ಉತ್ತರಾಖಂಡದ ಹಲವೆಡೆ ಭೂಕಂಪದ ಅನುಭವ

ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ನಷ್ಟವನ್ನು ವಿಪತ್ತು ನಿರ್ವಹಣಾ ತಂಡವು ನಿರಾಕರಿಸಿದೆ.

Last Updated : Nov 12, 2019, 11:56 AM IST
ಉತ್ತರಾಖಂಡದ ಹಲವೆಡೆ ಭೂಕಂಪದ ಅನುಭವ title=

ಡೆಹ್ರಾಡೂನ್: ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಪಿಥೋರಗಢ ಮತ್ತು ರಾಜ್ಯದ ಬಾಗೇಶ್ವರದಲ್ಲಿನ ಜನರಿಗೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.5 ರಷ್ಟು ದಾಖಲಾಗಿದೆ.

ಪಿಥೋರಗಢದ ನಚ್ನಿ, ಮುನ್ಸಿಯಾರಿ ಮತ್ತು ಥಾಲ್ ಮುಂತಾದ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ನಷ್ಟವನ್ನು ವಿಪತ್ತು ನಿರ್ವಹಣಾ ತಂಡವು ನಿರಾಕರಿಸಿದೆ.

ಸ್ಫೋಟ ಬೆದರಿ, ಪ್ರದೇಶದಲ್ಲಿ ಭದ್ರತೆ ಹೆಚ್ಚಳ:
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat)  ಅವರಿಗೆ ಕರೆ ಮಾಡಿ ಹರ್ ಹರ್ ಪೌರಿ ಮೇಲೆ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ವೈಯಕ್ತಿಕ ಮೊಬೈಲ್‌ನಲ್ಲಿ ಈ ಕರೆಯನ್ನು ಅವರ ಪ್ರೋಟೋಕಾಲ್ ಅಧಿಕಾರಿ ಆನಂದ್ ರಾವತ್ ಸ್ವೀಕರಿಸಿದ್ದಾರೆ. ಆ ಸಂದರ್ಭದಲ್ಲಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದರು ಮತ್ತು ಅವರು ಹರ್ ಕಿ ಪೌರಿಯನ್ನು ಸ್ಫೋಟಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಹರಿದ್ವಾರ ಕೊಟ್ವಾಲಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
 

Trending News