UIDAI Alert! ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ತಪ್ಪದೇ ಈ ಕೆಲಸ ಮಾಡಿ!

UIDAI: ಹತ್ತಿರದ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ದಾಖಲಾತಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮಗುವಿಗೆ ಆಧಾರ್ ಕಾರ್ಡ್ ಮಾಡಬಹುದು.

Last Updated : Jan 24, 2020, 02:22 PM IST
UIDAI Alert! ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ತಪ್ಪದೇ ಈ ಕೆಲಸ ಮಾಡಿ! title=

ನವದೆಹಲಿ: ಮಗುವಿಗೆ ಆಧಾರ್ ಕಾರ್ಡ್: 2020 ರ ಮೊದಲ ತಿಂಗಳು ಕೊನೆಗೊಳ್ಳಲಿದೆ ಮತ್ತು ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಸಮಯ ಇದು. ಪಾಲಕರು ತಮ್ಮ ಆಯ್ಕೆಯ ಶಾಲೆಯಲ್ಲಿ ತಮ್ಮ ಮಗುವಿಗೆ ಪ್ರವೇಶ ಪಡೆಯಲು ಪ್ರಾರಂಭಿಸುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ, ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಯುಐಡಿಎಐ ಮಕ್ಕಳಿಗಾಗಿ ಹೆಚ್ಚಿನ ಸಂಖ್ಯೆಯ ಆಧಾರ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸಲು ಇದು ಕಾರಣವಾಗಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಆಧಾರ್ ಕಾರ್ಡ್ ನೀಡಬಹುದು. ಅಗತ್ಯವಿರುವ ದಾಖಲೆಗಳು - ಮಗುವಿನ ಜನನ ಪ್ರಮಾಣಪತ್ರ, ಪೋಷಕರಲ್ಲಿ ಯಾರೊಬ್ಬರ ಆಧಾರ್ ಕಾರ್ಡ್ ಮತ್ತು 5 ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಆಧಾರ್ ಕಾರ್ಡ್ ಮಾಡಲು ಅಗತ್ಯವಾದ ದಾಖಲೆಗಳು - ಶಾಲಾ ಲೆಟರ್ ಹೆಡ್ ಮತ್ತು ಶಾಲಾ ಗುರುತಿನ ಚೀಟಿ, ಒಬ್ಬರ ವಿಳಾಸದ ಕೌನ್ಸಿಲರ್ ಅಥವಾ ಅರ್ಜಿದಾರರು ವಾಸಿಸುವ ಗ್ರಾಮದ ಆಡಳಿತ ಮುಖ್ಯಸ್ಥ (ಗ್ರಾಮ ಪ್ರಧಾನ್) ಅವರ ಪತ್ರ.

ಆದ್ದರಿಂದ, ಮಗುವಿನ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೊದಲು ಅವನು ಅಥವಾ ಅವಳು ಮೇಲಿನ ದಾಖಲೆಗಳನ್ನು ಸಂಗ್ರಹಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳುವುದಿಲ್ಲ. ಆದರೆ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದಾದರೆ ಮಗುವಿನ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಮಗು 5 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಅವನ ಅಥವಾ ಅವಳ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ. ಆದರೆ ಮಗುವಿನ 15 ವರ್ಷಗಳ ನಂತರ, ಅದರ ಬಯೋಮೆಟ್ರಿಕ್ ಅನ್ನು ನವೀಕರಿಸಬೇಕಾಗುತ್ತದೆ.

ಮಗುವಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?
ಹತ್ತಿರದ ಅಂಚೆ ಕಚೇರಿಗೆ ಅಥವಾ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಗು ಅಥವಾ ಅಪ್ರಾಪ್ತ ಮಗುವಿಗೆ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮಗುವಿನ ಆಧಾರ್ ಕಾರ್ಡ್ ಅನ್ನು ಹೇಗೆ ಮಾಡಬೇಕೆಂಬುದರ ಕುರಿತು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:

1] ಮಗುವಿಗೆ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ;
2] ಆಧಾರ್ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಿ;
3] ನಿಮ್ಮ ಮಗುವಿನ ಮಾನ್ಯ ವಿಳಾಸ ಪುರಾವೆ ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವಿವರಗಳನ್ನು ನಮೂದಿಸಿ;
4] ಕಾರ್ಯನಿರ್ವಾಹಕರಿಗೆ ಸಂಬಂಧಿತ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ;
5] ಕಾರ್ಯನಿರ್ವಾಹಕರು ನಿಮ್ಮ ಮಗುವಿನ ಬಯೋಮೆಟ್ರಿಕ್ಸ್ ಅನ್ನು ತೆಗೆದುಕೊಳ್ಳುತ್ತಾರೆ (10 ಬೆರಳಚ್ಚುಗಳು, ಐರಿಸ್ ಸ್ಕ್ಯಾನ್ ಮತ್ತು ಛಾಯಾಚಿತ್ರ);
6] ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಸ್ವೀಕೃತಿ ಸ್ಲಿಪ್ ಅನ್ನು ರಚಿಸಲಾಗುತ್ತದೆ;
7] ಸ್ವೀಕೃತಿ ಸ್ಲಿಪ್‌ನಲ್ಲಿ ದಾಖಲಾತಿ ಐಡಿ ಇರಲಿದ್ದು ಅದು ದಾಖಲಾತಿ ಸಂಖ್ಯೆ ಮತ್ತು ದಾಖಲಾತಿಯ ಸಮಯ ಮತ್ತು ದಿನಾಂಕವನ್ನು ಹೊಂದಿರುತ್ತದೆ;
8] ಆಧಾರ್‌ನ ಸ್ಥಿತಿಯನ್ನು ಪರಿಶೀಲಿಸಲು ದಾಖಲಾತಿ ID ಯನ್ನು ಬಳಸಬಹುದು; 
9] ದಾಖಲಾತಿಯ 90 ದಿನಗಳಲ್ಲಿ ಆಧಾರ್ ಕಾರ್ಡ್ ಅನ್ನು ಅರ್ಜಿದಾರರ ವಿಳಾಸಕ್ಕೆ ಕಳುಹಿಸಲಾಗುತ್ತದೆ.

Trending News