Viral Video: ಪ್ರಿಯಕರನನ್ನು ಕಂಡು ಕಂಟ್ರೋಲ್ ತಪ್ಪಿದ ವಧು, ಪತಿಯ ಮುಂದೆಯೇ ಮಾಡಿದ್ಲು ಈ ಕೆಲ್ಸಾ !

Dulhan Lover Video: ವಧುವಿನ ಜೊತೆ ಡ್ಯಾನ್ಸ್ ಮಾಡುತ್ತಿರುವ ಯುವಕ ಆಕೆಯ ಪ್ರಿಯಕರ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದೇ ಕಾರಣದಿಂದ ನೆರೆದ ಎಲ್ಲರೂ ಕೂಡ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಾರೆ. ಆದರೆ, 'ತುಜ್ಕೊ ಹಿ ದುಲ್ಹಾ ಬನೌಂಗಿ' ಹಾಡು ಡಿಜೆಯಲ್ಲಿ ಪ್ಲೇ ಆಗಲು ಆರಂಭವಾಗುತ್ತಿದ್ದಂತೆ, ವಧು ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ತನ್ನ ಪ್ರಿಯಕರನನ್ನು ತಬ್ಬಿಕೊಂಡು ನೃತ್ಯ ಮಾಡಲು ಶುರುಮಾಡುತ್ತಾಳೆ.  

Written by - Nitin Tabib | Last Updated : Dec 18, 2022, 05:30 PM IST
  • ಪ್ರಸ್ತುತ ಈ ವೀಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ತಿಳಿದಿಲ್ಲ,
  • ಅಷ್ಟೇ ಅಲ್ಲ ಈ ವಿಡಿಯೋದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಕೂಡ ಗೊತ್ತಿಲ್ಲ.
  • ಒಂದು ಸಂಗತಿ ಮಾತ್ರ ನಿಜ.. ಅದೇನೆಂದರೆ ಮೂರು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ.
Viral Video: ಪ್ರಿಯಕರನನ್ನು ಕಂಡು ಕಂಟ್ರೋಲ್ ತಪ್ಪಿದ ವಧು, ಪತಿಯ ಮುಂದೆಯೇ ಮಾಡಿದ್ಲು ಈ ಕೆಲ್ಸಾ ! title=
Viral Video

Todays Trending Video: ಹಲವು ಬಾರಿ ಮದುವೆ ಸಮಾರಂಭಗಳಲ್ಲಿ ನಡೆಯುವ ಕೆಲ ಘಟನೆಗಳು ನಮ್ಮ ಊಹೆಗೂ ಕೂಡ ಮೀರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ವಿಡಿಯೋ ವಧು ಮತ್ತು ಆಕೆಯ ಪ್ರಿಯಕರನ ವಿಡಿಯೋ ಆಗಿದೆ. ವಧುವಿನ ವರ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೋ ನೋಡಿದರೆ ನೀವೂ ಕೂಡ ಒಂದು ಕ್ಷಣ ಶಾಕ್ ಆಗುವಿರಿ. ಏಕೆಂದರೆ, ಕುಟುಂಬ ಸದಸ್ಯರು ಹಾಗೂ ಪತಿಯ ಎದುರೆ ವಧು ಯಾವ ರೀತಿ ತನ್ನ ಪ್ರಿಯಕರನಿಗೆ ಆಂಟಿಕೊಂಡಿದ್ದಾಳೆ ಎಂದರೆ, ಅವರನ್ನು ಬೇರ್ಪಡಿಸಲು ಹರಸಾಹಸವೇ ಪಡಬೇಕಾದ ಸ್ಥಿತಿ ಬಂದೊದಗಿದೆ.

ಇದನ್ನೂ ಓದಿ-Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?

ವಿಡಿಯೋ ನೋಡಿ ಮಜಾ ಬರುತ್ತೆ
ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಒಂದೆಡೆ ಶಾಕ್ ಆಗಿದ್ದರೆ. ಮತ್ತೊಂದೆಡೆ, ಅವರು ತುಂಬಾ ಮಜಾ ಮಾಡುತ್ತಿದ್ದಾರೆ. ಮದುವೆಯಲ್ಲಿ ಡ್ಯಾನ್ಸ್ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಧು ಮತ್ತು ಅವಳ ಪ್ರೇಮಿ ನೃತ್ಯ ಮಾಡುತ್ತಿರುವಾಗ ವರನು ಒಂದು ಬದಿಯಲ್ಲಿ ಸುಮ್ಮನೆ ನಿಂತಿದ್ದಾನೆ. ಮೊದಮೊದಲು ವಧುವಿನ ಜೊತೆ ಡ್ಯಾನ್ಸ್ ಮಾಡುತ್ತಿರುವ ಯುವಕ ಆಕೆಯ ಪ್ರಿಯಕರ ಎಂಬುದು ಜನರಿಗೆ ತಿಳಿದಿರಲಿಲ್ಲ. ಇದೇ ಕಾರಣದಿಂದ ಎಲ್ಲರೂ ಕೂಡ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಾರೆ. ಆದರೆ, 'ತುಜ್ಕೊ ಹಿ ದುಲ್ಹಾ ಬನೌಂಗಿ' ಹಾಡು ಡಿಜೆಯಲ್ಲಿ ಪ್ಲೇ ಆಗಲು ಪ್ರಾರಂಭಿಸಿದಾಗ, ವಧು ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾಳೆ ಮತ್ತು ತನ್ನ ಪ್ರೇಮಿಯನ್ನು ತಬ್ಬಿಕೊಳ್ಳುತ್ತಾ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಯಾವುದಕ್ಕೂ ಮೊದಲು ವಿಡಿಯೋ ನೋಡಿ..

ಇದನ್ನೂ ಓದಿ-Viral Video: ನಾಯಿಗಳಿಂದ ಮಗುವಿನ ಪ್ರಾಣ ರಕ್ಷಿಸುತ್ತಿರುವ ತಾಯಿ ಕೋತಿ, ವಿಡಿಯೋ ತಯಾರಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

ಸೋನು ನಿಗಮ್ ಮತ್ತು ಅಲ್ಕಾ ಯಾಗ್ನಿಕ್ ಹಾಡಿರುವ ಈ ಹಾಡಿನಲ್ಲಿ ವಧು ತನ್ನ ಪ್ರಿಯಕರನನ್ನು ತಬ್ಬಿಕೊಂಡ ತಕ್ಷಣ, ಮನೆಯವರು ಇಬ್ಬರನ್ನೂ ದೂರ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಸಾಕಷ್ಟು ಪ್ರಯತ್ನಗಳ ನಂತರವೂ ವಧುವನ್ನು ತನ್ನ ಪ್ರೇಮಿಯಿಂದ ಬೇರ್ಪಡಿಸಲು ಜನರಿಗೆ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, ವರ ತುಂಬಾ ಕೋಪಗೊಂಡು, ಅವನು ಅಲ್ಲಿಂದ ಹೊರಟು ಹೋಗುತ್ತಾನೆ. @JaikyYadav16 ಹೆಸರಿನ ಟ್ವಿಟರ್ ಖಾತೆಯ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರಸ್ತುತ ಈ ವೀಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ತಿಳಿದಿಲ್ಲ, ಅಷ್ಟೇ ಅಲ್ಲ ಈ ವಿಡಿಯೋದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಕೂಡ ಗೊತ್ತಿಲ್ಲ. ಒಂದು ಸಂಗತಿ ಮಾತ್ರ ನಿಜ.. ಅದೇನೆಂದರೆ ಮೂರು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News