'ದೈತ್ಯ ವಂಶಜರು ಬುರ್ಖಾ ಧರಿಸುತ್ತಾರೆ, ಅದನ್ನು ಬ್ಯಾನ್ ಮಾಡಿ'

ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಯೋಗಿ ಸರ್ಕಾರದ ಮಂತ್ರಿ ರಘುರಾಜ್ ಸಿಂಗ್, "ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಏಕೆಂದರೆ ಅವರು ದೈತ್ಯ ವಂಶಜರಾಗಿದ್ದಾರೆ. ದೈತ್ಯ  ವಂಶಜರು ಮಾತ್ರ ಬುರ್ಖಾ ಧರಿಸಲು ಸಾಧ್ಯ" ಎಂದಿದ್ದಾರೆ.

Last Updated : Feb 10, 2020, 01:39 PM IST
'ದೈತ್ಯ ವಂಶಜರು ಬುರ್ಖಾ ಧರಿಸುತ್ತಾರೆ, ಅದನ್ನು ಬ್ಯಾನ್ ಮಾಡಿ' title=

ಅಲಿಗಡ್: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ರಾಜ್ಯ ಮಂತ್ರಿಯಾಗಿರುವ ಹಾಗೂ ಶ್ರಮ ಹಾಗೂ ಸೇವಾ ಯೋಜನೆ ವಿಭಾಗದಲ್ಲಿ ಅಧ್ಯಕ್ಷರಾಗಿರುವ ರಘುರಾಜ್ ಸಿಂಗ್ "ಬುರ್ಖಾ" ಕುರಿತು ಹೇಳಿಕೆಯೊಂದನ್ನು ನೀಡಿ ವಿವಾದ ಎಳೆದುಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕೇಂದ್ರ ಸರ್ಕಾರ ಭಾರತದಲ್ಲಿ ಬುರ್ಖಾ ಧರಿಸುವುದರ ಮೇಲೆ ನಿಷೇಧ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಮನ ಆಜ್ಞೆಯ ಮೇರೆಗೆ ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ ಸಂದರ್ಭದಲ್ಲಿ ಶೂರ್ಪನಖಿ ತನ್ನ ಮುಖ ಮುಚ್ಚಿಕೊಳ್ಳಲು ಬುರ್ಖಾ ಧರಿಸಿದ್ದಳು ಎಂದು ಮಂತ್ರಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಯೋಗಿ ಸರ್ಕಾರದ ಮಂತ್ರಿ ರಘುರಾಜ್ ಸಿಂಗ್, "ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಏಕೆಂದರೆ ಅವರು ದೈತ್ಯ ವಂಶಜರಾಗಿದ್ದಾರೆ. ದೈತ್ಯ  ವಂಶಜರು ಮಾತ್ರ ಬುರ್ಖಾ ಧರಿಸಬಹುದು" ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ನೀಡಿರುವ 'ಬೆತ್ತದಿಂದ ಬಾರಿಸಿ' ಹೇಳಿಕೆಗೂ ಕೂಡ ಪ್ರತಿಕ್ರಿಯೆ ನೀಡಿರುವ ಅವರು, "ಮೋದಿ ಅವರನ್ನು ಬೆತ್ತದಿಂದ ಬಾರಿಸುವವರನ್ನು ನಾವು ಚಪ್ಪಲಿಯಿಂದ ಹೊಡೆಯುತ್ತೇವೆ" ಎಂದಿದ್ದಾರೆ. ಅಲಿಗಡ್ ನಲ್ಲಿ ನಡೆದ ಒಂದು ಸಾಮಾಜಿಕ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಂತ್ರಿ ಈ ಹೇಳಿಕೆ ನೀಡಿದ್ದಾರೆ.

ದೇಶ ಹಿತಕ್ಕಾಗಿ ಯೋಗಿ ಸರ್ಕಾರ ಹಾಗೂ ಮೋದಿ ಸರ್ಕಾರದ ಬೆಂಬಲಕ್ಕೆ ನಿಲ್ಲುವಂತೆ ಅವರ ಇದೆ ವೇಳೆ ಜನರನ್ನು ಆಗ್ರಹಿಸಿದ್ದಾರೆ. ಅರಬ್ ದೇಶಗಳಿಂದ ಈ ಬುರ್ಖಾ ಸಂಸ್ಕೃತಿ ಬಂದಿದ್ದು, ಇದರ ಮೇಲೆ ಕೂಡಲೇ ನಿಷೇಧ ವಿಧಿಸಬೇಕು ಎಂದು ಅವರು ಹೇಳಿದ್ದಾರೆ. ತಾವು ನೀಡಿರುವ ಹೇಳಿಕೆಗೆ ತರ್ಕ ಒದಗಿಸಿರುವ ರಘುರಾಜ್, ಶ್ರೀಲಂಕಾದಲ್ಲಿ ಬುರ್ಖಾ ಪದ್ಧತಿಯ ಮೇಲೆ ನಿಷೇಧ ವಿಧಿಸಲಾಗಿದೆ ಎಂದಿದ್ದಾರೆ. ಇನ್ನೊಂದೆಡೆ ರಘುರಾಜ್ ಅವರ ಹೇಳಿಕೆಗೆ ಬೆಂಬಲ ಸೂಚಿಸಿರುವ ಇನ್ನೋರ್ವ BJP ಮುಖಂಡ ಸಂಗೀತ್ ಸೋಮ್, ಇದು ಮಹಿಳೆಯರ ಮೇಲೆ ನಡೆಸಲಾಗುವ ದಬ್ಬಾಳಿಕೆಯ ಪ್ರತೀಕವಾಗಿದ್ದು, ಇದು ಕಾನೂನು ಹಾಗೂ ಶರಿಯಾ ಕಾನೂನಿನ ವಿರುದ್ಧವಾಗಿದೆ ಎಂದಿದ್ದಾರೆ.

Trending News