UPSC Success Story: ಉದ್ಯೋಗದೊಂದಿಗೆ UPSC ಪರೀಕ್ಷೆಗೆ ತಯಾರಿ, ಕೋಚಿಂಗ್ ಇಲ್ಲದೆ IAS ಅಧಿಕಾರಿ..!

ಸ್ವಯಂ ಅಧ್ಯಯನದ ಮೂಲಕ ಸರ್ಜನಾ ಯಾದವ್ 2019ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 126ನೇ ರ್ಯಾಂಕ್ ಗಳಿಸಿದರು.

Written by - Puttaraj K Alur | Last Updated : Nov 30, 2021, 07:22 AM IST
  • ಉದ್ಯೋಗದೊಂದಿಗೆ ತರಬೇತಿ ಪಡೆಯದೆ UPSC ಪರೀಕ್ಷೆಗೆ ತಯಾರಿ
  • 3ನೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ ಸರ್ಜನಾ ಯಾದವ್
  • ಪರಿಶ್ರಮದಿಂದ IAS ಆಗುವ ತಮ್ಮ ಕನಸನ್ನು ನನಸಾಗಿಸಿಕೊಂಡ ಸರ್ಜನಾ
UPSC Success Story: ಉದ್ಯೋಗದೊಂದಿಗೆ UPSC ಪರೀಕ್ಷೆಗೆ ತಯಾರಿ, ಕೋಚಿಂಗ್ ಇಲ್ಲದೆ IAS ಅಧಿಕಾರಿ..! title=
ಐಎಎಸ್ ಅಧಿಕಾರಿ ಸರ್ಜನಾ ಯಾದವ್

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಅವರಲ್ಲಿ ಕೆಲವರು ತಮ್ಮ ವಿಶೇಷ ತಯಾರಿಯಿಂದಾಗಿ ಯಶಸ್ಸನ್ನು ಸಾಧಿಸುತ್ತಾರೆ(UPSC Success Story). ಅದೇ ರೀತಿಯ ಕಥೆ ದೆಹಲಿಯ ಸರ್ಜನಾ ಯಾದವ್(Sarjana Yadav) ಅವರದ್ದು. ಉದ್ಯೋಗದೊಂದಿಗೆ ತರಬೇತಿ ಪಡೆಯದೆ UPSC ಪರೀಕ್ಷೆಗೆ ತಯಾರಿ ನಡೆಸಿದ ಇವರು 3ನೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸುವ ಮೂಲಕ  IAS ಆಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಕೋಚಿಂಗ್‌ಗೆ ಸೇರದೆ ತಯಾರಿ

UPSC ಪರೀಕ್ಷೆಯ ತಯಾರಿಗಾಗಿ ವಿದ್ಯಾರ್ಥಿಗಳು ಅನೇಕ ಸಂದಿಗ್ಧತೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕೋಚಿಂಗ್ ಬಹಳ ಮುಖ್ಯವೆಂದು ಭಾವಿಸುತ್ತಾರೆ. ಆದರೆ ಸರ್ಜನಾ ಯಾದವ್(Sarjana Yadav Success Story) ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಇವರು ಯಾವುದೇ ಕೋಚಿಂಗ್ ಇಲ್ಲದೇ ತಯಾರಿ ನಡೆಸಿ ಐಎಎಸ್ ಆಗಿದ್ದಾರೆ. ಕೋಚಿಂಗ್ ತೆಗೆದುಕೊಳ್ಳಬೇಕೋ ಬೇಡವೋ ಎಂಬುದು ಅಭ್ಯರ್ಥಿಯ ಮನೋಭಾವದ ಮೇಲೆ ಅವಲಂಬಿಸಿರುತ್ತದೆ ಎನ್ನುತ್ತಾರೆ ಸರ್ಜನಾ. ನೀವು ಸಂಪೂರ್ಣ ಅಧ್ಯಯನ ಸಾಮಗ್ರಿಗಳನ್ನು ಹೊಂದಿದ್ದರೆ ಮತ್ತು UPSCಗಾಗಿ ನಿಮ್ಮ ತಂತ್ರವು ಉತ್ತಮವಾಗಿದೆ ಎಂದು ನೀವು ಭಾವಿಸಿದರೆ, ಸ್ವಯಂ ಅಧ್ಯಯನವನ್ನು ಅವಲಂಬಿಸಿ ಯಶಸ್ಸನ್ನು ಪಡೆಯಬಹುದು ಅಂತಾ ಸಲಹೆ ನೀಡಿದ್ದಾರೆ.

sarjana-yadav-2.jpg

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ ಜಾರಿ 

ಉದ್ಯೋಗದೊಂದಿಗೆ UPSC ಪರೀಕ್ಷೆಯ ತಯಾರಿ

ಸರ್ಜನಾ ಯಾದವ್ ಪೂರ್ಣ ಸಮಯದ ಉದ್ಯೋಗದೊಂದಿಗೆ ಯುಪಿಎಸ್‌ಸಿ ಪರೀಕ್ಷೆ(UPSC Exam)ಗೆ ತಯಾರಿ ನಡೆಸಿದ್ದರು. ಆದರೆ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಯಶಸ್ವಿಯಾಗಲಿಲ್ಲ. ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೂ ಎದೆಗುಂದದೆ ತನ್ನ ತಪ್ಪುಗಳಿಂದ ಸಾಕಷ್ಟು ಕಲಿತ ಅವರು ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ವಿಯಾದರು.

