಭೆಯಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಾಯಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
I appeal to leaders of all political parties to send your suggestions in writing. I assure you that they will be considered seriously: Prime Minister Narendra Modi#COVID19 https://t.co/D1WWapSxkm
— ANI (@ANI) December 4, 2020
ಕೋವಿಡ್ -19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಾಜಿ ಪ್ರಧಾನಿ ಮತ್ತು ಜನತಾದಳ (ಜಾತ್ಯತೀತ) ಮುಖ್ಯಸ್ಥ ಎಚ್.ಡಿ. ದೇವೇಗೌಡ (HD Devegowda) ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದಾರೆ.
Bengaluru: Former PM and Janata Dal (Secular) chief HD Deve Gowda participates in the all-party meeting called by Prime Minister Narendra Modi to discuss the COVID-19 situation, through video conferencing. pic.twitter.com/E511Fnii2I
— ANI (@ANI) December 4, 2020