ಮಧ್ಯ ಸೇವಿಸಿ ಕ್ಲಾಸ್ ರೂಂ ನಲ್ಲಿ ಸಿಕ್ಕಿಬಿದ್ದ ಇಬ್ಬರು ಆಂಧ್ರ ವಿದ್ಯಾರ್ಥಿನಿಯರು ಸಸ್ಪೆಂಡ್

ಆಘಾತಕಾರಿ ಘಟನೆಯೊಂದರಲ್ಲಿ ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯ ಸೇವಿದ ಕಾರಣಕ್ಕಾಗಿ ಇಬ್ಬರು ಬಾಲಕಿಯರನ್ನು ಶಾಲೆಯಿಂದ ಸಸ್ಪೆಂಡ್ ಮಾಡಲಾಗಿದೆ. 

Last Updated : Feb 19, 2019, 03:19 PM IST
ಮಧ್ಯ ಸೇವಿಸಿ ಕ್ಲಾಸ್ ರೂಂ ನಲ್ಲಿ ಸಿಕ್ಕಿಬಿದ್ದ ಇಬ್ಬರು ಆಂಧ್ರ ವಿದ್ಯಾರ್ಥಿನಿಯರು ಸಸ್ಪೆಂಡ್ title=
Representation only

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯ ಸೇವಿದ ಕಾರಣಕ್ಕಾಗಿ ಇಬ್ಬರು ಬಾಲಕಿಯರನ್ನು ಶಾಲೆಯಿಂದ ಸಸ್ಪೆಂಡ್ ಮಾಡಲಾಗಿದೆ. 

9ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳಿಬ್ಬರು ಶಿಕ್ಷಕರು ಕ್ಲಾಸ್ ನಲ್ಲಿದ್ದಾಗಲೇ ಮಧ್ಯಸೇವಿಸಿ ಕ್ಲಾಸ್ ಗೆ ಬಂದಿದ್ದರು ಎಂದು ತಿಳಿದುಬಂದಿದೆ. ಕ್ಲಾಸ್ ನಲ್ಲಿ ಈ ವಿದ್ಯಾರ್ಥಿನಿಯರಿಬ್ಬರ ನಡವಳಿಕೆಯನ್ನು ನೋಡಿ ಆಗ ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಲೆಯ ಮುಖ್ಯೋಪಾಧ್ಯಾಯ ಬಟ್ಟು ಸುರೇಶ ಕುಮಾರ್ ಹೇಳುವಂತೆ ಈ ವಿದ್ಯಾರ್ಥಿನಿಯರಿಬ್ಬರು ಮಧ್ಯ ಸೇವಿಸಿ ಸಿಕ್ಕಿಬಿದ್ದಿರುವುದು ಇದೇ ಮೊದಲೇನಲ್ಲ ಎಂದು ತಿಳಿಸಿದರು. ಈ ವಿದ್ಯಾರ್ಥಿನಿಯರು ಹೇಳುವಂತೆ ಅವರ ತಂದೆಯರು ಅಲ್ಕೋಹಾಲ್ ಸೇವಿಸುತ್ತಿದ್ದರು, ಇದನ್ನು ನೋಡಿ ತಾವು ಈ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. 

ಈ ವಿದ್ಯಾರ್ಥಿನಿಯರ ನಡವಳಿಕೆ ಇತರರ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಲೆಯಿಂದ ಹೊರ ಹಾಕಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.ಈಗ ಈ ಶಾಲೆಯ ಕ್ರಮವನ್ನು ಖಂಡಿಸಿರುವ ಸಾಮಾಜಿಕ ಹಕ್ಕುಗಳ ಕಾರ್ಯಕರ್ತರು ಮಕ್ಕಳನ್ನು ಉಚ್ಚಾಟಿಸುವ ಬದಲು ಏಕೆ ಕೌನ್ಸಿಲಿಂಗ್ ಗೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

.

Trending News