Tomato Wholesale Prices: ಪ್ರತಿ ಕೆಜಿ ಟೊಮೆಟೊಗೆ 30 ಪೈಸೆ , ರೈತರ ಅಳಲು

ಟೊಮೆಟೊದ ಸಗಟು ಬೆಲೆ 30 ಪೈಸೆಗೆ ಕುಸಿದ ನಂತರ ರಾಯಲಸೀಮಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯ ಆಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ನಮ್ಮ ಬೆಳೆ ಒಂದು ಪೈಸೆಯ ವೆಚ್ಚದಲ್ಲಿ ಮಾರಾಟವಾದರೆ ನಮ್ಮ ಗತಿ ಏನು  ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

Written by - Yashaswini V | Last Updated : Dec 26, 2020, 02:10 PM IST
  • ಎಪಿಎಂಸಿ ಮಾರುಕಟ್ಟೆಯ ಆಡಳಿತದ ವಿರುದ್ಧ ರೈತರ ಪ್ರತಿಭಟನೆ
  • ಟೊಮೆಟೊ ಬೆಲೆ ಕುಸಿತದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು
  • ಟೊಮೆಟೊ ಬೆಲೆ ಕುಸಿತಕ್ಕೆ ಮಂಡಿ ಆಡಳಿತದ ಸ್ಪಷ್ಟನೆ
Tomato Wholesale Prices: ಪ್ರತಿ ಕೆಜಿ ಟೊಮೆಟೊಗೆ  30 ಪೈಸೆ , ರೈತರ ಅಳಲು title=
Tomato Wholesale Prices (Image courtesy: PTI)

ರಾಯಲಸೀಮಾ: ಒಂದು ಕಡೆ ನೂತನ ಕೃಷಿ ಕಾನೂನುಗಳ ವಿರುದ್ಧ ಕಳೆದ ಹಲವು ದಿನಗಳಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಸಹಾಯ ಮಾಡಲು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ  (PM Kisan Samman Nidhi Yojana) ಯ 7 ನೇ ಕಂತು ಬಿಡುಗಡೆ ಮಾಡಿದರು. ಈ ವೇಳೆ ಹೊಸ ಕೃಷಿ ಕಾನೂನು ರೈತರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಲು ಯತ್ನಿಸಿದರು. ಏತನ್ಮಧ್ಯೆ ಮತ್ತೊಂದೆಡೆ ಆಂಧ್ರಪ್ರದೇಶದ ರಾಯಲಸೀಮಾ ಮಂಡಿಯಲ್ಲಿ ಟೊಮೆಟೊದ ಸಗಟು ಬೆಲೆ ಪ್ರತಿ ಕೆ.ಜಿ.ಗೆ 30 ಪೈಸೆ ಕುಸಿಯಿತು, ಇದರಿಂದಾಗಿ ರೈತರು ಆತಂಕಕ್ಕೊಳಗಾಗಿದ್ದಾರೆ.

ಆಂಧ್ರಪ್ರದೇಶದ ರೈತರು (Farmers) ಟೊಮೆಟೊವನ್ನು ಇಂದು ಸಗಟು ಬೆಲೆಯಲ್ಲಿ 30 ಪೈಸೆಗೆ ಮಾರಾಟ ಮಾಡಿದ್ದಾರೆ. ಟೊಮೆಟೊಗಳು ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಕೆಜಿಗೆ 30-40 ರೂಪಾಯಿ ದರದಲ್ಲಿ ಮಾರಾಟವಾಗುತ್ತವೆ. ಆದರೆ ಸಗಟು ವ್ಯಾಪಾರದಲ್ಲಿ ರೈತರು 1 ಕೆಜಿ ಟೊಮೆಟೊ ಮಾರಾಟ ಮಾಡಲು ಕೇವಲ 30-70 ಪೈಸೆ ಪಡೆಯುತ್ತಿದ್ದಾರೆ.

