ಉತ್ತರ ಪ್ರದೇಶದಲ್ಲಿ ಗ್ಯಾಂಗ್ ರೇಪ್ ನಂತರ ಮೃತಪಟ್ಟ ಅಪ್ರಾಪ್ತ ಬಾಲಕಿ

   

Last Updated : Aug 23, 2018, 08:36 PM IST
ಉತ್ತರ ಪ್ರದೇಶದಲ್ಲಿ ಗ್ಯಾಂಗ್ ರೇಪ್ ನಂತರ ಮೃತಪಟ್ಟ ಅಪ್ರಾಪ್ತ ಬಾಲಕಿ title=

ನವದೆಹಲಿ: ಉತ್ತರ ಪ್ರದೇಶದ ಬುಡೌನ್ ನಗರದಲ್ಲಿ ಎರಡು ದಿನಗಳ ಹಿಂದೆ ಸರ್ಕಾರಿ ಶಾಲೆಯೊಳಗೆ ಮೂವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಪಟ್ಟ ಅಪ್ರಾಪ್ತ ಬಾಲಕಿ ಗುರುವಾರದಂದು ಸಾವನ್ನಪ್ಪಿದ್ದಾಳೆ.

ಈ ಘಟನೆ ವಿಚಾರವಾಗಿ  ಪ್ರತಿಕ್ರಿಯಿಸಿರುವ ಬಾಲಕಿಯ ತಾಯಿ  "ನನ್ನ ಮಗಳು  ತನ್ನಕ್ಕಷ್ಟೇ ತಾನೆ ಅಸಹ್ಯಪಟ್ಟು ನೇಣು ಹಾಕಿಕೊಂಡಿದ್ದಾಳೆ ಮತ್ತು ಅವಳ ಸಹೋದರರು ಕೂಡ  ಬೆದರಿಕೆ ಹಾಕಬಹುದುದೆಂದು ಹೆದರಿ ಈ ನಿರ್ಧಾರ ಕೈಕೊಂಡಿದ್ದಾಳೆ " ಎಂದು ಅವರು ಹೇಳಿದರು.

ಏತನ್ಮಧ್ಯೆ, ಹಿರಿಯ ಪೊಲೀಸ್ ಅಧೀಕ್ಷಕ ಬುಡೌನ್, ಅಶೋಕ್ ಕುಮಾರ್ ಮಾತನಾಡಿ  "ಅತ್ಯಾಚಾರದ ಪ್ರಕರಣದ ವಿಚಾರವಾಗಿ  ಆಗಸ್ಟ್ 21 ರಂದು ದೂರು ದಾಖಲಾಗಿದೆ.ಆ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ, ಆದರೆ ಇಂದು ನಾವು ಆ ಬಾಲಕಿ ನೇಣು ಹಾಕಿಕೊಂಡಿರುವ ವಿಚಾರವನ್ನು ತಿಳಿದೆವು" ಎಂದು ಅವರು ತಿಳಿಸಿದರು.

ಮಾಧ್ಯಮದ ವರದಿಗಳ ಪ್ರಕಾರ, ಸೋಮವಾರದಂದು  ರಾತ್ರಿ ಮೂವರು ಪುರುಷರು ಗನ್ಪಾಯಿಂಟ್ನಲ್ಲಿ ಬಾಲಕಿ  ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಬಂದಾಗ ಅಪಹರಣ ಮಾಡಿ ಅವಳನ್ನು ಸರ್ಕಾರಿ ಶಾಲೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಇದಾದ ನಂತರ ಈ ಬಾಲಕಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಳು ಎಂದು ತಿಳಿದುಬಂದಿದೆ.

Trending News