ನವದೆಹಲಿ: ಶಾಲೆಗಳು, ಕಾಲೇಜುಗಳನ್ನು ತೆರೆಯಲು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಅನುಮೋದನೆ ನೀಡಿದೆ. ಅನ್ಲಾಕ್ 5.0 ಗಾಗಿ (Unlock 5.0) ಮಾರ್ಗಸೂಚಿಗಳ ಬಗ್ಗೆ ಶಿಕ್ಷಣ ಸಚಿವಾಲಯ ಟ್ವೀಟ್ ಮಾಡುವ ಮೂಲಕ ವಿಸ್ತ್ರತ ಮಾಹಿತಿ ನೀಡಿದೆ.
Guidelines for reopening of schools/HEIs outside containment zones:
States/UTs may take a decision in respect of reopening of schools & coaching institutes after Oct 15, in a graded manner. pic.twitter.com/kp89ol48Cr
— Ministry of Education (@EduMinOfIndia) October 3, 2020
ಇದನ್ನು ಓದಿ-ಇಂದಿನಿಂದ Unlock-5 ಜಾರಿ: ಏನಿರುತ್ತೆ? ಏನಿರಲ್ಲ? ಎಂಬುದರ ಬಗ್ಗೆ ಇಲ್ಲಿದೆ ವಿವರ
ಅಕ್ಟೋಬರ್ 15 ರಿಂದ ಪುನಃ ತೆರೆದುಕೊಳ್ಳಲಿವೆ ಶಾಲಾ-ಕಾಲೇಜುಗಳು, ಷರತ್ತು ಅನ್ವಯ
ಭಾರತದಲ್ಲಿ ಕೋವಿಡ್ -19 ಲಾಕ್ಡೌನ್ ಮುಗಿದ ನಂತರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 15 ರ ನಂತರ ಕಂಟೈನ್ಮೆಂಟ್ ವಲಯದಲ್ಲಿ ಮತ್ತೆ ತೆರೆಯುವ ವಿಕಲ್ಪವನ್ನು ಆಯ್ದುಕೊಳ್ಳಬಹುದಾಗಿದೆ. ಆದರೆ ರಾಜ್ಯ ಸರ್ಕಾರಗಳ ನಿರ್ಧಾರವನ್ನು ಆಧರಿಸಿಯೇ ನಿಖರವಾದ ದಿನಾಂಕಗಳು ಇರಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಶಾಲೆಗಳು ಮತ್ತು ತರಬೇತಿ ಕೇಂದ್ರಗಳ ವೈಯಕ್ತಿಕ ಸಲಹೆಯ ಮೇರೆಗೆ, ಶಾಲೆಗಳು ಅಥವಾ ಸಂಸ್ಥೆಗಳ ಆಡಳಿತ ಮಂಡಳಿಗಳ ಜೊತೆಗೆ ಸಮಾಲೋಚಿಸಿದ ನಂತರ ಪ್ರತ್ಯೇಕ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಈ ದಿನಾಂಕವನ್ನು ನಿರ್ಧರಿಸಲಿವೆ. ಉನ್ನತ ಶಿಕ್ಷಣ ಇಲಾಖೆ, ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾರಂಭದ ಸಮಯವನ್ನು ನಿರ್ಧರಿಸಲಿವೆ.
ಇದನ್ನು ಓದಿ-Unlock 5.0: ನಿಯಂತ್ರಣಕ್ಕೆ ಬಾರದ ಕರೋನಾ, ಆದರೂ ಸರ್ಕಾರದಿಂದ ಈ ಪರಿಹಾರ ಸಿಗುವ ನಿರೀಕ್ಷೆ
ತಂದೆ-ತಾಯಿಗಳ ಅನುಮತಿ ಅವಶ್ಯಕ
ಕೊರೊನಾ ಪ್ರಕೋಪದ ಹಿನ್ನೆಲೆ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡಲು ಸಿದ್ಧರಿಲ್ಲ. ಹೀಗಾಗಿ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ತಂದೆ-ತಾಯಿಯರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನು ಓದಿ- ಸಾರ್ವಜನಿಕರೇ ಎಚ್ಚರ! ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಭಾರೀ ದಂಡ
ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಗೈಡ್ಲೈನ್ಸ್
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲಾಗುತ್ತದೆ. ಆದರೆ ತರಗತಿಗಳು ನೇರವಾಗಿ ಪ್ರಾರಂಭವಾಗುವುದಿಲ್ಲ.
ಇದನ್ನು ಓದಿ- Unlock5: ಸಿನಿಮಾ ಪ್ರದರ್ಶನಕ್ಕೆ ಅವಕಾಶ, ಶಾಲೆಗಳ ನಿರ್ಧಾರ ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು