/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ಭವಿಷ್ಯ ನಿಧಿ(EPF) ನಲ್ಲಿ ಎರಡು ಶಾನ್‌ದಾರ್ ಬದಲಾವಣೆ ಮಾಡಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (Employees' Provident Fund Organisation)ಯ ಈ ಎರಡು ಮಹತ್ವದ ಬದಲಾವಣೆಯಿಂದ ನೌಕರರಿಗೆ ಅನುಕೂಲವಾಗಲಿದೆ. ಮೊದಲನೆಯ ಪ್ರಮುಖ ಬದಲಾವಣೆ ಎಂದರೆ ಈಗ ನೀವು ನಿಮ್ಮ ಪಿಎಫ್ ಕೊಡುಗೆಯನ್ನು ಶೇಕಡಾ 2-3 ರಷ್ಟು ಕಡಿಮೆ ಮಾಡಬಹುದು.  ಎರಡನೆಯದು ನೀವು ನೌಕರಿ ತೊರೆದ ಬಳಿಕ ದಿನಾಂಕವನ್ನು ಖುದ್ದಾಗಿ ನಮೂದಿಸಬಹುದಾಗಿದೆ.

ಪಿಎಫ್ ಕೊಡುಗೆ ಕಡಿಮೆ ಮಾಡುವುದರ ಲಾಭ:
ಕಾರ್ಮಿಕ ಸಚಿವಾಲಯದ(Labour Ministry) ಅಧಿಕಾರಿ ಮಾತನಾಡಿ, ಕೆಲಸ ಮಾಡುವ ಮಹಿಳೆಯರು, ಅಂಗವಿಕಲ ವೃತ್ತಿಪರರು ಮತ್ತು ಉದ್ಯೋಗಿ ಪುರುಷರನ್ನು ಭವಿಷ್ಯ ನಿಧಿಯಲ್ಲಿ 25 ರಿಂದ 35 ವರ್ಷಕ್ಕೆ ಇಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೇಕಡಾ 2-3 ರಷ್ಟು ಕಡಿಮೆ ಪಿಎಫ್ ಕೊಡುಗೆ ಅನುಮತಿಯನ್ನು ಸಚಿವಾಲಯ ಶೀಘ್ರದಲ್ಲೇ ಅನುಮೋದಿಸಬಹುದು. ಪ್ರಸ್ತುತ ನಿಯಮಗಳ ಪ್ರಕಾರ, ನೌಕರರು ತಮ್ಮ ಮೂಲ ವೇತನದ 12 ಪ್ರತಿಶತವನ್ನು ನೌಕರರ ಭವಿಷ್ಯ ನಿಧಿಯಡಿ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಅದೇ ಮೊತ್ತವನ್ನು ಅವನ ಉದ್ಯೋಗದಾತ ಠೇವಣಿ ಇಡುತ್ತಾನೆ. ಈ ಹೊಸ ಹಂತದ ಅನುಷ್ಠಾನದೊಂದಿಗೆ, ನೌಕರರ ಕೈಯಲ್ಲಿ ವೇತನ ಹೆಚ್ಚಾಗುತ್ತದೆ. ಈ ಕುರಿತು ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಕೆಲಸ ತೊರೆದ ದಿನಾಂಕವನ್ನು ಸ್ವತಃ ನಮೂದಿಸಿ:
ನೌಕರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಈಗ ಉದ್ಯೋಗದಲ್ಲಿರುವ ಪಿಎಫ್ ಯಾವುದೇ ಖಾತೆದಾರರು ನೀವು ಕೆಲಸ ತೊರೆದ ದಿನಾಂಕವನ್ನು ಆನ್‌ಲೈನ್‌ನಲ್ಲಿ ನಮೂದಿಸಲು ಸಾಧ್ಯವಾಗುತ್ತದೆ. ಕೆಲಸ ಬಿಟ್ಟ ನಂತರ ದಿನಾಂಕವನ್ನು ನೋಂದಾಯಿಸುವ ಅನುಕೂಲವೆಂದರೆ ನಂತರ ನೀವು ಪಿಎಫ್‌ನಲ್ಲಿ ಠೇವಣಿ ಇರಿಸಿದ ಮೊತ್ತವನ್ನು ಹಿಂಪಡೆಯಲು ಬಯಸಿದರೆ, ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲಿಯವರೆಗೆ, ಅವರು ಕೆಲಸವನ್ನು ತೊರೆದ ನಂತರ ತಮ್ಮ ದಿನಾಂಕವನ್ನು ನೋಂದಾಯಿಸಲು ಕಂಪನಿಯನ್ನು ಅವಲಂಬಿಸಬೇಕಾಗಿತ್ತು.

Section: 
English Title: 
Two great changes in EPF
News Source: 
Home Title: 

EPFನಲ್ಲಿ ಭರ್ಜರಿ ಬದಲಾವಣೆ; ಈ ರೀತಿ ಸಿಗಲಿದೆ ಲಾಭ

EPFನಲ್ಲಿ ಭರ್ಜರಿ ಬದಲಾವಣೆ; ಈ ರೀತಿ ಸಿಗಲಿದೆ ಲಾಭ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
EPFನಲ್ಲಿ ಭರ್ಜರಿ ಬದಲಾವಣೆ; ಈ ರೀತಿ ಸಿಗಲಿದೆ ಲಾಭ
Publish Later: 
No
Publish At: 
Thursday, January 23, 2020 - 12:16
Created By: 
Yashaswini V
Updated By: 
Yashaswini V
Published By: 
Yashaswini V