ಕೇರಳ ಪ್ರವಾಹದ ನಷ್ಟ ಸರಿದೂಗಿಸಲು ದೇವಾಲಯಗಳಲ್ಲಿರುವ ಚಿನ್ನ, ಸಂಪತ್ತನ್ನು ಬಳಸಿ ಎಂದ ಬಿಜೆಪಿ ಸಂಸದ

ಕೇರಳದಲ್ಲಿರುವ ಪದ್ಮನಾಭ, ಶಬರಿಮಲೆ, ಗುರುವಾಯೂರು ದೇವಾಲಯಗಳಲ್ಲಿರುವ ಚಿನ್ನ ಮತ್ತು ಸಂಪತ್ತನ್ನು ಮಾರಿ ಕೇರಳವನ್ನು ಮರು ನಿರ್ಮಾಣದ ಮಾಡಿ ಎಂದ ಬಿಜೆಪಿ ಸಂಸದ.

Last Updated : Sep 14, 2018, 12:12 PM IST
ಕೇರಳ ಪ್ರವಾಹದ ನಷ್ಟ ಸರಿದೂಗಿಸಲು ದೇವಾಲಯಗಳಲ್ಲಿರುವ ಚಿನ್ನ, ಸಂಪತ್ತನ್ನು ಬಳಸಿ ಎಂದ ಬಿಜೆಪಿ ಸಂಸದ title=

ನವದೆಹಲಿ: ದೇವಾಲಯಗಳಲ್ಲಿರುವ ಚಿನ್ನ ಮಾರಿ ಪ್ರವಾಹ ಪೀಡಿತ ಜಿಲ್ಲೆಯ ಜನರಿಗೆ ಸಹಾಯ ಮಾಡಿ ಎಂದು ದೆಹಲಿಯ ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.

ಕೇರಳದಲ್ಲಿರುವ ಪದ್ಮನಾಭ, ಶಬರಿಮಲೆ, ಗುರುವಾಯೂರು ದೇವಾಲಯಗಳಲ್ಲಿರುವ ಚಿನ್ನ ಮತ್ತು ಸಂಪತ್ತನ್ನು ಮಾರಿ ಕೇರಳವನ್ನು ಮರು ನಿರ್ಮಾಣದ ಮಾಡಿ ಎಂದಿರುವ ಬಿಜೆಪಿ ಸಂಸದ ಉದಿತ್ ರಾಜ್, ಈ ಮೂರು ದೇವಾಲಯಗಳಲ್ಲಿರುವ ಸಂಪತ್ತು ಒಂದು ಲಕ್ಷ ಕೋಟಿಗಿಂತ ಹೆಚ್ಚಿದೆ. ಪ್ರವಾಹದಿಂದಾಗಿ ಅನುಭವಿಸಿರುವ 21,000 ಕೋಟಿ ನಷ್ಟವನ್ನು ನೀಗಿಸಲು ಇದರಿಂದ ಸ್ವಲ್ಪ ಹಣವನ್ನು ಬಳಸಬಹುದು. ಜನ ಪ್ರಾಣ ಕಳೆದುಕೊಂಡು, ರೋಗಗಳಿಂದ ಬಳಲುತ್ತಿರುವಾಗ ಬಳಕೆಯಾಗದ ಅಂತಹ ಸಂಪತ್ತಿನಿಂದ ಏನು ಪ್ರಯೋಜನ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ.

Trending News