Lockdown: ಟ್ರೈನ್ ನಲ್ಲಿ ಟಿಕೆಟ್ ಸಿಗದೇ ಇದ್ದ ಕಾರಣಕ್ಕೆ ಕಾರನ್ನೇ ಖರೀದಿಸಿ ಮನೆ ತಲುಪಿದ ಪೇಂಟರ್

ವೃತ್ತಿಯಲ್ಲಿ ಪೇಂಟರ್ ಆಗಿರುವ ಮತ್ತು ಗಾಜಿಯಾಬಾದ್ ನಿವಾಸಿ ಲಲ್ಲನ್ ತನ್ನ ಹತ್ತಿರದ ರೇಲ್ವೆ ನಿಲ್ದಾಣವೊಂದರಲ್ಲಿ ಕಾರ್ಮಿಕ ವಿಶೇಷ ಟ್ರೈನ್ ಮೂಲಕ ಮನೆ ತಲುಪುವ ಉದ್ದೇಶದಿಂದ ಸುಮಾರು 3-4 ದಿನಗಳ ಕಾಲ ಕಾಯುತ್ತಿದ್ದರು.  

Last Updated : Jun 6, 2020, 12:09 PM IST
Lockdown: ಟ್ರೈನ್ ನಲ್ಲಿ ಟಿಕೆಟ್ ಸಿಗದೇ ಇದ್ದ ಕಾರಣಕ್ಕೆ ಕಾರನ್ನೇ ಖರೀದಿಸಿ ಮನೆ ತಲುಪಿದ ಪೇಂಟರ್  title=

ನವದೆಹಲಿ: ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗಾಗಿ ಅವರವರ ಮನೆ ತಲುಪಲು ಕಾರ್ಮಿಕ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ ಟ್ರೈನ್ ಗಳ ಮೂಲಕ ಈಗಾಗಲೇ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಮ್ಮ ಮನೆ ಸೇರಿದ್ದಾರೆ. ಇದೆ ಅವಧಿಯಲ್ಲಿ ಲಲ್ಲನ್ ಹೆಸರಿನ ಓರ್ವ ಪೇಂಟರ್ ಕಥೆ ಕೇಳಿ ನೀವೂ ಕೂಡ ನಿಬ್ಬೇರಗಾಗುವಿರಿ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಈ ಪೇಂಟರ್, ಟ್ರೈನ್ ನಲ್ಲಿ ಸೀಟ್ ಸಿಗದೇ ಇದ್ದ ಕಾರಣ ಸ್ವಂತ ಕಾರು ಖರೀದಿಸುವ ಮೂಲಕ ತನ್ನ ಮನೆಗೆ ತೆರಳಿದ್ದಾನೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ಮತ್ತು ಗಾಜಿಯಾಬಾದ್ ನಿವಾಸಿ ಲಲ್ಲನ್ ತನ್ನ ಹತ್ತಿರದ ರೇಲ್ವೆ ನಿಲ್ದಾಣವೊಂದರಲ್ಲಿ ಕಾರ್ಮಿಕ ವಿಶೇಷ ಟ್ರೈನ್ ಮೂಲಕ ಮನೆ ತಲುಪುವ ಉದ್ದೇಶದಿಂದ ಸುಮಾರು 3-4 ದಿನಗಳ ಕಾಲ ಕಾಯುತ್ತಿದ್ದರು. ಆದರೆ, ನಾಲ್ಕನೇ ದಿನ ಆತನ ತಾಳ್ಮೆಯ ಎಲ್ಲೇ ಮೀರಿದೆ. ಇದೇ ಕಾವಿನಲ್ಲಿ ಆತ ತನ್ನ ಹತ್ತಿರದ ಬ್ಯಾಂಕ್ ವೊಂದಕ್ಕೆ ಭೇಟಿ ನೀಡಿದ್ದಾನೆ ಹಾಗೂ ತಾನು ಸಂಗ್ರಹಿಸಿದ್ದ ಒಟ್ಟು 1.9 ಲಕ್ಷ ರೂ.ಗಳನ್ನು ವಿಥ್ ಡ್ರಾ ಮಾಡಿದ್ದಾನೆ . ಬಳಿಕ ಆತ ಸೆಕೆಂಡ್ ಹ್ಯಾಂಡ್ ಕಾರ್ ವಿತರಕರಿಗೆ ಭೇಟಿ ನೀಡಿದ್ದಾನೆ. 

