ಲಖನೌ ಹೋಟೆಲ್ ಬೆಂಕಿ ಅವಘಡ; ಇಬ್ಬರ ಬಂಧನ

ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  

Last Updated : Jun 20, 2018, 07:00 PM IST
ಲಖನೌ ಹೋಟೆಲ್ ಬೆಂಕಿ ಅವಘಡ; ಇಬ್ಬರ ಬಂಧನ title=

ಲಖನೌ: ಉತ್ತರಪ್ರದೇಶದ ಲಖನೌನ ಚಾರ್ಬಾಗ್ ನಗರದಲ್ಲಿರುವ ಪ್ರಸಿದ್ಧ ಅಂತರರಾಷ್ಟ್ರೀಯ ಹೋಟೆಲ್‌'ನಲ್ಲಿ ನಡೆದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಂಗಳವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಚಾರ್ಬಾಗ್ ನಗರದ ಪ್ರಸಿದ್ಧ ಎರಡು ಹೋಟೆಲ್ಗಳಲ್ಲಿ ನಡೆದ ಬೆಂಕಿ ಅವಘಡದಲ್ಲಿ ನಾವರಿಗೆ ಗಂಭೀರ ಗಾಯಗಳಾಗಿತ್ತಲ್ಲದೆ, ಐವರು ಮೃತಪಟ್ಟಿದ್ದರು. ಅಲ್ಲದೆ. ಹೋಟೆಲ್ನಲ್ಲಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದರು. 

ಉತ್ತರಪ್ರದೇಶ: ಹೋಟೆಲ್ ಅಗ್ನಿ ದುರಂತದಲ್ಲಿ ನಾಲ್ವರು ಸಾವು

"ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಹೋಟೆಲ್ ಮೇಲ್ವಿಚಾರಕ ಪಂಕಜ್ ಮತ್ತು ಸೆಕ್ಯುರಿಟಿ ಗಾರ್ಡ್ ರಾಜ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ ಎರಡೂ ಹೋಟೆಲ್ಗಳ ಮಾಲೀಕರು, ಮ್ಯಾನೇಜರ್ಗಳು ಮತ್ತು ಕಾರ್ಯನಿರತ ಭದ್ರತಾ ಸಿಬ್ಬಂದಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ" ಎಂದು ಪೋಲಿಸ್ ಅಧೀಕ್ಷಕ ವಿಕಾಸ್ ಚಂದ್ ತಿಳಿಸಿದ್ದಾರೆ. 

ಘಟನೆಯಲ್ಲಿ ಮೃತಪಟ್ಟವರನ್ನು ಕಾನ್ಪುರದ ಮೆಹರ್(ಒಂದೂವರೆ ವರ್ಷ), ಪುಣೆಯ ಸಂತೋಷ್ ಮಾನೆ(35), ಆಲಿಘರ್'ನ ಪ್ರಿಯಾನ್ಶ್ ಶರ್ಮಾ(40) ಮತ್ತು ಪಾಟ್ನಾದ ಗಣೇಶ್ ಪ್ರಸಾದ್(45) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ನ್ಯಾಯಾಂಗ ತನಿಖೆ ನಡೆಯಲಿದ್ದು, ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಶಾಲ್ ರಾಜ್ ಶರ್ಮಾ ತಿಳಿಸಿದ್ದಾರೆ.

Trending News