ಪರೀಕ್ಷೆಗೆ ತಯಾರಾಗಲು ಕೆಲಸ ಬಿಟ್ಟ ಸರ್ಜನಾ

ಸರ್ಜನಾ ಯಾದವ್(IAS Sarjana Yadav) ಯುಪಿಎಸ್‌ಸಿ ಪರೀಕ್ಷೆಯ ತಯಾರಿಗಾಗಿ ಸಾಕಷ್ಟು ಶ್ರಮಿಸಿದ್ದರು, ಆದರೆ ಯಶಸ್ವಿಯಾಗಲಿಲ್ಲ. ಇದಾದ ಬಳಿಕ 2018ರಲ್ಲಿ ಕೆಲಸ ಬಿಟ್ಟು ತಯಾರಿ ನಡೆಸಲು ನಿರ್ಧರಿಸಿದರು. ಅವರು ಯಾವುದೇ ತರಬೇತಿಗೆ ಸೇರಲಿಲ್ಲ ಮತ್ತು ಸ್ವಯಂ ಅಧ್ಯಯನವನ್ನೇ ಅವಲಂಬಿಸಿ ಸಿದ್ಧತೆ ನಡೆಸಿದರು.

3ನೇ ಪ್ರಯತ್ನದಲ್ಲಿ ಯಶಸ್ಸು

ಸ್ವಯಂ ಅಧ್ಯಯನದ ಮೂಲಕ ಸರ್ಜನಾ ಯಾದವ್ ಅವರು 2019ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 126ನೇ ರ್ಯಾಂಕ್ ಗಳಿಸಿದರು ಮತ್ತು 3ನೇ ಪ್ರಯತ್ನದಲ್ಲಿ IAS ಅಧಿಕಾರಿಯಾಗುವ ಕನಸನ್ನು ನನಸಾಗಿಸಿದರು.

sarjana-yadav-3.jpg

ಇದನ್ನೂ ಓದಿ: Shashi Tharoor : ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ : ಟ್ವಿಟ್ಟರ್ ನಲ್ಲಿ ಫೋಟೋ ವೈರಲ್

UPSC ಆಕಾಂಕ್ಷಿಗಳಿಗೆ ಸರ್ಜನಾ ಸಲಹೆ

UPSC ಪರೀಕ್ಷೆಯ ತಯಾರಿ(Civil Service Exam)ಗೆ ಮುಖ್ಯವಾಗಿ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ತಂತ್ರಗಳನ್ನು ರೂಪಿಸಬೇಕು. ಅಧ್ಯಯನಕ್ಕಾಗಿ ಸರಿಯಾದ ಸಮಯವನ್ನು ನಿರ್ಧರಿಸಬೇಕು ಎಂದು ಸರ್ಜನಾ ಯಾದವ್ ಹೇಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಷಯವನ್ನು ಆಳವಾಗಿ ಓದಲು ಪ್ರಯತ್ನಿಸಿ, ಇದರಿಂದ ಯಾವುದೇ ಗೊಂದಲಗಳು ಇರುವುದಿಲ್ಲ. ನೀವು ಅಧ್ಯಯನದ ಸಮಯವನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಓದಿನ ಪ್ರಯಾಣ ಮುಂದುವರಿಸಿ. ಸಿಲಬಸ್ ಮುಗಿದ ನಂತರ ಸಾಧ್ಯವಾದಷ್ಟು ಓದಿದ್ದನ್ನು ಪುನರಾವರ್ತನೆ ಮಾಡುವುದು ಮತ್ತು ಉತ್ತರ ಬರೆಯುವುದನ್ನು ಅಭ್ಯಾಸ ಮಾಡಬೇಕು. ವೈಫಲ್ಯಕ್ಕೆ ಹೆದರಬೇಡಿ ಮತ್ತು ಕಠಿಣ ಪರಿಶ್ರಮವನ್ನು ಮುಂದುವರಿಸಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಎಂದು UPSC ಆಕಾಂಕ್ಷಿಗಳಿಗೆ ಸರ್ಜನಾ ಸಲಹೆ ನೀಡಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News