ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಇಬ್ಬರು ಬಲಿ

ಅಪರಿಚಿತ ದುಷ್ಕರ್ಮಿಗಳು ಸೋಮವಾರ ರಾತ್ರಿ 10.30ರ ಸುಮಾರಿಗೆ ಮನೆಯೊಂದರ ಮೇಲೆ ಎರಡು ಕಚ್ಚಾ ಬಾಂಬ್‌ ಗಳನ್ನು ಎಸೆದ ಪರಿಣಾಮ ಮೊಹಮ್ಮದ್‌ ಹಲೀಮ್‌ (57) ಮತ್ತು ಮೊಹಮ್ಮದ್‌ ಮುಷ್ತಾಕ್‌ (60)ಎಂಬುವರು ಮೃತಪಟ್ಟಿದ್ದಾರೆ.

Last Updated : Jun 11, 2019, 07:25 PM IST
ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಇಬ್ಬರು ಬಲಿ title=

ಕೋಲ್ಕತ್ತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬರಾಕ್‌ಪೋರ್‌ ನ ಭಾಟ್‌ಪಾರಾ ಪ್ರದೇಶದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಇಬ್ಬರು ಮೃತಪಟ್ಟು, ಇತರ ನಾಲ್ವರು ಗಾಯಗೊಂದಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು ಸೋಮವಾರ ರಾತ್ರಿ 10.30ರ ಸುಮಾರಿಗೆ ಮನೆಯೊಂದರ ಮೇಲೆ ಎರಡು ಕಚ್ಚಾ ಬಾಂಬ್‌ ಗಳನ್ನು ಎಸೆದ ಪರಿಣಾಮ ಮೊಹಮ್ಮದ್‌ ಹಲೀಮ್‌ (57) ಮತ್ತು ಮೊಹಮ್ಮದ್‌ ಮುಷ್ತಾಕ್‌ (60)ಎಂಬುವರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಹಲೀಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮುಖ್ತಾರ್ ಎಂಬವರು ತೀವ್ರ ಗಾಯಗೊಂಡು ಕಲ್ಯಾಣಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಘಟನೆ ಸಂದರ್ಭದಲ್ಲಿ ಮನೆಯಲ್ಲಿದ್ದ ರೂಬಿ ಪರ್ವೀನ್‌, ಪರ್ವೇಜ್‌ ಆಲಂ, ತಾವರೆಜ್‌ ಆಲಂ ಮತ್ತು ಪ್ರಿನ್ಸ್‌ ಪರ್ವೇಜ್‌ ಗಾಯಗೊಂಡಿದ್ದಾರೆ. ಪರ್ವೇಜ್ ಅವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದ್ದು, ಉಳಿದ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಂಬ್ ದಾಳಿ ಬಳಿಕ ಭಾಟ್‌ಪಾರಾ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡಲು ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ.

Trending News