ನವದೆಹಲಿ: ಶೀಘ್ರವೇ ನೀವು ಇನ್ಮುಂದೆ ನಿಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಗಳ ಜೊತೆಗೆ ಫ್ಲೀಟ್ ಕೂಡ ಮಾಡಬಹುದು. ಟ್ವಿಟ್ಟರ್ ತನ್ನ ಈ ಹೊಸ ವೈಶಿಷ್ಟ್ಯದ ಪರೀಕ್ಷೆಯನ್ನು ಆರಂಭಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಬ್ರೆಜಿಲ್ ನಲ್ಲಿ ಮೊದಲು ಬಿಡುಗಡೆಗೊಳಿಸಲಿದೆ. ಈ ವೈಶಿಷ್ಟ್ಯದ ವಿಶೇಷತೆ ಏನು ಮತ್ತು ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಕುರಿತು ತಿಳಿಯೋಣ ಬನ್ನಿ
ಏನಿದು 'Fleet'?
Fleet ಇದು ಇನ್ಸ್ಟಾಗ್ರಾಮ್, ಫೇಸ್ ಬುಕ್, ವಾಟ್ಸ್ ಆಪ್ ಅಥವಾ ಸ್ನಾಪ್ ಚಾಟ್ ನ ಸ್ಟೋರಿಯಂತೆಯೇ ಒಂದು ವೈಶಿಷ್ಟ್ಯವಾಗಿದೆ. ಯಾವುದೇ ಒಂದು ಕಂಟೆಂಟ್ ಗೆ ಫ್ಲೀಟ್ ಮಾಡಿದಾಗ ಅದು 24 ಗಂಟೆಗಳ ಬಳಿಕ ಖುದ್ದಾಗಿ ಮಾಯವಾಗಲಿದೆ. ಈ ವೈಶಿಷ್ಯವನ್ನು ಪ್ರಯೋಗಿಸಲು ಟ್ವಿಟ್ಟರ್ ಮೇಲೆ ನಿಮಗೆ ಪ್ರತ್ಯೇಕವಾಗಿ ಒಂದು ಪ್ಲಸ್ ಗುಂಡಿಯನ್ನು ನೀಡಲಾಗುತ್ತಿದೆ.
ಎಲ್ಲಿ ಮೊದಲು ಬಿಡುಗಡೆಯಾಗಲಿದೆ?
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಈ ವೈಶಿಷ್ಟ್ಯವನ್ನು ಮೊದಲು ಬ್ರೆಜಿಲ್ ನಲ್ಲಿ ಪರಿಚಯಿಸಲಾಗುವುದು ಎಂದು ಹೇಳಿದೆ. ಟ್ವಿಟ್ಟರ್ ತನ್ನ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ನಿರಂತರವಾಗಿ ಅಪ್ಡೇಟ್ ಮಾಡುತ್ತಲೇ ಇರಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಟ್ವೀಟ್ ಗಳು ಪಬ್ಲಿಕ್ ಡೊಮೇನ್ ನಲ್ಲಿರುತ್ತವೆ ಹಾಗೂ ಪರ್ಮನೆಂಟ್ ಆಗಿರುತ್ತವೆ ಎಂಬುದು ಹಲವರ ಅನಿಸಿಕೆಯಾಗಿತ್ತು. ಹೀಗಾಗಿ ಪರ್ಮನೆಂಟ್ ಆಗಿರದ ಈ ವೈಶಿಷ್ಟ್ಯವನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಜೊತೆಗೆ ಪರಸ್ಪರ ಮಾತನಾಡಲು ವೈಶಿಷ್ಟ್ಯವೊಂದನ್ನು ಸಹ ಪರಿಚಯಿಸಲಾಗುತ್ತಿದೆ.
Fleetನಲ್ಲಿ ಏನೇನಿರಲಿದೆ?
Fleet ನಲ್ಲಿ ನೀವು 280 ಶಬ್ದಗಳವರೆಗೆ ಬರೆದುಕೊಳ್ಳಬಹುದು. ಶಬ್ದಗಳ ಹೊರತಾಗಿ ಇದರಲ್ಲಿ ನೀವು GIF, JPEG ಫಾರ್ಮ್ಯಾಟ್ ನಲ್ಲಿ ಫೋಟೋಗಳನ್ನು ಸಹ ಅಪ್ಲೋಡ್ ಮಾಡಬಹುದು. ಇಲ್ಲಿ ಹಲವು ಫಾರ್ಮ್ಯಾಟ್ ಗಳಲ್ಲಿ ನೀವು ವಿಡಿಯೋಗಳನ್ನು ಸಹ ಹಂಚಿಕೊಳ್ಳಬಹುದು. ಆದರೆ, ನಿಮ್ಮ ಅಥವಾ ಬೇರೊಬ್ಬರ ಫ್ಲೀಟ್ ಗಳನ್ನು ರೀಟ್ವೀಟ್ ಮಾಡಲು ಅವಕಾಶ ಕಲ್ಪಿಸಲಾಗಿಲ್ಲ. ನಿಮ್ಮನ್ನು ಅನುಸರಿಸುವವರಿಗೆ ಮಾತ್ರ ಈ ಫ್ಲೀಟ್ ಗಳು ಕಾಣಲಿವೆ. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ರೀತಿಯಲ್ಲೇ ಈ ಫ್ರೀಟ್ ಗಳು ನಿಮ್ಮ ಟ್ವಿಟ್ಟರ್ ಖಾತೆಯ ಮೇಲ್ಭಾಗದ ಟ್ಯಾಬ್ ನಲ್ಲಿ ಕಾಣಿಸಿಕೊಳ್ಳಲಿವೆ. ಸದ್ಯ ಕಂಪನಿ ತನ್ನ ಈ ವೈಶಿಷ್ಟ್ಯವನ್ನು ಬ್ರೆಜಿಲ್ ನಲ್ಲಿ ಪರೀಕ್ಷಿಸುತ್ತಿದ್ದು, ಬಳಿಕ ವಿಶ್ವಾದ್ಯಂತ ಇದನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿಕೊಂಡಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಬಳಕೆದಾರರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಷ್ಟೇ ಯಾಕೆ ಈ ಪ್ಲಾಟ್ಫಾರ್ಮ್ ಮೇಲೆ ಬಳಕೆದಾರರು ನಿರಂತರ ಹೊಸ ವೈಶಿಷ್ಟ್ಯಗಳಿಗಾಗಿ ಬೇಡಿಕೆಯನ್ನು ಇಡುತ್ತಲೇ ಇರುತ್ತಾರೆ.