ವಿಚ್ಛೇದಿತ ಮಹಿಳೆಯರಿಗೆ ಸರ್ಕಾರದ ಸಹಾಯ ಹಸ್ತ!

ಮಾಹಿತಿಯ ಪ್ರಕಾರ, ಮಹಿಳೆಯರು ಲಾಭ ಪಡೆಯಲು ಎಫ್‌ಐಆರ್ ಮತ್ತು ನ್ಯಾಯಾಲಯದ ಪ್ರಕರಣದ ಪುರಾವೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

Last Updated : Dec 28, 2019, 02:47 PM IST
ವಿಚ್ಛೇದಿತ ಮಹಿಳೆಯರಿಗೆ ಸರ್ಕಾರದ ಸಹಾಯ ಹಸ್ತ! title=
Photo Courtesy: DNA

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ (ಡಿಸೆಂಬರ್ 27) ತ್ರಿಪಲ್ ತಲಾಖ್ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವವರೆಗೆ ವಾರ್ಷಿಕ 6,000 ರೂ.ಗಳ ನೆರವು ಘೋಷಿಸಿದ್ದಾರೆ ಮತ್ತು ಅವರಿಗೆ ರಾಜ್ಯ ಸರ್ಕಾರದಿಂದ ಉಚಿತ ಕಾನೂನು ನೆರವು ಸಹ ಸಿಗಲಿದೆ ಎಂದು ಹೇಳಿದರು. ಗಂಡನಿಂದ ಬೇರ್ಪಟ್ಟ ಅಥವಾ ಬಿಟ್ಟುಹೋದ ಇತರ ಎಲ್ಲ ಮಹಿಳೆಯರಿಗೆ ರಾಜ್ಯ ಸರ್ಕಾರವು ಹಣಕಾಸಿನ ನೆರವು ನೀಡುತ್ತದೆ. 2020 ರಿಂದ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದ ಈ ಸೌಲಭ್ಯ ದೊರೆಯಲಿದೆ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆಯರು ಸರ್ಕಾರದ ಈ ಲಾಭ ಪಡೆಯಲು ಎಫ್‌ಐಆರ್ ಮತ್ತು ನ್ಯಾಯಾಲಯದ ಪ್ರಕರಣದ ಪುರಾವೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಯುಪಿ ಸರ್ಕಾರದ ಈ ಯೋಜನೆಯಡಿ 5,000 ತ್ರಿಪಲ್ ತಲಾಖ್ ಸಂತ್ರಸ್ತರು ಸೇರಿದಂತೆ ಸುಮಾರು 10,000 ಮಹಿಳೆಯರು ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯಡಿ ಇತರ ಧರ್ಮದ ವಿಚ್ಛೇದಿತ ಮಹಿಳೆಯರಿಗೂ ಲಾಭ ಸಿಗಲಿದೆ ಎಂದು ವರದಿಗಳು ತಿಳಿಸಿವೆ.

ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ರಾಜ್ಯದಲ್ಲಿ ತ್ರಿಪಲ್ ತಲಾಖ್ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ವಿಚ್ಛೇದಿತ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಲಾಗುವುದು, ಅದರ ಅಡಿಯಲ್ಲಿ ತ್ರಿಪಲ್ ತಲಾಖ್‌ಗೆ ಬಲಿಯಾದವರನ್ನು ಮತ್ತು ಗಂಡನಿಂದ ಕೈಬಿಡಲ್ಪಟ್ಟವರನ್ನು ಗುರುತಿಸಲಾಗುವುದು. ಮಹಿಳೆಯರಿಗೆ ನ್ಯಾಯ ದೊರೆಯುವವರೆಗೂ ಅವರಿಗೆ ಹಣಕಾಸು ಒದಗಿಸಲಾಗುವುದು. ಸರ್ಕಾರ ವಾರ್ಷಿಕ 6,000 ರೂ. ಆರ್ಥಿಕ ಸಹಾಯವನ್ನು ಒದಗಿಸುವ ಯೋಜನೆ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದರು.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತ್ರಿಪಲ್ ತಲಾಖ್ ಅನ್ನು ನಿಷೇಧಿಸುವುದಾಗಿ ಭಾರತೀಯ ಜನತಾ ಪಕ್ಷ ಭರವಸೆ ನೀಡಿತ್ತು ಮತ್ತು ನಂತರ ಸಂಸತ್ತಿನಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಸುಪ್ರೀಂ ಕೋರ್ಟ್ 2017 ರಲ್ಲಿ ತ್ರಿಪಲ್ ತಲಾಖ್ ಅನ್ನು ಅಸಂವಿಧಾನಿಕಗೊಳಿಸಿತ್ತು. ಈ ಕಾನೂನು 2019 ರ ಆಗಸ್ಟ್ 1 ರಿಂದ ಜಾರಿಗೆ ಬಂದಿತು.

ಹೊಸ ಕಾನೂನು ತ್ರಿಪಲ್ ತಲಾಖ್ ಅನ್ನು ಕಾನೂನುಬಾಹಿರ ಎಂದು ಅನೂರ್ಜಿತಗೊಳಿಸುತ್ತದೆ.  ಜೊತೆಗೆ ಈ ಪದ್ದತಿಯನ್ನು ಮುಂದುವರಿಸುತ್ತಿರುವ ವ್ಯಕ್ತಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಾನೂನು ಮುಸ್ಲಿಂ ಮಹಿಳೆಗೆ ತನ್ನ ಗಂಡನಿಂದ ತನಗಾಗಿ ಮತ್ತು ಅವಳ ಅವಲಂಬಿತ ಮಕ್ಕಳಿಗೆ ಜೀವನಾಧಾರ ಭತ್ಯೆ ಪಡೆಯಲು ಅರ್ಹತೆಯನ್ನು ನೀಡುತ್ತದೆ.

Trending News