ಟೊಮೆಟೊದ ಸಗಟು ಬೆಲೆ 30 ಪೈಸೆಗಿಂತ ಕಡಿಮೆಯಾದ ನಂತರ ರಾಯಲಸೀಮಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (APMC) ಮಾರುಕಟ್ಟೆಯ ಆಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ನಮ್ಮ ಬೆಳೆ ಒಂದು ಪೈಸೆಯ ವೆಚ್ಚದಲ್ಲಿ ಮಾರಾಟವಾದರೆ ನಮ್ಮ ಗತಿ ಏನು  ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: PM Kisan Update: ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಟೊಮೆಟೊವನ್ನು ಚಿಲ್ಲರೆ ವ್ಯಾಪಾರದಲ್ಲಿ 30-40 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ  ಮಾರುಕಟ್ಟೆಯಲ್ಲಿ ರೈತರಿಗೆ ಪ್ರತಿ ಕೆಜಿ ಟೊಮೇಟೊಗೆ ಸಿಗುತ್ತಿರುವುದು ಕೇವಲ 30 ಪೈಸೆ ಮಾತ್ರ. ನಾವು ಬೆಳೆ ಬೆಳೆಯಲು ಖರ್ಚು ಮಾಡಿದ ಹಣವನ್ನೂ ಸಹ ಪಡೆಯುತ್ತಿಲ್ಲ. ಹೀಗೆ ಆದರೆ ಮುಂದಿನ ದಿನಗಳಲ್ಲಿ ರೈತರ ಬದುಕು ಇನ್ನೂ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತಮ ಬೆಳೆ ಬೆಳೆಯಲು ಕೀಟನಾಶಕಗಳಿಗಾಗಿ ಎಕರೆಗೆ ಮೂವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದ್ದೇನೆ. ಅಲ್ಲದೆ ಟೊಮೇಟೊ (Tomato) ವನ್ನು ಬೆಳೆದು, ಅದನ್ನು ಮಾರುಕಟ್ಟೆಗೆ ತರುವವರೆಗೆ ಹಲವು ರೀತಿಯ ಖರ್ಚನ್ನು ಭರಿಸುತ್ತೇವೆ. ಆದರೆ ಇಷ್ಟು ಕಡಿಮೆ ಬೆಲೆಗೆ ಮಾರಾಟವಾದರೆ ನಾವು ಖರ್ಚು ಮಾಡಿದ ಹಣವೂ ನಮಗೆ ವಾಪಸ್ ಬರುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪರೋಕ್ಷ ಸಂದೇಶ ರವಾನಿಸುವ ಬದಲು ಪ್ರಧಾನಿ ಮೋದಿ ನೇರವಾಗಿ ರೈತರೊಂದಿಗೆ ಮಾತನಾಡಲಿ: ಎಚ್ ಡಿಕೆ

ಟೊಮೆಟೊ ಬೆಲೆ ಕುಸಿತಕ್ಕೆ ಮಂಡಿ ಆಡಳಿತದ ಸ್ಪಷ್ಟನೆ:
ಟೊಮೆಟೊದ ಸಗಟು ಬೆಲೆ ಕುಸಿತದ ಬಗ್ಗೆ ರಾಯಲಸೀಮಾ ಮಂಡಿ ಆಡಳಿತವು ಗುರುವಾರ ಸುಮಾರು 150 ಟನ್ ಟೊಮೆಟೊಗಳು ಇದ್ದಕ್ಕಿದ್ದಂತೆ ಮಾರುಕಟ್ಟೆಗೆ ಬಂದವು, ಇದರಿಂದಾಗಿ ಟೊಮೆಟೊದ ಸಗಟು ಬೆಲೆ ಕುಸಿಯಿತು. ಭಾರತದಲ್ಲಿ ತರಕಾರಿಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೌಲಭ್ಯವಿಲ್ಲ ಎಂದು ವಿವರಿಸಿದ್ದಾರೆ. ಎಂಎಸ್ಪಿಯಲ್ಲಿ ರೈತರು ಕೇವಲ 23 ಬೆಳೆಗಳನ್ನು ಮಾತ್ರ ಮಾರಾಟ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News