ತ್ರಿಪುರಾದಲ್ಲಿ ಅಧಿಕಾರಿಗಳಿನ್ನು ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ!

  

Last Updated : Aug 28, 2018, 02:03 PM IST
ತ್ರಿಪುರಾದಲ್ಲಿ ಅಧಿಕಾರಿಗಳಿನ್ನು ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ!  title=

ಅಗರ್ತಲಾ: ಇನ್ನು ಮುಂದೆ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುವಾಗ ಜೀನ್ಸ್ ಮತ್ತು ಕಾರ್ಗೋ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ ಎಂದು ತ್ರಿಪುರಾ ಸರ್ಕಾರ ನಿಯಮವೊಂದನ್ನು ಜಾರಿಗೆ ತರಲು ಹೊರಟಿದೆ.

ಇದೆ ಆಗಸ್ಟ್ 20 ರಂದು ಕಂದಾಯ, ಶಿಕ್ಷಣ ಮತ್ತು ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಸುಶೀಲ್ ಕುಮಾರ್ ಅವರು ನೀಡಿದ ಪತ್ರವೊಂದರಲ್ಲಿ "ಜಿಲ್ಲೆಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಮುಖ್ಯಸ್ಥರಾಗಿರುವ ಎಡಿಎಂಗಳು ರಾಜ್ಯ ಮಟ್ಟದ ಅಧಿಕೃತ ಸಭೆಯಲ್ಲಿ / ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಇತರ ಉನ್ನತ ಮಟ್ಟದ ಸಭೆಗಳಲ್ಲಿ  ಅಧಿಕಾರಿಗಳು ಡ್ರೆಸ್ ಕೋಡ್ ನಿಯಮದಂತೆ ನಡೆಯಬೇಕೆಂದು ನಿಯಮ ಹೊರಡಿಸಲಾಗಿದೆ. 

ಕೆಲವು ಅಧಿಕಾರಿಗಳು ಸಭೆಗಳಲ್ಲಿ ತಮ್ಮ ಮೊಬೈಲ್ ಫೋನ್ನಲ್ಲಿ ಮೆಸೇಜ್ ಗಳನ್ನು ಓದುವುದು  ಮತ್ತು ಕಳುಹಿಸುವುದು ಅಗೌರವದ ಸಂಕೇತವಾಗಿದೆ.ಇದೇ ರೀತಿ ಮಧ್ಯಪ್ರದೇಶ ಸರ್ಕಾರವು ಅಕ್ಟೋಬರ್ 2015 ರಲ್ಲಿ, ಸಲಹೆಯನ್ನು ನೀಡಿತ್ತು ,ಆಫೀಸ್ ಕೆಲಸದ ವೇಳೆ  ಜೀನ್ಸ್ ಮತ್ತು ಸನ್ಗ್ಲಾಸ್ ಧರಿಸದಂತೆ ತನ್ನ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

Trending News