ಅಲ್ಲಿ ಆತ 1.5 ಲಕ್ಷ ರೂ. ಹಣ ಪಾವತಿಸಿ ಕಾರೊಂದನ್ನು ಖರೀದಿಸಿ, ತನ್ನ ಕುಟುಂಬ ಸದಸ್ಯರ ಜೊತೆಗೆ ಜೀವನದಲ್ಲಿ ಮತ್ತೆ ಎಂದಿಗೂ ಮರಳದಿರುವಂತೆ ತೀರ್ಮಾನಿಸಿ ಅಲ್ಲಿಂದ ಮನೆಗೆ ರವಾನೆಯಾಗಿದ್ದಾನೆ. ಗೋರಕ್ ಪುರನ ಪಿಪಿ ಗಂಜ್ ಹತ್ತಿರದಲ್ಲಿರುವ, ಕಥೌಲಿಯಾ ನಿವಾಸಿಯಾಗಿರುವ ಲಲ್ಲನ್ ಈ ಕುರಿತಂತೆ ಮಾತನಾಡಿದ್ದು, " ಬಸ್ ಅಥವಾ ಟ್ರೈನ್ ನಲ್ಲಿ ಜಾಗ ಹಿಡಿಯಲು ನಾನು ಮತ್ತು ನನ್ನ ಕುಟುಂಬ ಸದಸ್ಯರು ಹಲವು ಬಾರಿ ಪ್ರಯತ್ನಿಸಿದ್ದೆವು. ಆದರೆ ಪ್ರತಿ ಬಾರಿ ವಿಫಲರಾದೆವು, ಈ ನಡುವೆ ಕುಟುಂಬ ಸದಸ್ಯರು ಸೋಂಕಿಗೆ ಗುರಿಯಾಗುವ ಅಪಾಯ ಹೆಚ್ಚಾಗಿತ್ತು, ಏಕೆಂದರೆ, ಬಸ್ ಅಥವಾ ಟ್ರೈನ್ ನಲ್ಲಿ ಅವರು ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು."

"ನಾನು ಜೀವನವಿಡಿ ಗಳಿಸಿದ ಆದಾಯವನ್ನು ನಾನು ಖರ್ಚು ಮಾಡಿದ್ದೇನೆ ನಡು ನನಗೆ ಇಳಿದಿದೆ.ಆದರ ಇದರಿಂದ ಇಂದು ನನ್ನ ಕುಟುಂಬ ಸುರಕ್ಷಿತವಾಗಿದೆ" ಎಂದು ಆತ ಹೇಳಿದ್ದಾನೆ. ಮೇ 29ರಂದು ಲಲ್ಲನ್ ತನ್ನ ಕುಟುಂಬ ಸದಸ್ಯರ ಜೊತೆಗೆ ಸೇರಿ ಗಾಜಿಯಾಬಾದ್ ಗೆ ರವಾನೆಯಾಗಿದ್ದಾನೆ ಹಾಗೂ 14 ಗಂಟೆಗಳ ಯಾತ್ರೆ ಮಾಡುವ ಮೂಲಕ ಮಾರನೆ ದಿನ ಗೋರಕ್ ಪುರ ತಲುಪಿದ್ದಾನೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಲಲ್ಲನ್ ಸದ್ಯ ಕ್ವ್ಯಾರಂಟೀನ್ ನಲ್ಲಿದ್ದಾನೆ ಹಾಗೂ ಗೋರಕ್ ಪುರ ನಾಲಿಯೇ ಆತನಿಗೆ ನೌಕರಿ ಕೂಡ ಸಿಕ್ಕಿದೆ ಎನ್ನಲಾಗಿದೆ.

Trending News