ಗೋರಖ್ಪುರ್: ಭಾರತದಲ್ಲಿ ಆಟೋದಲ್ಲಿ ಪ್ರಯಾಣ ಮಾಡುವುದಕ್ಕಿಂತಲೂ ವಿಮಾನಯಾನ ಅಗ್ಗ ಎಂದು ಕೇಂದ್ರ ಸಚಿವರೊಬ್ಬರು ತಿಳಿಸಿದ್ದಾರೆ. ನೀವು ಇದನ್ನು ನಂಬದೆ ಇರಬಹುದು, ಆದರೆ ಇದನ್ನು ಖಚಿತಪಡಿಸಲು ಸಚಿವರು ತಮ್ಮ ಸ್ವಂತ ಲೆಕ್ಕಾಚಾರವನ್ನು ನೀಡಿದ್ದಾರೆ. ವಾಸ್ತವವಾಗಿ, ದೇಶದ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಸೋಮವಾರ , ದೇಶದಲ್ಲಿ ವಿಮಾನ ಪ್ರಯಾಣವು ಆಟೋ ರಿಕ್ಷಾ ಪ್ರಯಾಣಕ್ಕಿಂತ ಅಗ್ಗವಾಗಿದೆ ಎಂದು ಹೇಳಿದ್ದಾರೆ.
Today airfare is less than that of an auto-rickshaw. You'll ask how is that possible? When two people take an auto-rickshaw they pay fare of Rs 10 which means they're charged Rs 5/km but when you go by air you are charged Rs 4/km: Jayant Sinha, MoS Civil Aviation (03.09.2018) pic.twitter.com/orbwOvdDLJ
— ANI UP (@ANINewsUP) September 4, 2018
ಸೋಮವಾರ ಗೋರಖ್ಪುರ್ ವಿಮಾನನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ, "ಪ್ರಸ್ತುತ ವಿಮಾನ ಪ್ರಯಾಣವು ಆಟೋ ರಿಕ್ಷಾ ಪ್ರಯಾಣಕ್ಕಿಂತ ಅಗ್ಗವಾಗಿದೆ. ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು, ಇಬ್ಬರು ಆಟೋದಲ್ಲಿ ಪ್ರಯಾಣಿಸುವಾಗ ಅವರು 10 ರೂ. ಬಾಡಿಗೆ ಪಾವತಿಸುತ್ತಾರೆ. ಇದರರ್ಥ ಅವರು ಒಂದು ಕಿ.ಮೀ ಪ್ರಯಾಣದ ದರವನ್ನು 5 ರೂಪಾಯಿಗಳಷ್ಟು ಪಾವತಿಸಬೇಕಾಗುತ್ತದೆ. ಆದರೆ ಆಟೋ ಬದಲಿಗೆ ವಿಮಾನದಿಂದ ನೀವು ಪ್ರಯಾಣಿಸುವಾಗ, 1 ಕಿ.ಮೀ ಪ್ರಯಾಣಕ್ಕಾಗಿ ನೀವು ಕೇವಲ 4 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ" ಎಂದರು. ಸಿನ್ಹಾರವರ ಈ ಲೆಕ್ಕಾಚಾರದ ಪ್ರಕಾರ, ಆಟೋ ರಿಕ್ಷಾದ ಪ್ರಯಾಣದ ದರಕ್ಕಿಂತಲೂ ವಿಮಾನ ಪ್ರಯಾಣ ಅಗ್ಗವಾಗಿದೆ.
ಗೋರಖ್ಪುರ್ ವಿಮಾನನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಜಯಂತ್ ಸಿನ್ಹಾ, ನಮ್ಮ ದೇಶದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಮಹಾಕ್ರಾಂತಿ ನಡೆಯುತ್ತಿದೆ. ರಾಂಚಿಯಲ್ಲಿ 30 ವಿಮಾನಗಳು ಹಾರಾಟ ನಡೆಸುತ್ತಿವೆ. ಈ ಕ್ರಾಂತಿಯು ಉತ್ತರ ಪ್ರದೇಶದಲ್ಲಿ ಶೀಘ್ರವಾಗಿ ಹರಡುತ್ತಿದೆ. ಇಂದು, ಮತ್ತೊಂದು ಫ್ಲೈಟ್ ಹಾರಾಟಕ್ಕೆ ಹಸಿರು ನಿಶಾನೆ ತೋರಲಾಗಿದೆ ಎಂದರು.