ನವದೆಹಲಿ: ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಹೊರಕ್ಕೆ ಕರೆದೊಯ್ದರೆ ರಾಜ್ಯದಲ್ಲಿ ಹಣ ಉಳಿಯುವುದಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: IND vs WI : ಈ ಕಾರಣದಿಂದಲೆ ಮೊದಲ ಟಿ20ಯಲ್ಲಿ ಭರ್ಜರಿಯಾಗಿ ಮಿಂಚಿದ ಅರ್ಷದೀಪ್ ಸಿಂಗ್!
ರಾಜ್ಯಪಾಲರು ಹಿಂದೂಗಳನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಹೇಳಿಕೆಯು ಮರಾಠಿ ಮಾನೂಸ್ (ಮರಾಠಿ ಮಾತನಾಡುವ ಮಣ್ಣಿನ ಮಕ್ಕಳು) ಮತ್ತು ಮರಾಠಿ ಹೆಮ್ಮೆಗೆ ಅವಮಾನವಾಗಿದೆ.ಅವರನ್ನು ಮನೆಗೆ ಕಳುಹಿಸಬೇಕೆ ಅಥವಾ ಜೈಲಿಗೆ ಕಳುಹಿಸಬೇಕೆ ಎನ್ನುವುದನ್ನು ಸರ್ಕಾರ ನಿರ್ಧರಿಸಬೇಕು' ಎಂದು ಠಾಕ್ರೆ ಹೇಳಿದರು.
ಇದನ್ನೂ ಓದಿ: ಇಂದಿನ ಈ ಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಕಾರಣಕರ್ತರು: ಬಿಜೆಪಿ ಆರೋಪ
ನಿನ್ನೆ ಭಾಷಣದ ವೇಳೆ ಕೋಶ್ಯಾರಿ,'ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ತೆಗೆದುಹಾಕಿದರೆ, ಇಲ್ಲಿ ಯಾವುದೇ ಹಣ ಉಳಿಯುವುದಿಲ್ಲ ಅಷ್ಟೇ ಅಲ್ಲದೆ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಾಗುವುದಿಲ್ಲ 'ಎಂದು ಅವರು ಹೇಳಿದರು.
ಕೋಶ್ಯಾರಿ ಹೊಂದಿರುವ ಸ್ಥಾನವನ್ನು ಗೌರವಿಸಲು ಎಷ್ಟು ದಿನ ಮೌನವಾಗಿರಬೇಕೆಂದು ನನಗೆ ತಿಳಿದಿಲ್ಲ.ರಾಜ್ಯಪಾಲರ ಹುದ್ದೆಯ ಬಗ್ಗೆ ನಾನು ಏನನ್ನೂ ಹೇಳುತ್ತಿಲ್ಲ, ಆದರೆ ಆ ಕುರ್ಚಿಯ ಮೇಲೆ ಕುಳಿತವರು ಆ ಪೀಠಕ್ಕೆ ಗೌರವ ನೀಡಬೇಕು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.