ಪಾಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನ್ನು ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವಾರ ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತಮ್ಮ ವೃತ್ತಿಜೀವನದ ಬದಲಾವಣೆಯ ಬಗ್ಗೆ ಪ್ರಶಾಂತ್ ಕಿಶೋರ್ ಮಾತನಾಡಿದ್ದರು. ಆಗ ಅವರು ವ್ಯಕ್ತಿಗಳಿಗಾಗಿ ಮಾಡಿದ ಚುನಾವಣಾ ಪ್ರಚಾರವು ಸಾಕಾಗಿದೆ ಈಗ ತಾವು ಚುನಾವಣಾ ರಾಜಕೀಯ ಸಿದ್ದ ಎಂದು ತಿಳಿಸಿದ್ದರು.
ಸುಮಾರು ಆರು ವರ್ಷಗಳ ಕಾಲ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ರಣನೀತಿ ರೂಪಿಸುವುವಲ್ಲಿ ನೆರವಾಗಿದ್ದರು. ಅನಂತರ ಅವರ ವಿರೋಧ ಪಕ್ಷಗಳಿಗೆ ಕೂಡ ಚುನಾವಣಾ ರಣನೀತಿಯನ್ನು ರೂಪಿಸಿದ್ದರು. ಕಿಶೋರ್ ಅವರ ರಾಜಕೀಯ ಮಾರ್ಗದರ್ಶಕರಾದ ನಿತೀಶ್ ಕುಮಾರ್ ಅವರು 2015ರಲ್ಲಿ ಅವರೊಂದಿಗೆ ತಂಗಿದ್ದಾಗ ಕಿಶೋರ್ ಕುಮಾರ್ ಅವರಿಗೆ ಜೀನ್ಸ್ ನಿಂದ ನೇತಾ ಡ್ರೆಸ್ ಗೆ ಬದಲಿಸಬೇಕೆಂದು ಅವರು ಸಲಹೆ ನೀಡಿದ್ದರು.
ರಾಜಕೀಯ ವಲಯಗಳಲ್ಲಿ,ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಕುಮಾರ್ ಅವರ ಚಾಣಕ್ಯ ಎಂದು ಕರೆಯಲಾಗುತ್ತದೆ. 2012 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಿಶೋರ್, ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡುತ್ತಾ, ನಂತರ 2014 ರ ಲೋಕಸಭೆ ಚುನಾವಣೆಗೆ ಪ್ರಚಾರದ ಯೋಜನೆಯನ್ನು ರೂಪಿಸಿದರು. ಆದರೆ ಚುನಾವಣೆ ನಂತರ, ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಮತ್ತು ಶ್ರೀ ಕಿಶೋರ್ ನಡುವಿನ ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದಾಗಿ ಮುಂದಿನ ಕೆಲವು ವರ್ಷಗಳಲ್ಲಿ, ಕಿಶೋರ್ ಅವರು ಬಿಜೆಪಿಯ ರಾಜಕೀಯ ಎದುರಾಳಿಗಳ ಪರ ಕೆಲಸ ಮಾಡಿದರು.