ತ್ರಿಪುರಾದಲ್ಲಿ ತಲೆ ಎತ್ತಲಿದೆ ಅಂತರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾನಿಲಯ

ಅಂತರಾಷ್ಟ್ರೀಯ ಬೌದ್ಧ ಒಕ್ಕೂಟವು ಮಯನ್ಮಾರ್, ಥೈಲಾಂಡ್,ಕಾಂಬೋಡಿಯಾ,ಲಾವೋ,ಶ್ರೀಲಂಕಾದಲ್ಲಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ತ್ರಿಪುರಾದಲ್ಲಿ ಅಂತರಾಷ್ಟ್ರೀಯ ಬೌದ್ಧ ವಿವಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

Last Updated : Jan 6, 2019, 02:09 PM IST
ತ್ರಿಪುರಾದಲ್ಲಿ ತಲೆ ಎತ್ತಲಿದೆ ಅಂತರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾನಿಲಯ  title=
Photo courtesy: Pixabay(ಸಾಂದರ್ಭಿಕ ಚಿತ್ರ)

ನವದೆಹಲಿ: ಅಂತರಾಷ್ಟ್ರೀಯ ಬೌದ್ಧ ಒಕ್ಕೂಟವು ಮಯನ್ಮಾರ್, ಥೈಲಾಂಡ್,ಕಾಂಬೋಡಿಯಾ,ಲಾವೋ,ಶ್ರೀಲಂಕಾದಲ್ಲಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ತ್ರಿಪುರಾದಲ್ಲಿ ಅಂತರಾಷ್ಟ್ರೀಯ ಬೌದ್ಧ ವಿವಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

ಈಗ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂತರಾಷ್ಟ್ರೀಯ ಬೌದ್ಧ ಒಕ್ಕೂಟದ ಸೆಕ್ರಟರಿ ಜನರಲ್ ದಮ್ಮಪಿಯಾ ಕಳೆದ ವಾರ ಈ ಯೋಜನೆ ಕುರಿತಾಗಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ರೊಂದಿಗೆ ಚರ್ಚೆನಡೆಸಿದ್ದಾರೆ ಎಂದರು.

"ನಾನು ಮತ್ತು ಬೌದ್ಧ ಸಮುದಾಯಕ್ಕೆ ಸೇರಿದ ಪ್ರತಿನಿಧಿಗಳು ಕಳೆದ ವಾರ ತ್ರಿಪುರಾ ಸಚಿವಾಲಯದಲ್ಲಿ ಸಿಎಂ ಬಿಪ್ಲಬ್ ದೇವ್ ರನ್ನು ಭೇಟಿ ಮಾಡಿದ್ದೇವೆ.ಅವರು ಈ ಯೋಜನೆ ಕುರಿತಾಗಿ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ" ಎಂದರು 

ಧಮ್ಮಪಿಯಾ ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಧಮ್ಮ ದೀಪ ಫೌಂಡೆಶನ್ ನ್ನು ಸ್ಥಾಪನೆ ಮಾಡಿದ್ದಾರೆ.ಕಳೆದ ಡಿಸೆಂಬರ್ 2017 ರಿಂದ ಅಂತರಾಷ್ಟ್ರೀಯ ಬೌದ್ಧ ಒಕ್ಕೂಟದ ನೇತೃತ್ವವನ್ನು ವಹಿಸಿದ್ದಾರೆ.

Trending News