ಉತ್ತರ ಪ್ರದೇಶ: ಪ್ರಯಾಗರಾಜ್‌ನಲ್ಲಿ 35 ಹಸುಗಳ ಶವ ಪತ್ತೆ

ಮಿಂಚಿನಿಂದ ಜಾನುವಾರುಗಳು ಸಾವನ್ನಪ್ಪಿವೆ ಎಂದು ಪೊಲೀಸರು ನಂಬಿದ್ದಾರೆ.

Last Updated : Jul 12, 2019, 02:16 PM IST
ಉತ್ತರ ಪ್ರದೇಶ: ಪ್ರಯಾಗರಾಜ್‌ನಲ್ಲಿ 35 ಹಸುಗಳ ಶವ ಪತ್ತೆ title=
Pic Courtesy: ANI

ಪ್ರಯಾಗರಾಜ್: ಅತ್ಯಂತ ದುರದೃಷ್ಟಕರ ಘಟನೆಯಲ್ಲಿ, ಉತ್ತರ ಪ್ರದೇಶದ ಪ್ರಯಾಗ್ರಾಜ್‌ನಲ್ಲಿ 35 ಹಸುಗಳು ತಾತ್ಕಾಲಿಕ ಶೆಡ್‌ನಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಮಿಂಚಿನಿಂದ ಜಾನುವಾರುಗಳು ಸಾವನ್ನಪ್ಪಿವೆ ಎಂದು ಪೊಲೀಸರು ನಂಬಿದ್ದಾರೆ. ಮಿಂಚಿನಿಂದಾಗಿ 35 ಹಸುಗಳು ಸಾವನ್ನಪ್ಪಿವೆ, ಉಳಿದ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾನು ಚಂದ್ರ ಗೋಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಸುವಿನ ಶೆಡ್‌ಗಳು ಸೂಕ್ತ ವ್ಯವಸ್ಥೆಯಿಂದ ಕೂಡಿರುವಂತೆ ನೋಡಿಕೊಳ್ಳುಬೇಕು  ಮತ್ತು ಪ್ರಾಣಿಗಳನ್ನು ರಕ್ಷಿಸಲು ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಜಲಾಲಾಬಾದ್‌ನಲ್ಲೂ ಕಳೆದ ವಾರ ಕನ್ನೌಜ್ ಜಿಲ್ಲೆಯ ಹಸುವಿನ ಶೆಡ್‌ನಲ್ಲಿ ಹಸಿವಿನಿಂದಾಗಿ ಒಂದು ಡಜನ್‌ಗೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

Trending News