ಅಸ್ಸಾಂನಲ್ಲಿ ಎರಡು ರೇಪ್ ಪ್ರಕರಣ, ನಾಲ್ವರ ಬಂಧನ

  

Last Updated : Aug 24, 2018, 09:04 PM IST
ಅಸ್ಸಾಂನಲ್ಲಿ ಎರಡು ರೇಪ್ ಪ್ರಕರಣ, ನಾಲ್ವರ ಬಂಧನ title=

ನವದೆಹಲಿ: ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿ 19 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಮರಿಗಾಂವ್ ಜಿಲ್ಲೆಯಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗೋಲ್ಪಾರ ಜಿಲ್ಲೆಯ ತುಕುರಾ ಪಾರ್ಟ್ -3 ಗ್ರಾಮದಲ್ಲಿ ಹೊಲದಲ್ಲಿ ಗುರುವಾರ ರಾತ್ರಿ ಆಕೆಯ ಸ್ನೇಹಿತ ಮತ್ತು ಇತರರಿಂದ ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಸಿನ್ಹಾ ತಿಳಿಸಿದ್ದಾರೆ.ಗ್ರಾಮಸ್ಥರು ಒಬ್ಬ ವ್ಯಕ್ತಿ ಮತ್ತು ಮಹಿಳೆ ಹಿಡಿದು ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ಸಮಯದಲ್ಲಿ ಈ ಮಹಿಳೆಯು ಬರ್ಪಟಾ ಜಿಲ್ಲೆಯವರಾಗಿದ್ದ ತನ್ನ ಸ್ನೇಹಿತನೊಂದಿಗೆ ಟುಕುರಾಕ್ಕೆ ಬಂದಿದ್ದರೆಂದು ತಿಳಿದುಬಂದಿದೆ. ಈದ್ ಆಚರಣೆಗಾಗಿ ಹಳ್ಳಿಯಲ್ಲಿ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಬೇರೆ ವ್ಯಕ್ತಿಯಿಂದ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.ರಾತ್ರಿವೇಳೆ  ಅದೇ ಹಳ್ಳಿಯ ಇಬ್ಬರು ಮತ್ತಿಬ್ಬರ ಜೊತೆ ಸೇರಿ  ಆಕೆಯನ್ನು ಅತ್ಯಾಚಾರ ಮಾಡಿದ್ದಾರೆಂದು ಎಸ್ಪಿ ತಿಳಿಸಿದ್ದಾರೆ.ಹುಡುಗಿಯನ್ನು ಗೋಲ್ಪಾರಾ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಪ್ರಕರಣ ವನ್ನು ದಾಖಲಿಸಿದ್ದಾರೆ ಮತ್ತು ಅವರು ತಮ್ಮ ಗ್ರಾಮದಲ್ಲಿ ಭೇಟಿ ಮಾಡಿದ ವ್ಯಕ್ತಿ ಮತ್ತು  ಚಿಕ್ಕಪ್ಪನನ್ನು ಬಂಧಿಸಿದ್ದಾರೆ.ಈಗ ನಾಲ್ಕನೇ ವ್ಯಕ್ತಿಯ ಹುಡುಕಾಟವನ್ನು  ಪೊಲೀಸರು ಕೈಗೊಂಡಿದ್ದಾರೆ  ಎಂದು ಹೇಳಲಾಗಿದೆ.

ಇನ್ನೊಂದು ಘಟನೆಯಲ್ಲಿ ಮೊರಿಗಾಂವ್ ಜಿಲ್ಲೆಯಚಾರ್ಬೊರಿ ನಿಗಮ್ ಗ್ರಾಮದಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಯನ್ನು 60 ವರ್ಷದ ವ್ಯಕ್ತಿಯೊಬ್ಬನು ಅತ್ಯಾಚಾರ ಮಾಡಿದ್ದಾನೆ.ಈಗ ಸ್ಥಳೀಯರು ನೀಡಿರುವ ದೂರಿನ ಆಧಾರದ ಮೇಲೆ  ಪೊಲೀಸರು ಅವನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Trending News