ಉತ್ತರಾಖಂಡ: ಶಾಲಾ ವ್ಯಾನ್ ಕಮರಿಗೆ ಬಿದ್ದು 8 ಮಕ್ಕಳ ಸಾವು

ದುರಂತ ಘಟನೆಯೊಂದರಲ್ಲಿ, ಉತ್ತರಾಖಂಡದ ಡೆಹ್ರಾಡೂನ್‌ನ ಕಂಗ್ಸಾಲಿ ಗ್ರಾಮದ ಬಳಿ ಮಂಗಳವಾರ ಶಾಲಾ ವ್ಯಾನ್ ಆಳವಾದ ಕಮರಿಗೆ ಬಿದ್ದು ಕನಿಷ್ಠ ಎಂಟು ಮಕ್ಕಳು ಅಸುನೀಗಿದ್ದಾರೆ.

Last Updated : Aug 6, 2019, 10:52 AM IST
ಉತ್ತರಾಖಂಡ: ಶಾಲಾ ವ್ಯಾನ್ ಕಮರಿಗೆ ಬಿದ್ದು 8 ಮಕ್ಕಳ ಸಾವು title=

ಡೆಹ್ರಾಡೂನ್‌: ದುರಂತ ಘಟನೆಯೊಂದರಲ್ಲಿ, ಉತ್ತರಾಖಂಡದ ಡೆಹ್ರಾಡೂನ್‌ನ ತೆಹ್ರಿ ಗರ್ವಾಲ್‌ನ ಕಂಗ್ಸಾಲಿ ಗ್ರಾಮದ ಬಳಿ ಮಂಗಳವಾರ ಶಾಲಾ ವ್ಯಾನ್ ಆಳವಾದ ಕಮರಿಗೆ ಬಿದ್ದು ಕನಿಷ್ಠ ಎಂಟು ಮಕ್ಕಳು ಅಸುನೀಗಿದ್ದಾರೆ.

ವರದಿಗಳ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಮುಖ್ಯರಸ್ತೆಯಿಂದ ಪಕ್ಕಕ್ಕೆ ತಿರುಗಿ ಕಮರಿಗೆ ಬಿದ್ದಿದ್ದೆ. ವ್ಯಾನ್‌ನಲ್ಲಿ ಒಟ್ಟು 18 ಮಕ್ಕಳಿದ್ದರು ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

ಘಟನೆಯಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಗರ್ವಾಲ್) ಅಜಯ್ ರೌತೆಲಾ ಖಚಿತಪಡಿಸಿದ್ದಾರೆ. ಏತನ್ಮಧ್ಯೆ, ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. 

Trending News