ಶೀಘ್ರದಲ್ಲಿಯೇ Train-Bus ಸೇವೆ ಪುನಾರಂಭ, ಸಂಕೇತ ನೀಡಿದ ಕೇಂದ್ರ ಸಚಿವ ಗಡ್ಕರಿ

ದೇಶದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಕೇತ ನೀಡಿದ್ದಾರೆ. ಕೊರೊನಾವೈರಸ್‌ನಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.

Last Updated : May 7, 2020, 12:58 PM IST
ಶೀಘ್ರದಲ್ಲಿಯೇ Train-Bus ಸೇವೆ ಪುನಾರಂಭ, ಸಂಕೇತ ನೀಡಿದ ಕೇಂದ್ರ ಸಚಿವ ಗಡ್ಕರಿ title=

ನವದೆಹಲಿ: ಲಾಕ್ ಡೌನ್ 3.0 ಮಧ್ಯೆಯೇ ನೆಮ್ಮದಿಯ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು,  ದೇಶದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಕೇತ ನೀಡಿದ್ದಾರೆ. ಕೊರೊನಾವೈರಸ್‌ನಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ಸದ್ಯ ದೇಶಾದ್ಯಂತ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಮಾತನಾಡಿರುವ ಗಡ್ಕರಿ, ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತಬಾಗಿ ಬಳಸಿಕೊಳ್ಳುವ ಬಗ್ಗೆ ತಮ್ಮ ಸರ್ಕಾರ ಮಾರ್ಗಸೂಚಿಗಳನ್ನು ರೂಪ್ಸುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾರಿಗೆ ಸೇವೆಗಳು ಮತ್ತು ಹೆದ್ದಾರಿಗಳನ್ನು ತೆರೆಯುವುದು ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಲು ನೆರವು ನೀಡಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಆದರೆ ಈ ಉಪಾಯಗಳನ್ನು ಅನುಸರಿಸಬೇಕು
ಇದೇ ವೇಳೆ ಬಸ್ ಗಳನ್ನೂ ಅಥವಾ ಕಾರುಗಳನ್ನು ಬಳಸಲು ಜನರು ಎಲ್ಲ ಸುರಕ್ಷತೆಯ ಉಪಾಯಗಳನ್ನು ಅನುಸರಿಸಬೇಕಾಗಲಿದೆ. ಉದಾಹರಣೆಗೆ ಕೈತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಫೇಸ್ ಮಾಸ್ಕ್ ಧರಿಸುವುದು ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ ಎಂದು ಗಡ್ಕರಿ ಹೇಳಿದ್ದಾರೆ.

ಆರ್ಥಿಕತೆಯ ಕುರಿತು ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಉದ್ಯಮದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ತಿಳಿದಿದೆ ಎಂದು ಗಡ್ಕರಿ ಹೇಳಿದ್ದಾರೆ, ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ತನ್ನ ಸಂಪೂರ್ಣ ಬೆಂಬಲ ನೀಡಲಿದೆ. ತಾವೇ ಸ್ವತಃ ಪ್ರಧಾನಿ ನರೇಂದ್ರ ಮೋದಿ (ಪಿಎಂ ನರೇಂದ್ರ ಮೋದಿ) ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (ಎಫ್ಎಂ ನಿರ್ಮಲಾ ಸೀತಾರಾಮನ್) ಅವರೊಂದಿಗೆ ನಿರಂತರವಾಗಿ ನೇರ ಸಂಪರ್ಕದಲ್ಲಿರುವುದಾಗಿ ಗಡ್ಕರಿ ಹೇಳಿದ್ದಾರೆ. ಕೋವಿಡ್ -19 ಪ್ರಕೋಪದ ಹಿನ್ನೆಲೆ ಉದ್ಭವಿಸಿರುವ ಸಂಕಷ್ಟದ ಸಮಯದಲ್ಲಿ ಆರ್ಥಿಕತೆಯನ್ನು ಬಿಕ್ಕಟ್ಟಿನಿಂದ ಪಾರುಮಾಡಲು ಪ್ರಧಾನಿ ಹಾಗೂ ಹಣಕಾಸು ಸಚಿವರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.

Trending News