ಉತ್ತರಾಖಂಡ: ಪಂಚಾಯತ್ ಚುನಾವಣೆ ಬಗ್ಗೆ ಹೈಕೋರ್ಟ್‌ನ ಮಹತ್ವದ ನಿರ್ಧಾರ

ನೈನಿತಾಲ್ ಹೈಕೋರ್ಟ್: ಉತ್ತರಾಖಂಡ ಸರ್ಕಾರ ಈ ವರ್ಷದ ವಿಧಾನಸಭೆಯಿಂದ ಜೂನ್ 26 ರ ಪಂಚಾಯತಿ ರಾಜ್ (ತಿದ್ದುಪಡಿ) ಕಾಯ್ದೆ 2019 ಅನ್ನು ಅಂಗೀಕರಿಸಿತು.  

Last Updated : Sep 19, 2019, 12:24 PM IST
ಉತ್ತರಾಖಂಡ: ಪಂಚಾಯತ್ ಚುನಾವಣೆ ಬಗ್ಗೆ ಹೈಕೋರ್ಟ್‌ನ ಮಹತ್ವದ ನಿರ್ಧಾರ title=

ಡೆಹ್ರಾಡೂನ್: ಪಂಚಾಯತ್ ಚುನಾವಣೆಯಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಗುರುವಾರ (ಸೆಪ್ಟೆಂಬರ್ 19) ನೈನಿತಾಲ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಂಚಾಯತ್ ಚುನಾವಣೆಯಲ್ಲಿ ಇಬ್ಬರು ಮಕ್ಕಳ ನಿಯಮ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಉತ್ತರಾಖಂಡ ಸರ್ಕಾರದ ತಿದ್ದುಪಡಿ ಕಾಯ್ದೆಯನ್ನು ನ್ಯಾಯಾಲಯ ತಡೆಹಿಡಿದಿದೆ. 

ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ತಂದಿತ್ತು. ಉತ್ತರಾಖಂಡ ಸರ್ಕಾರವು ಈ ವರ್ಷದ ಜೂನ್ 26 ರಂದು ಪಂಚಾಯತಿ ರಾಜ್ (ತಿದ್ದುಪಡಿ) ಕಾಯ್ದೆ 2019 ಅನ್ನು ವಿಧಾನಸಭೆಯಿಂದ ಅಂಗೀಕರಿಸಿದೆ. 

ನೈನಿತಾಲ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಆಗಸ್ಟ್ 22 ರಂದು ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಪಂಚಾಯತ್ ಕಾಯ್ದೆಯ ಅವಕಾಶವನ್ನು ಕೋಟಬಾಗ್‌ನ ಮನೋಹರ್ ಲಾಲ್, ಮಾಜಿ ಬ್ಲಾಕ್ ಮುಖ್ಯಸ್ಥ ಜೋತ್ ಸಿಂಗ್ ಬಿಶ್ತ್ ಮತ್ತು ಇತರರು ಪ್ರಶ್ನಿಸಿದರು.

ಉತ್ತರಾಖಂಡ ಸರ್ಕಾರ ಪಂಚಾಯತಿ ರಾಜ್ (ತಿದ್ದುಪಡಿ) ಕಾಯ್ದೆ 2019ರ ಅನ್ವಯ, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿ ಯಾವುದೇ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಅಭ್ಯರ್ಥಿ ನಿರ್ದಿಷ್ಟ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಬೇಕು ಎಂಬ ಅಂಶಗಳನ್ನೂ ಸೇರಿಸಲಾಗಿದ್ದು, ಅರ್ಜಿದಾರರು ಇದನ್ನು ಪ್ರಶ್ನಿಸಿದ್ದಾರೆ.

ಜೂನ್‌ನಲ್ಲಿ ಉತ್ತರಾಖಂಡ ಸರ್ಕಾರ ಪಂಚಾಯತಿ ರಾಜ್ (ತಿದ್ದುಪಡಿ) ಕಾಯ್ದೆ 2019 ಅನ್ನು ವಿಧಾನಸಭೆಯಿಂದ ಅಂಗೀಕರಿಸಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಗ್ರಾಮ ಪ್ರಧಾನ್‌ಗಳು ಕ್ಷೇತ್ರ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ, ಸ್ಪರ್ಧಿಸುವ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಸಹ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

Trending News