ಟ್ರಂಪ್ ತಮ್ಮ ದೇಶದ ಆರ್ಥಿಕತೆಯನ್ನು ಸುಧಾರಿಸಲು ಬರುತ್ತಿದ್ದಾರೆ ಹೊರತು ನಮ್ಮ ದೇಶದ್ದಲ್ಲ-ಸುಬ್ರಮಣಿಯನ್ ಸ್ವಾಮಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಭಾರತಕ್ಕೆ ಪ್ರಯೋಜನವಾಗುವುದಿಲ್ಲ, ಆದರೆ ಅಮೆರಿಕದ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಭುವನೇಶ್ವರದಲ್ಲಿ ಹೇಳಿದ್ದಾರೆ.

Last Updated : Feb 23, 2020, 02:01 PM IST
ಟ್ರಂಪ್ ತಮ್ಮ ದೇಶದ ಆರ್ಥಿಕತೆಯನ್ನು ಸುಧಾರಿಸಲು ಬರುತ್ತಿದ್ದಾರೆ ಹೊರತು ನಮ್ಮ ದೇಶದ್ದಲ್ಲ-ಸುಬ್ರಮಣಿಯನ್ ಸ್ವಾಮಿ  title=

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಭಾರತಕ್ಕೆ ಪ್ರಯೋಜನವಾಗುವುದಿಲ್ಲ, ಆದರೆ ಅಮೆರಿಕದ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಭುವನೇಶ್ವರದಲ್ಲಿ ಹೇಳಿದ್ದಾರೆ.

"ಡೊನಾಲ್ಡ್ ಟ್ರಂಪ್ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಲು ಬಂದಿದ್ದಾರೆ, ಹೊರತು ನಮ್ಮದಲ್ಲ. ಹಾಗಾಗಿ ನಮ್ಮ ದೇಶಕ್ಕೆ ಯಾವುದೇ ಪ್ರಯೋಜನವನ್ನು ನಾನು ಕಾಣುತ್ತಿಲ್ಲ" ಎಂದು ಸ್ವಾಮಿ ಹೇಳಿದರು.

"ಕೆಲವು ರಕ್ಷಣಾ ಒಪ್ಪಂದಗಳು ಇರಬಹುದು. ಅದು ಅವರ ದೇಶಕ್ಕೆ ಅನುಕೂಲವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ರಕ್ಷಣಾ ಸಾಧನಗಳಿಗೆ ಹಣ ಪಾವತಿಸುತ್ತಿದ್ದೇವೆ ಮತ್ತು ಅದನ್ನು ಅವರು ಉಚಿತವಾಗಿ ನೀಡುತ್ತಿಲ್ಲ" ಎಂದು ಬಿಜೆಪಿ ಸಂಸದ ಹೇಳಿದರು. ಇದೆ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಯೆಚೂರಿ, "ಅವರ ಭೇಟಿಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಯು.ಎಸ್. ಅಧ್ಯಕ್ಷರು ಯುಎಸ್ ರೈತರಿಗೆ ರಿಯಾಯಿತಿ ನೀಡಲು ಬರುತ್ತಿದ್ದಾರೆ" ಎಂದು ಹೇಳಿದರು.

ನಿಧಾನಗತಿಯ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಗೆ ಉತ್ತೇಜನ ಬೇಕು ಎಂದು ಯೆಚೂರಿ ಮತ್ತು ಸ್ವಾಮಿ ಇಬ್ಬರೂ ಒಪ್ಪಿಕೊಂಡರು.ಆದರೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅವರು ವಿಭಿನ್ನ ವಿವರಣೆಗಳನ್ನು ನೀಡಿದರು.ಸುಬ್ರಮಣಿಯನ್ ಸ್ವಾಮಿ ಜಿಎಸ್ಟಿ ರದ್ದುಪಡಿಸುವುದು ಮತ್ತು ಆದಾಯ ತೆರಿಗೆಯನ್ನು ರದ್ದುಪಡಿಸುವುದರ ಕುರಿತಾಗಿ ಪ್ರತಿಪಾದಿಸಿದರೆ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಹಾಕುವ ಅಲ್ಪಾವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಯೆಚೂರಿ ಸೂಚಿಸಿದರು.

ಪರಿಹಾರ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳದಿದ್ದರೆ, ಆರ್ಥಿಕ ಪರಿಸ್ಥಿತಿಗಳು ಇನ್ನಷ್ಟು ಹದಗೆಡಬಹುದು ಎಂದು ಸ್ವಾಮಿ ಎಚ್ಚರಿಸಿದ್ದಾರೆ. ಇದು ಕೇವಲ ಆರ್ಥಿಕ ಕುಸಿತವಲ್ಲ, ಆದರೆ ದೇಶವು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂದು ಯೆಚೂರಿ ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಂಜಯ್ ಜಾ ಅವರು ಬಜೆಟ್‌ಗೆ ಮುಂಚಿತವಾಗಿ ಕಾರ್ಪೊರೇಟ್ ವಲಯಕ್ಕೆ ಸಹಾಯ ಮಾಡುವ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

Trending News