AIIMS ಆಸ್ಪತ್ರೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಕಿಡ್ನಿ ಶಸ್ತ್ರಚಿಕಿತ್ಸೆ

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಹಣಕಾಸು ಸಚಿವ ಜೇಟ್ಲಿ ಕಳೆದ ಒಂದು ತಿಂಗಳಿನಿಂದ ಡಯಾಲಿಸೀಸ್ಗೆ ಒಳಗಾಗಿದ್ದರು.  

Last Updated : May 14, 2018, 01:46 PM IST
AIIMS ಆಸ್ಪತ್ರೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಕಿಡ್ನಿ ಶಸ್ತ್ರಚಿಕಿತ್ಸೆ title=

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆ ಸೋಮವಾರ (ಮೇ 14) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ನಡೆಯುತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿಯನ್ನು ನೀಡಿದೆ. 65 ವರ್ಷದ ಅರುಣ್ ಜೇಟ್ಲಿ ಶನಿವಾರ (ಮೇ 12) ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಹಣಕಾಸು ಸಚಿವ ಜೇಟ್ಲಿ ಕಳೆದ ಒಂದು ತಿಂಗಳು ಡಯಾಲಿಸೀಸ್ಗೆ ಒಳಗಾಗಿದ್ದರು.

ಹಿಂದಿನ ವರ್ಷ ಏಪ್ರಿಲ್ನಲ್ಲಿ AIIMS ಆಸ್ಪತ್ರೆಯಲ್ಲಿ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದಾಖಲಾಗಿದ್ದರು. ಆದರೆ ನಂತರ ಶಸ್ತ್ರಚಿಕಿತ್ಸೆಯನ್ನು ರದ್ದುಗೊಳಿಸಲಾಗಿತ್ತು. 

ಕಳೆದ ಬಾರಿ ಎಪ್ರಿಲ್ 6ರಂದು AIIMSನ ಕಾರ್ಡಿಯೋ-ನ್ಯೂರೋ ಟವರ್ ನಲ್ಲಿ ಜೇಟ್ಲಿಯನ್ನು ದಾಖಲಿಸಲಾಯಿತು. ಅರುಣ್ ಜೇಟ್ಲಿ ಮತ್ತು ದಾನಿ ಇಬ್ಬರಿಗೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು 
ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ದಾನಿಯ ಗುರುತನ್ನು ಬಹಿರಂಗಗೊಳಿಸಲಾಗಿಲ್ಲ.

Trending News