ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸುಮಾರು 20,000 ಸಾಮಾನ್ಯ ಸೇವಾ ಕೇಂದ್ರ(CSC)ಗಳಿಗೆ ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಅನುಮತಿ ನೀಡಿದೆ. ಸಧ್ಯ CSC ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಈ ಕೇಂದ್ರಮಾಹಿತಿ ಉಪ್ದತ್ ಮಾಡಲು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಏಪ್ರಿಲ್ 24ರಂದು UIDAI, ಸಕ್ರೀಯ ರೂಪದಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವ CSCಗೆ ಕೆಲ ಶರತ್ತುಗಳ ಆಧಾರದ ಮೇಲೆ ಈ ಅನುಮತಿ ನೀಡಿದೆ.
ಈ ಕುರಿತು CSCಯ ಇ-ಆಡಳಿತಾತ್ಮಕ ಸೇವೆಗಳ CEO ದಿನೇಶ್ ತ್ಯಾಗಿ ಅವರಿಗೆ ಪತ್ರವೊಂದನ್ನು ರವಾನಿಸಿರುವ UIDAI, "ಕೇವಲ ಜನಸಂಖ್ಯೆಗೆ ಸಂಬಂಧಿಸಿದ ಅಂದರೆ ಡೆಮೋಗ್ರಾಫಿಕ್ ಡೇಟಾ ಅಪ್ಡೇಟ್ ಸೌಲಭ್ಯದ ಅನುಮತಿ ನೀಡಲಾಗುವುದು. ಆದರೆ, ಪರಿಚಾಲಕರ ಹಾಗೂ ನಿವಾಸಿಗಳ ಗುರಿತನ್ನು ಎರಡು ವಿಧಗಳಾಗಿರುವ ಬೆರಳಚ್ಚು ಹಾಗೂ ಕಣ್ಣುಗುಡ್ಡೆಗಳ ಮೂಲಕ ನಡೆಸಲಾಗುವುದು" ಎಂದು ಹೇಳಿದೆ.
ಇದಕ್ಕೆ ಸಂಬಂಧಿಸಿದ ಕಾರ್ಯ ಪ್ರಣಾಳಿ ಜೂನ್ 2020ರವರೆಗೆ ಸಿದ್ಧಗೊಳ್ಳಲಿದೆ ಎಂದು UIDAI ಹೇಳಿದೆ. UIDAI ಮೂಲಕ CSCಗೆ ನೀಡಲಾಗಿರುವ ಈ ಅನುಮತಿಯ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಸಂಜಯ್ ಧೋತ್ರೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಇದನ್ನು ದೃಢಪಡಿಸಿದ್ದಾರೆ.
To make Aadhaar updating easier for citizens, @UIDAI has permitted @CSCegov_ which are designated banking correspondents of banks, to offer #Aadhaar update services. Around 20,000 such CSCs will now be able to offer this service to citizens.
— Ravi Shankar Prasad (@rsprasad) April 27, 2020
ಇದಕ್ಕೆ ಸಂಬಂಧಿಸಿದಂತೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರವಿಶಂಕರ್ ಪ್ರಸಾದ್, " ಈ ಸ್ಳುಳಭ್ಯದಿಂದ ಗ್ರಾಮೀಣ ನಾಗರಿಕರಿಗೆ ತಮ್ಮ ನಿವಾಸದ ಹತ್ತಿರ ಆಧಾರ್ ಸೇವೆ ಸಿಗಲಿದೆ ಎಂಬುದು ತಮಗೆ ವಿಶ್ವಾಸವಿದೆ" ಎಂದು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ತ್ಯಾಗಿ, CSC ವತಿಯಿಂದ ಮಕ್ಕಳ ಬಯೋಮೆಟ್ರಿಕ್ಸ್ ವಿವರ ಅಪ್ಡೇಟ್ ಮಾಡಲಾಗುವುದು ಹಾಗೂ ವಿಳಾಸ ಬದಲಾವಣೆ ಕೂಡ ಸಾಧ್ಯವಿದೆ ಎಂದು ಹೇಳಿದ್ದಾರೆ. ದೇಶಾದ್ಯಂತ ಸುಮಾರು 2.74ಲಕ್ಷಕ್ಕೂ ಅಧಿಕ ಜನರು CSCನಲ್ಲಿ ಕಾರ್ಯನಿರ್ವಹಿಸುತ್ತಾರೆ. ಗ್ರಾಮೀಣ ಕ್ಷೇತ್ರದಲ್ಲಿ ಹಲವು ರೀತಿಯ ಸರ್ಕಾರಿ ಸೇವೆಗಳನ್ನು ಆನ್ಲೈನ್ ನಲ್ಲಿ ಒದಗಿಸುವುದೇ ಇವರ ಮುಖ್ಯ ಉದ್ದೇಶವಾಗಿದೆ.